ಬೆಂಗಳೂರು: ರಸ್ತೆ ಗುಂಡಿ ತುಂಬಲು ಮತ್ತೊಂದು ಗಡುವು ನಿಗದಿಪಡಿಸಿದ ಬಿಬಿಎಂಪಿ!
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಡಿಸೆಂಬರ್ 31 ರೊಳಗೆ ನಗರದ ಎಲ್ಲಾ ಗುಂಡಿಗಳನ್ನು ಸರಿಪಡಿಸುವಂತೆ ಮತ್ತೊಂದು ಗಡುವನ್ನು ನೀಡಿದ್ದಾರೆ. ಪಾಲಿಕೆ ಎಂಜಿನಿಯರ್‌ಗಳು ಗಡುವಿನ ಒಳಗೆ ಕೆಲಸ ಪೂರ್ಣಗೊಳಿಸದಿದ್ದರೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
Published: 21st December 2022 09:02 AM | Last Updated: 21st December 2022 12:05 PM | A+A A-

ನಾಗರಭಾವಿ ಸಮೀಪದ ಎನ್‌ಜಿಇಎಫ್ ಲೇಔಟ್‌ನಲ್ಲಿ ಸೋಮವಾರ ಕಂಡು ಬಂದ ಬೃಹತ್ ರಸ್ತೆ ಗುಂಡಿ.
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಡಿಸೆಂಬರ್ 31 ರೊಳಗೆ ನಗರದ ಎಲ್ಲಾ ಗುಂಡಿಗಳನ್ನು ಸರಿಪಡಿಸುವಂತೆ ಮತ್ತೊಂದು ಗಡುವನ್ನು ನೀಡಿದ್ದಾರೆ. ಪಾಲಿಕೆ ಎಂಜಿನಿಯರ್‌ಗಳು ಗಡುವಿನ ಒಳಗೆ ಕೆಲಸ ಪೂರ್ಣಗೊಳಿಸದಿದ್ದರೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗಿರಿನಾಥ್ ಅವರು, ರಸ್ತೆ ಗುಂಡಿಗಳನ್ನು ಸರಿಪಡಿಸುವುದು ನಿರಂತರ ಕಸರತ್ತಾಗಿದೆ. ಆದರೂ, ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಮತ್ತು ಹೊಸ ಗಡುವು ತಪ್ಪಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಎಸ್'ಡಬ್ಲ್ಯೂಡಿ ಸಮೀಕ್ಷೆ ಬಳಿಕ ಒತ್ತುವರಿ ತೆರವು ಕಾರ್ಯಾಚರಣೆ ಪುನರಾರಂಭಿಸಲು ಬಿಬಿಎಂಪಿ ಮುಂದು!
ರಸ್ತೆ ಗುಂಡಿ ತುಂಬುವ ಕಾರ್ಯ ಪ್ರಗತಿಯಲ್ಲಿದ್ದು, "ಈ ಸಂಬಂಧ ನಾವು ಈಗಾಗಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದೇವೆ. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗಿದೆ. ಗುಂಡಿಗಳನ್ನು ಸರಿಪಡಿಸುವುದು ನಿರಂತರ ಕಸರತ್ತಾಗಿದೆ. ಆದರೆ, ಡಿಸೆಂಬರ್ 31 ರೊಳಗೆ ಎಲ್ಲಾ ಇಂಜಿನಿಯರ್‌ಗಳು, ಕನಿಷ್ಠ ಪ್ರಮುಖ ರಸ್ತೆಗಳಲ್ಲಾದರೂ ಯಾವುದೇ ಗುಂಡಿಗಳಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಜನವರಿ 1 ರಿಂದ, ಪಾಲಿಕೆಯು ಸಾರ್ವಜನಿಕರಿಗೆ 'ಫಿಕ್ಸ್ ಮೈ ಸ್ಟ್ರೀಟ್' ಅಪ್ಲಿಕೇಶನ್'ನ್ನು ಆರಂಭಿಸಲಿದೆ, ಸಾರ್ವಜನಿಕರು ರಸ್ತೆ ಗುಂಡಿಗಳ ಬಗ್ಗೆ ವರದಿ ಮಾಡುವಂತೆ ಮತ್ತು ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಇದು ಸಹಾಯ ಮಾಡಲಿದೆ.
ಇದನ್ನೂ ಓದಿ: ಮತದಾರರ ಪಟ್ಟಿಗೆ ತೃತೀಯಲಿಂಗಿಗಳನ್ನು ಸೇರ್ಪೆಡೆಗೊಳಿಸಿ: ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಸೂಚನೆ
ಕೇಬಲ್ ಹಾಕಲು ಮತ್ತು ಇತರೆ ಕಾಮಗಾರಿಗಳಿಗೆ ರಸ್ತೆಗಳನ್ನು ಅಗೆಯುವ ಏಜೆನ್ಸಿಗಳು ರಸ್ತೆಗಳನ್ನು ಯಥಾಸ್ಥಿತಿಗೆ ತರಬೇಕು. ಇದನ್ನು ಪರಿಶೀಲಿಸುವ ಜವಾಬ್ದಾರಿ ಸಂಬಂಧಪಟ್ಟ ಎಂಜಿನಿಯರ್‌ಗಳ ಮೇಲಿದೆ. “ವಿವಿಧ ಏಜೆನ್ಸಿಗಳು ಅಗೆದ ನಂತರ ರಸ್ತೆಗಳು ಮತ್ತೆ ಆಕಾರದಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ವಿಫಲವಾದರೆ ವಾರ್ಡ್ ಅಥವಾ ಪ್ರಮುಖ ರಸ್ತೆಗಳ ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಅಂತಹ ಎಂಜಿನಿಯರ್‌ಗಳಿಗೆ ದಂಡ ವಿಧಿಸಲಾಗುತ್ತದೆ ಮತ್ತು ರಸ್ತೆಗಳನ್ನು ಸರಿಪಡಿಸಲು ತಮ್ಮ ಜೇಬಿನಿಂದ ಹಣವನ್ನು ತೆರಬೇಕಾಗುತ್ತದೆ ಎಂದು ತಿಳಿಸಿದರು.
ಏತನ್ಮಧ್ಯೆ, ಹಳೆಯ ಮದ್ರಾಸ್ ರಸ್ತೆಯಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಲಾದ ರ್ಯಾಪಿಡ್ ರೋಡ್ ಯೋಜನೆಯನ್ನು ಅಧ್ಯಯನ ಮಾಡಲು ಮತ್ತು ಅದರ ಬಾಳಿಕೆ ಮತ್ತು ವೆಚ್ಚದ ಪರಿಣಾಮಕಾರಿತ್ವದ ಬಗ್ಗೆ ವರದಿಯನ್ನು ನೀಡಲು ಬಿಬಿಎಂಪಿಯು ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ಇತರ ಸಂಸ್ಥೆಗಳ ತಜ್ಞರನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದರು.
"ಇದು ಸ್ವತಂತ್ರ ಸಂಸ್ಥೆಯಾಗಿದೆ. ವೆಚ್ಚ, ವಿನ್ಯಾಸ ಮತ್ತು ವೆಚ್ಚದ ಕುರಿತು ಅದರ ಸಲಹೆಗಳು ಮುಖ್ಯವಾಗಿರುತ್ತದೆ. ಇದಕ್ಕೆ ಸಮಯ ಬೇಕಾಗುತ್ತದೆ. ಅಧಿಕಾರಿಗಳು ವರದಿ ನೀಡಿದ ನಂತರ ನಾವು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.