ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 4.8 ಲಕ್ಷ ರೂ. ಮೌಲ್ಯದ 100 ಗ್ರಾಂ ಚಿನ್ನವನ್ನು ಹಿಂದಿರುಗಿಸಿದ ಪ್ರಾಮಾಣಿಕ ಹಮಾಲಿ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 100 ಗ್ರಾಂ ಚಿನ್ನವಿದ್ದ ಬಾಕ್ಸ್‌ವೊಂದನ್ನು ಕಳೆದುಕೊಂಡಿದ್ದ ಮಹಿಳಾ ಪ್ರಯಾಣಿಕರೊಬ್ಬರು, ವ್ಯಕ್ತಿಯೊಬ್ಬರ ಪ್ರಾಮಾಣಿಕತೆಯಿಂದಾಗಿ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಮರಳಿ ಪಡೆದಿದ್ದಾರೆ. ಈ ಚಿನ್ನದ ಮೌಲ್ಯ ಸುಮಾರು 4.8 ಲಕ್ಷ ರೂ. ಆಗಿದೆ.
ಪ್ರಯಾಣಿಕರಾದ ಸಂಗೀತಾ ಅವರು ಭಾನುವಾರ ಬೆಂಗಳೂರಿನ ರೈಲ್ವೆ ಅಧಿಕಾರಿಗಳಿಂದ ಕಾಣೆಯಾಗಿದ್ದ ಬಾಕ್ಸ್‌ ಅನ್ನು ಸ್ವೀಕರಿಸಿದರು.
ಪ್ರಯಾಣಿಕರಾದ ಸಂಗೀತಾ ಅವರು ಭಾನುವಾರ ಬೆಂಗಳೂರಿನ ರೈಲ್ವೆ ಅಧಿಕಾರಿಗಳಿಂದ ಕಾಣೆಯಾಗಿದ್ದ ಬಾಕ್ಸ್‌ ಅನ್ನು ಸ್ವೀಕರಿಸಿದರು.

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ 100 ಗ್ರಾಂ ಚಿನ್ನವಿದ್ದ ಬಾಕ್ಸ್‌ವೊಂದನ್ನು ಕಳೆದುಕೊಂಡಿದ್ದ ಮಹಿಳಾ ಪ್ರಯಾಣಿಕರೊಬ್ಬರು, ವ್ಯಕ್ತಿಯೊಬ್ಬರ ಪ್ರಾಮಾಣಿಕತೆಯಿಂದಾಗಿ ಕಳೆದುಕೊಂಡ ಕೆಲವೇ ಗಂಟೆಗಳಲ್ಲಿ ಅದನ್ನು ಮರಳಿ ಪಡೆದಿದ್ದಾರೆ. ಈ ಚಿನ್ನದ ಮೌಲ್ಯ ಸುಮಾರು 4.8 ಲಕ್ಷ ರೂ. ಆಗಿದೆ.

ಪರವಾನಗಿ ಪಡೆದ ಪೋರ್ಟರ್ (ರೈಲು ಸಹಾಯಕ) ಮೊಹಮ್ಮದ್ ಇಜಾಜ್ ಎಂಬುವವರು ನಿಲ್ದಾಣದಲ್ಲಿ ಬಾಕ್ಸ್ ಅನ್ನು ಕಂಡು ಅದನ್ನು ಉಪ ನಿಲ್ದಾಣದ ವ್ಯವಸ್ಥಾಪಕರಿಗೆ ಹಸ್ತಾಂತರಿಸಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಬಾಕ್ಸ್‌ನ ಮಾಲೀಕರಾದ ಸಂಗೀತಾ ಎಂಬುವವರು ತನ್ನ ಕುಟುಂಬದೊಂದಿಗೆ ತಾಳಗುಪ್ಪಾ-ಮೈಸೂರು ಎಕ್ಸ್‌ಪ್ರೆಸ್‌ನಿಂದ ಬೆಳಿಗ್ಗೆ 5 ಗಂಟೆ ಸುಮಾರಿಗೆ ಇಳಿದಿದ್ದರು. ಕುಟುಂಬವು ಅಲ್ಲಿಂದ ಬಂಗಾರಪೇಟೆಗೆ ಸಂಪರ್ಕ ರೈಲಿನಲ್ಲಿ ಹೋಗಲು ಯೋಜಿಸಿತ್ತು. ಈ ವೇಳೆ ಸುಮಾರು ಎರಡ್ಮೂರು ಗಂಟೆಗಳ ಕಾಲ ಪ್ಲಾಟ್‌ಫಾರ್ಮ್ 10 ರಲ್ಲಿ ಕಾದು ಕುಳಿತಿದ್ದರು. ನಂತರ ಮುಂದಿನ ರೈಲಿಗೆ ತೆರಳಲು ಅವರು ಪ್ಲಾಟ್‌ಫಾರ್ಮ್ 6 ಕ್ಕೆ ಬಂದರು.

ಈ ವೇಳೆ ಆಕೆ ತನ್ನ ಬ್ಯಾಗ್‌ನ ಪಕ್ಕದ ಜೇಬಿನಲ್ಲಿ ಇಟ್ಟಿದ್ದ ಚಿನ್ನವಿದ್ದ ಬಾಕ್ಸ್ ಕಾಣೆಯಾಗಿರುವುದನ್ನು ಗಮನಿಸಿದ್ದಾರೆ. ಬಳಿಕ ಸಹಾಯಕ್ಕಾಗಿ ಸಿಟಿ ರೈಲ್ವೆ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಹಮಾಲಿಯಿಂದ ಬಾಕ್ಸ್ ಅನ್ನು ಪಡೆದಿದ್ದ ರೈಲ್ವೆ ಅಧಿಕಾರಿ, ರೈಲ್ವೆ ರಕ್ಷಣಾ ಪಡೆಗೆ ಎಚ್ಚರಿಕೆ ನೀಡಿದ್ದಾರೆ. ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ರೈಲ್ವೆ ಪೊಲೀಸರ ಸಮ್ಮುಖದಲ್ಲಿ ಬಾಕ್ಸ್‌ನ ನಿಜವಾದ ಮಾಲೀಕರಿಗೆ ಅದನ್ನು ಹಸ್ತಾಂತರಿಸಲಾಗಿದೆ.

ಇದರಿಂದಾಗಿ ಪ್ರಯಾಣಿಕರು ಇಡೀ ರೈಲ್ವೆ ತಂಡಕ್ಕೆ, ವಿಶೇಷವಾಗಿ ಇಜಾಜ್ ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಚಿನ್ನವಿದ್ದ ಬಾಕ್ಸ್ ಅನ್ನು ಹಿಂತಿರುಗಿಸಿದ್ದ ಇಜಾಜ್ ಅವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ (ಆಡಳಿತ) ಕುಸುಮಾ ಹರಿಪ್ರಸಾದ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com