ಬೆಂಗಳೂರು: ಟೆಕ್ಕಿಯ ಖಾಸಗಿ ಚಿತ್ರಗಳನ್ನು ಬಳಸಿ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯ ಬಂಧನ, ಪೆನ್‌ಡ್ರೈವ್ ವಶಕ್ಕೆ

25 ವರ್ಷದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ನ ಕಳೆದುಹೋಗಿದ್ದ ಪೆನ್‌ಡ್ರೈವ್‌ನಲ್ಲಿದ್ದ ಆಕೆಯ ಖಾಸಗಿ ಫೋಟೊಗಳು ಮತ್ತು ವಿಡಿಯೋಗಳನ್ನು ಪತ್ತೆ ಮಾಡಿ ಬ್ಲ್ಯಾಕ್‌ಮೇಲೆ ಮಾಡುತ್ತಿದ್ದ ಪೇಂಟರ್‌ನನ್ನು ಬಂಧಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 25 ವರ್ಷದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್‌ನ ಕಳೆದುಹೋಗಿದ್ದ ಪೆನ್‌ಡ್ರೈವ್‌ನಲ್ಲಿದ್ದ ಆಕೆಯ ಖಾಸಗಿ ಫೋಟೊಗಳು ಮತ್ತು ವಿಡಿಯೋಗಳನ್ನು ಪತ್ತೆ ಮಾಡಿ ಬ್ಲ್ಯಾಕ್‌ಮೇಲೆ ಮಾಡುತ್ತಿದ್ದ ಪೇಂಟರ್‌ನನ್ನು ಬಂಧಿಸಲಾಗಿದೆ.

ಪೆನ್‌ಡ್ರೈವ್‌ ಅನ್ನು ಹಿಂದಿರುವುಗಿಸುವುದಾಗಿ ಭರವಸೆ ನೀಡಿದ ನಂತರ ಸಂತ್ರಸ್ತೆ ಸುಮಾರು 70,000 ರೂ. ಗಳನ್ನು ನೀಡಿದ್ದಾರೆ. ಆದರೆ, ಆತ ಅದನ್ನು ಹಿಂದಿರುಗಿಸಿಲ್ಲ. ಬಳಿಕ ಆಕೆಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾನೆ. ಬಳಿಕ ಆಕೆ ಆಗ್ನೇಯ ವಿಭಾಗದ ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಅಪರಾಧ ವಿಭಾಗದ (ಸಿಇಎನ್) ಪೊಲೀಸರನ್ನು ಸಂಪರ್ಕಿಸಿದ್ದಾರೆ. ಬಳಿಕ ಪೊಲೀಸರು ಆರೋಪಿ ಶೋಯೆಬ್ ಅಹ್ಮದ್ ಎಂಬಾತನನ್ನು ಬಂಧಿಸಿದ್ದು, ಆತನಿಂದ ಪೆನ್‌ಡ್ರೈವ್‌ ಅನ್ನು ವಶಪಡಿಸಿಕೊಂಡಿದ್ದಾರೆ.

ಬೇಗೂರು ರಸ್ತೆಯ ನಿವಾಸಿಯಾಗಿರುವ ಸಂತ್ರಸ್ತೆಯು ಪೆನ್‌ಡ್ರೈವ್ ಅನ್ನು ಕಳೆದುಕೊಂಡ ಬಳಿಕ ಅದು ಶೋಯೆಬ್‌ಗೆ ದೊರಕಿತ್ತು. ಆತ ಅದನ್ನು ಪರಿಶೀಲಿಸಿ ಆಕೆಯ ಮೊಬೈಲ್ ನಂಬರ್‌ ಅನ್ನು ಕೂಡ ಪಡೆದುಕೊಂಡಿದ್ದಾನೆ. ಬಳಿಕ ವಾಟ್ಸಾಪ್‌ ಮೂಲಕ ಪೆನ್‌ಡ್ರೈವ್‌ನಲ್ಲಿಂದ ಕೆಲವು ಫೋಟೊಗಳು ಮತ್ತು ವಿಡಿಯೋಗಳನ್ನು ಆಕೆಗೆ ಕಳುಹಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದಾನೆ.

ಹಣವನ್ನು ನೀಡದಿದ್ದರೆ ಫೋಟೊಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ. ಆದರೆ, ಆತ ಹಣದ ಬೇಡಿಕೆಯನ್ನು ಮುಂದುವರಿಸಿದಾಗ, ಸಂತ್ರಸ್ತೆ ಅಕ್ಟೋಬರ್ 30 ರಂದು ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com