ರೋಹಿಣಿ ಸಿಂಧೂರಿ ಪತಿ ವಿರುದ್ದ ಭೂ ಕಬಳಿಕೆ ಆರೋಪ: ಟ್ವೀಟ್ ಮೂಲಕ ಖ್ಯಾತ ನಟನ ಪುತ್ರನಿಂದ ದೂರು
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಿರುದ್ದ ಅಕ್ರಮ ಭೂ ಕಬಳಿಕ ಆರೋಪ ಕೇಳಿ ಬಂದಿದ್ದು, ಖ್ಯಾತ ಹಾಸ್ಯನಟ ಮಹಮೂದ್ ಅಲಿ ಪುತ್ರ ಲಕ್ಕಿ ಅಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
Published: 05th December 2022 03:14 PM | Last Updated: 05th December 2022 03:19 PM | A+A A-

ರೋಹಿಣಿ ಸಿಂಧೂರಿ
ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಿರುದ್ದ ಅಕ್ರಮ ಭೂ ಕಬಳಿಕ ಆರೋಪ ಕೇಳಿ ಬಂದಿದ್ದು, ಖ್ಯಾತ ಹಾಸ್ಯನಟ ಮಹಮೂದ್ ಅಲಿ ಪುತ್ರ ಲಕ್ಕಿ ಅಲಿ ಈ ಸಂಬಂಧ ದೂರು ದಾಖಲಿಸಿದ್ದಾರೆ.
ಟ್ವೀಟ್ ಮೂಲಕ ಅಲಿ ಅವರು ಬೆಂಗಳೂರು ಪೊಲೀಸ್ ಆಯುಕ್ತ ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಟ್ವೀಟ್ ಮಾಡಿದ್ದು, ಸುಧೀರ್ ರೆಡ್ಡಿ ಹಾಗು ಮಧು ರೆಡ್ಡಿ ಎಂಬುವವರಿಂದ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಲಕ್ಕಿ ಆಲಿ ಆರೋಪಿಸಿದ್ದಾರೆ.
Dear Sir, I request your help to stop this illegal activity of them trying to prove a false possession before the final court hearing on December 7th.
— Lucky Ali (@luckyali) December 4, 2022
Please help us as I have no choice other than to take this to the Public.
With Due Respect.
Lucky Ali (Maqsood Mahmood Ali)
ಯಲಹಂಕ ಬಳಿ ಇರುವ ಕೆಂಚೇನಹಳ್ಳಿ ಬಳಿಯ ಲಕ್ಕಿ ಆಲಿ ಅವರ ಜಾಗವನ್ನು ತಮ್ಮ ಪತ್ನಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (Rohini Sindhuri) ಯವರ ಸಹಾಯದಿಂದ ಒತ್ತುವರಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದು, ಈ ಕುರಿತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಅಂತೆಯೇ ದೂರಿನ ಸಂಬಂಧ ಪೊಲೀಸ್ ಇಲಾಖೆ ಕೂಡ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಮಾನನಷ್ಟ ಮೊಕದ್ದಮೆ ದಾಖಲು
ಈ ಆರೋಪದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದು, ಮಾಧ್ಯಮಗಳಲ್ಲಿ ಈ ವಿಚಾರವನ್ನು ನಾನು ನೋಡಿದ್ದೇನೆ. ಯಾವ ಕಾರಣಕ್ಕೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದಿಲ್ಲ. ಯಾವ ಪೊಲೀಸ್ ಠಾಣೆ ಅನ್ನೊ ಬಗ್ಗೆ ಮಾಹಿತಿ ತರಿಸಿಕೊಳ್ಳೊತ್ತೇನೆ. ಈ ಬಗ್ಗೆ ಡಿಜಿ ಜೊತೆ ನಾನು ಮಾತನಾಡುತ್ತೇನೆ ಎಂದರು.