ಚುನಾವಣೆಗಳಿಗೆ ನನ್ನ ಪ್ರಮುಖ ಆದ್ಯತೆ: ಬೆಂಗಳೂರು ನೂತನ ಜಿಲ್ಲಾಧಿಕಾರಿ
ಇಲಾಖೆಯ ಸರಿಯಾದ ಆಡಳಿತದ ಜೊತೆಗೆ ಮತದಾರರ ದತ್ತಾಂಶ ಸೇರ್ಪಡೆ ಮತ್ತು ಅಳಿಸುವಿಕೆ ಕಾರ್ಯವು ಅಡೆತಡೆಯಿಲ್ಲದೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ನೂತನವಾಗಿ ನೇಮಕಗೊಂಡ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಕೆ ಎ ಸೋಮವಾರ ಹೇಳಿದ್ದಾರೆ.
Published: 20th December 2022 08:53 AM | Last Updated: 20th December 2022 12:18 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಇಲಾಖೆಯ ಸರಿಯಾದ ಆಡಳಿತದ ಜೊತೆಗೆ ಮತದಾರರ ದತ್ತಾಂಶ ಸೇರ್ಪಡೆ ಮತ್ತು ಅಳಿಸುವಿಕೆ ಕಾರ್ಯವು ಅಡೆತಡೆಯಿಲ್ಲದೆ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ತಮ್ಮ ಮೊದಲ ಆದ್ಯತೆಯಾಗಿದೆ ಎಂದು ನೂತನವಾಗಿ ನೇಮಕಗೊಂಡ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಕೆ ಎ ಸೋಮವಾರ ಹೇಳಿದ್ದಾರೆ.
ಬೆಂಗಳೂರು ನೂತನ ಜಿಲ್ಲಾಧಿಯಾರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಕಾರ್ಯಪ್ರವೃತ್ತರಾದ ದಯಾನಂದ ಅವರು ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿ ಅವಲೋಕಿಸಿಸಿದರು. ಈ ವೇಳೆ ಕೈಗೆತ್ತಿಕೊಂಡ ಕಾಮಗಾರಿಗಳು ನಿಗದಿತ ರೀತಿಯಲ್ಲಿ ನಡೆಯುತ್ತಿವೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.
ಇದನ್ನೂ ಓದಿ: ಮತ್ತೆ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಕೆ.ಎ.ದಯಾನಂದ ನೇಮಕ
ನಂತರ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಕಾರ್ಯಗತಗೊಳಿಸಲಾಗುವುದು ಎಂದು ಹೇಳಿದರು.
ಸಿಬ್ಬಂದಿಯನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂಬ ಆರೋಪ ಕುರಿತು ಮಾತನಾಡಿ, ಎಲ್ಲಾ ಕೆಲಸಗಳನ್ನು ಸಮಾನ ಪ್ರಾಮುಖ್ಯತೆಯೊಂದಿಗೆ ನಿರ್ವಹಿಸಬೇಕು. ನಾಗರಿಕರು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ಈ ವೇಳೆ ಕುಂದುಕೊರತೆಗಳನ್ನು ಪರಿಹರಿಸಲಾಗುವುದು. ನಾಗರಿಕರಿಗೆ ಸಿಬ್ಬಂದಿ ಲಭ್ಯವಿರಬೇಕು. ಮಾಡುತ್ತಿರುವ ಕೆಲಸಗಳ ಬಗ್ಗೆ ಸಾರ್ವಜನಿಕರ ಪ್ರತಿಕ್ರಿಯೆಯನ್ನೂ ಪಡೆಯಲಾಗುವುದು ಎಂದು ತಿಳಿಸಿದರು.