ಬೀಗ ಹಾಕಿದ್ದ ಹೋಟೆಲ್ ಕಳ್ಳತನ: ರೆಡ್ ಹ್ಯಾಂಡ್ ಆಗಿ ಸಿಕ್ಕ ಕಳ್ಳರು, ಕದ್ದ ವಸ್ತು ಖರೀದಿಗೆ ಬಂದವನೂ ಸೇರಿ 3 ಬಂಧನ, 10 ಲಕ್ಷ ರೂ ಮೌಲ್ಯದ ವಸ್ತು ನಾಪತ್ತೆ!
ಬೆಂಗಳೂರು: ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬೀಗ ಹಾಕಿರುವ ಹೊಟೇಲ್‌ನಿಂದ ವಸ್ತುಗಳನ್ನು ಕದಿಯುತ್ತಿದ್ದ ಆರು ಮಂದಿಯ ಗ್ಯಾಂಗ್‌ನ ಪೈಕಿ ಮೂವರು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಹೊಟೆಲ್ ನೆರೆಹೊರೆಯವರ ಕೈಗೆ ಸಿಕ್ಕಿಬಿದ್ದ ಕಳ್ಳರು ಹೊಟೆಲ್ ಒಳಗೆ ನುಗ್ಗಿ ಬೀಗ ಹಾಕಿ ಕಳ್ಳತನ ಮಾಡುತ್ತಿದ್ದರು ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಲೇ ಸ್ಥಳೀಯರು ಮಾಯಗಾನಹಳ್ಳಿಯ ಬ್ಲೂ ಮೂನ್ ಹೋಟೆಲ್‌ಗಾಗಿ ತಮ್ಮ ಜಾಗವನ್ನು ಹೋಟೆಲ್‌ಗೆ ಬಾಡಿಗೆಗೆ ಪಡೆದಿದ್ದ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಹೊಟೆಲ್ ಗೆ ಬೀಗ ಹಾಕಿ ಕಳ್ಳರನ್ನು ಸ್ಥಳೀಯರು ಹಿಡಿದಿದ್ದು, ಇತರೆ ಮೂರು ಕಳ್ಳರು ತಲೆಮರೆಸಿಕೊಂಡಿದ್ದಾರೆ.
ಇದನ್ನೂ ಓದಿ: ಕೋಲಾರದ ಮುಳಗಾಗಿಲು ಬಳಿ ಖಾಸಗಿ ಬಸ್ ಅಪಘಾತ: ದಂಪತಿ ಸಾವು
ಈ ಮುಚ್ಚಲ್ಪಟ್ಟಿದ್ದ ಹೊಟೆಲ್ ನಿಂದ ಸುಮಾರು 10 ಲಕ್ಷ ರೂ ಮೌಲ್ಯದ ಅಡುಗೆ ಸಾಮಗ್ರಿಗಳು, ಹುಕ್ಕಾ ಬೆಂಚ್‌ಗಳು, ಹುಕ್ಕಾ ಪೈಪ್‌ಗಳು ಮತ್ತು ಫ್ರೀಜರ್‌ಗಳು, ಐಸ್ ಕ್ರೀಮ್ ತಯಾರಿಸುವ ಯಂತ್ರಗಳು ಸೇರಿದಂತೆ ಹಲವು ವಸ್ತುಗಳನ್ನು ಕದಿಯುವಲ್ಲಿ ಖದೀಮರು ಯಶಸ್ವಿಯಾಗಿದ್ದಾರೆ. ಕದ್ದ ವಸ್ತುಗಳನ್ನು ರಾಜಾರೋಷವಾಗಿ ಟೆಂಪೋ ಟ್ರಾವೆಲರ್‌ನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಮಾಲೀಕರು ನಷ್ಟವನ್ನು ಅನುಭವಿಸಿದ ನಂತರ ಈ ಹೋಟೆಲ್ ಅನ್ನು ಮುಚ್ಚಲಾಗಿತ್ತು.
ಇದನ್ನು ನೋಡಿದ್ದ ಆರು ಮಂದಿಯ ಕಳ್ಳರ ಗ್ಯಾಂಗ್ ಪೈಕಿ ಮೂರು ಮಂದಿ ನಗರದಲ್ಲಿ ಹೋಟೆಲ್ ಆರಂಭಿಸುವ ಹಂತದಲ್ಲಿದ್ದ ಕಾರಣ ಇತರ ಮೂವರು ಕಳ್ಳರಿಂದ ಹೋಟೆಲ್ ವಸ್ತುಗಳನ್ನು ಖರೀದಿಸಲು ಬಂದಿದ್ದರು ಎನ್ನಲಾಗಿದೆ. ಇನ್ನುಳಿದ ಮೂವರು ಕಳ್ಳರು ಎಂಬುದು ಖರೀದಿದಾರರಿಗೆ ತಿಳಿದಿರಲಿಲ್ಲ ಮತ್ತು ಹೋಟೆಲ್ ಅವರದ್ದೇ ಎಂದು ಭಾವಿಸಿದ್ದರು. ಕೊಂಡೊಯ್ದಿರುವ ಹೋಟೆಲ್ ವಸ್ತುಗಳ ಬೆಲೆ ಸುಮಾರು 10 ಲಕ್ಷ ರೂ. ಮೌಲ್ಯದ್ದಾಗಿದೆ. ಮೂರು ಶಂಕಿತರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಬಂಧಿತರನ್ನು ಚಿಕ್ಕರಾಜು, ಕಾರ್ತಿಕ್ ಮತ್ತು ಮಣಿ ಎಂದು ಗುರುತಿಸಲಾಗಿದೆ ಎಂದು ಜಮೀನು ಮಾಲೀಕ ಐವತ್ತೊಂಬತ್ತು ವರ್ಷದ ಪಿ.ನಾಗರಾಜ್ ತಿಳಿಸಿದ್ದಾರೆ.
“ಮೂವರಲ್ಲಿ ಇಬ್ಬರು ಕಳ್ಳರು, ಇನ್ನೊಬ್ಬರು ಖರೀದಿದಾರರು. ಕಳ್ಳರು ವೃತ್ತಿಪರ ಕಳ್ಳರ ಗ್ಯಾಂಗ್ ಎಂದು ಹೇಳಲಾಗಿದ್ದು, ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕ್ರಿಯರಾಗಿದ್ದಾರೆ. ಇವರೆಲ್ಲರೂ ಸುಂಕದಕಟ್ಟೆ ಪ್ರದೇಶದಲ್ಲಿ ವಾಸವಾಗಿದ್ದಾರೆ. ಹೋಟೆಲ್ ಮುಚ್ಚಿದ ನಂತರ, ನಾನು ಬೀಗ ಹಾಕಿದ ಆವರಣವನ್ನು ನೋಡಿಕೊಳ್ಳುತ್ತಿದ್ದೆ. ಮಾಲೀಕರು ಹೋಟೆಲ್ ಅನ್ನು ಮತ್ತೆ ತೆರೆಯಲು ಅಥವಾ ಮಾರಾಟ ಮಾಡಲು ಆಸಕ್ತಿ ಹೊಂದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಸಿಬ್ಬಂದಿ ಅವರು ಹೇಳಿದ್ದಾರೆ.
ತಲೆಮರೆಸಿಕೊಂಡಿರುವ ಮೂವರಲ್ಲಿ ಇಬ್ಬರನ್ನು ಅರುಣ್ ಮತ್ತು ಸತ್ಯ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ