ಲೋನ್ ಆ್ಯಪ್ ವಂಚನೆಗೆ ಸಿಲುಕಿದ ಬೆಂಗಳೂರಿನ ವ್ಯಕ್ತಿ; ಸಾಲಕ್ಕಿಂತ ಹೆಚ್ಚಿನ ಮೊತ್ತ ಪಾವತಿಸಿದರೂ ಬಿಡದ ಆರೋಪಿಗಳು!
ಬೆಂಗಳೂರು: ಯಾವುದೋ ರಹಸ್ಯ ಆ್ಯಪ್‌ಗಳ ಮೂಲಕ ಸಾಲ ಪಡೆಯುವ ಮುನ್ನ ಎರಡು ಬಾರಿ ಯೋಚಿಸಿ. ಸಾಲ ಪಡೆಯುವುದಕ್ಕಾಗಿ ಹತಾಶಗೊಂಡು ಅಜ್ಞಾತ ಅಪ್ಲಿಕೇಶನ್‌ಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ, ಸಂತ್ರಸ್ತನ ಮೊಬೈಲ್ ಫೋನ್ ಮತ್ತು ಕಂಪ್ಯೂಟರ್ ಅನ್ನು ವಶಕ್ಕೆ ಪಡೆದುಕೊಂಡು ಹ್ಯಾಕರ್‌ಗಳು ಡೇಟಾ ಮತ್ತು ವೈಯಕ್ತಿಕ ವಿವರಗಳನ್ನು ದುರ್ಬಳಕೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಇಂತದ್ದೇ ಹಲವು ಆ್ಯಪ್‌ಗಳ ಮೂಲಕ ಸಾಲ ಪಡೆದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಈಗ ಕೆಲವು ಅಪರಿಚಿತ ಶಂಕಿತರಿಂದ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದಾರೆ. ತಾವು ನೀಡಬೇಕಿದ್ದ ಸಾಲಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸುವಂತೆ ಮಾಡುತ್ತಿದ್ದಾರೆ. ಆರೋಪಿಗಳು ಈಗ ಸಂತ್ರಸ್ತ ಮತ್ತು ಅವರ ಕುಟುಂಬಕ್ಕೆ ಅಶ್ಲೀಲ ಚಿತ್ರಗಳನ್ನು ಕಳುಹಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸಂತ್ರಸ್ತರ ಫೋನ್‌ನಲ್ಲಿರುವ ಸಂಪರ್ಕಗಳೊಂದಿಗೆ ಅಶ್ಲೀಲ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸಂತ್ರಸ್ತ ಸಿಇಎನ್ ಪೊಲೀಸರನ್ನು ಸಂಪರ್ಕಿಸಿದ್ದಾರೆ.
ದೂರುದಾರರನ್ನು ಕೋಡಿಹಳ್ಳಿ ಸಮೀಪದ ಬೀರಯ್ಯನಪಾಳ್ಯದ ನಿವಾಸಿ ಎಂ.ಚಂದನ್ ಕುಮಾರ್ ಎಂದು ಗುರುತಿಸಲಾಗಿದೆ. ಚಂದನ್ ಮಾರ್ಚ್ 10 ರಿಂದ ಆಗಸ್ಟ್ 22 ರವರೆಗೆ ಸುಮಾರು 10 ಅಪ್ಲಿಕೇಶನ್‌ಗಳ ಮೂಲಕ 3.57 ಲಕ್ಷ ರೂಪಾಯಿಗಳ ಸಾಲವನ್ನು ಪಡೆದಿದ್ದಾರೆ.
ಆದರೆ, 'ಅವರು ಸಂಪೂರ್ಣ ಸಾಲದ ಮೊತ್ತವನ್ನು ಕ್ಲಿಯರ್ ಮಾಡಿದ್ದಾರೆ. ಅಲ್ಲದೆ ಹೆಚ್ಚುವರಿಯಾಗಿ 4.36 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದಾರೆ. ಒಟ್ಟು 7.93 ಲಕ್ಷ ರೂಪಾಯಿಯನ್ನು ಪಾವತಿಸಿದರೂ ಕೂಡ. ಶಂಕಿತ ಆರೋಪಿಗಳು ದೂರುದಾರರಿಗೆ ಅವರ ಪತ್ನಿ ಮತ್ತು ಸಂಬಂಧಿಕರಿಗೆ ಬ್ಲ್ಯಾಕ್‌ಮೇಲ್ ಮಾಡಿ ಹೆಚ್ಚಿನ ಹಣ ಕೇಳುತ್ತಿದ್ದಾರೆ ಎನ್ನಲಾಗಿದೆ.
ಆರೋಪಿಗಳು 'ಸಂತ್ರಸ್ತರ ಸ್ನೇಹಿತರು ಮತ್ತು ಸಂಬಂಧಿಕರಿಗೆ ಅಶ್ಲೀಲ ಚಿತ್ರಗಳು ಮತ್ತು ಪಠ್ಯಗಳನ್ನು ಕಳುಹಿಸುತ್ತಿದ್ದಾರೆ' ಎಂದು ಅಧಿಕಾರಿಯೊಬ್ಬರು ಹೇಳಿದರು.
ಕಿರುಕುಳ ಕೇವಲ ಕೆಲವು ಆ್ಯಪ್‌ಗಳಿಂದ ಆಗಿದೆಯೇ ಅಥವಾ ಸಾಲ ಪಡೆದಿದ್ದ ಎಲ್ಲಾ ಆ್ಯಪ್‌ಗಳಿಂದ ಇವೆಲ್ಲವುಗಳಿಂದ ಆಗುತ್ತಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಒಬ್ಬ ಹ್ಯಾಕರ್ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಹೇಗೆ ಕದಿಯಬಹುದು ಎಂಬುದನ್ನು ವಿವರಿಸಿದ ಸಿಇಎನ್ ಅಧಿಕಾರಿಯೊಬ್ಬರು, 'ಸಾಧನವನ್ನು ಹ್ಯಾಕ್ ಮಾಡಿದ ನಂತರ, ಆರೋಪಿಗಳು ಸಂತ್ರತ್ಥರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಸ್ಕ್ಯಾನ್ ಮಾಡುತ್ತಾರೆ. ಹೆಚ್ಚಿನ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ಸ್ಟೋರ್ ಮಾಡಿರುತ್ತಾರೆ. ಹೀಗಾಗಿ ಆರೋಪಿಗಳು ಸುಲಭವಾಗಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರವೇಶಿಸಬಹುದು' ಎಂದು ಅವರು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ