ಪ್ರವಾಹ, ರಸ್ತೆ ಗುಂಡಿ, ತ್ಯಾಜ್ಯ: ದೂರಾಗದ ಸಮಸ್ಯೆಗಳಿಂದ ಸಿಲಿಕಾನ್ ಸಿಟಿ ಜನತೆ ತಬ್ಬಿಬ್ಬು!

ದೇಶದ ಐಟಿ ರಾಜಧಾನಿ, ರಾಜ್ಯ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯವನ್ನು ನೀಡುವ ಮತ್ತು ರಾಷ್ಟ್ರೀಯ ಆರ್ಥಿಕತೆಯಲ್ಲಿ ಸಿಂಹ ಪಾಲು ಹೊಂದಿರುವ ನಗರ ಬೆಂಗಳೂರು. ಆದರೂ ಈ ನಗರದಲ್ಲಿ ಪ್ರವಾಹ ಪರಿಸ್ಥಿತಿ, ರಸ್ತೆ ಗುಂಡಿ ಹಾಗೂ ತ್ಯಾಜ್ಯ ಸಮಸ್ಯೆಗಳು ಜನರ ತಲೆದೋರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು, ದೇಶದ ಐಟಿ ರಾಜಧಾನಿ, ರಾಜ್ಯ ಸರ್ಕಾರಕ್ಕೆ ದೊಡ್ಡ ಪ್ರಮಾಣದ ಆದಾಯವನ್ನು ನೀಡುವ ಮತ್ತು ರಾಷ್ಟ್ರೀಯ ಆರ್ಥಿಕತೆಯಲ್ಲಿ ಸಿಂಹ ಪಾಲು ಹೊಂದಿರುವ ನಗರ ಬೆಂಗಳೂರು. ಆದರೂ ಈ ನಗರದಲ್ಲಿ ಪ್ರವಾಹ ಪರಿಸ್ಥಿತಿ, ರಸ್ತೆ ಗುಂಡಿ ಹಾಗೂ ತ್ಯಾಜ್ಯ ಸಮಸ್ಯೆಗಳು ಜನರ ತಲೆದೋರಿದೆ.

ಈ ಸಮಸ್ಯೆಗಳು ಚಿಕ್ಕದರಂತೆ ಕಂಡರೂ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗದಲ್ಲಿ ಆರಂಭವಾಗಿದ್ದ ಲಾಕ್ಡೌನ್ ಸಮಯದಲ್ಲಿ ಈ ಸಮಸ್ಯೆಗಳ ದೂರಾಗಿಸಲು ಸರ್ಕಾರ ಮುಂದಾಗಲಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ ಸೇರಿದಂತೆ ವಿವಿಧ ಸಂಸ್ಥೆಗಳ ಎಂಜಿನಿಯರ್‌ಗಳ ತಂಡವಿದ್ದರೂ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗಿಲ್ಲ.

ಪ್ರಧಾನಿ ಮೋದಿ ಅವರ ಭೇಟಿ, ಜಾಗತಿಕ ಹೂಡಿಕೆದಾರರ ಸಭೆ, ಬೆಂಗಳೂರು ಟೆಕ್ ಶೃಂಗಸಭೆ ಮತ್ತು ಜಿ-20 ಸಭೆಗಳಿಗೆ ಮುಂಚಿತವಾಗಿ ಡಾಂಬರೀಕರಣಗೊಂಡಿದ್ದ ರಸ್ತೆಗಳು, ವಿದೇಶಗಳ ಪ್ರತಿನಿಧಿಗಳು ಹಿಂತಿರುಗಿದ ಕೂಡಲೇ ಮರಳಿ ಬಾಯ್ತೆರೆದುಕೊಂಡವು.

ವಂದೇ ಭಾರತ್ ಎಕ್ಸ್‌ಪ್ರೆಸ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2, ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ, ಕೊಮ್ಮಘಟ್ಟದಲ್ಲಿ ಮೆಟ್ರೋ ಯೋಜನೆಗಳು ಮತ್ತು ಉಪನಗರ ರೈಲು ಸೇರಿದಂತೆ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆಗಾಗಿ ಪ್ರಧಾನಿ ಮೋದಿ ಎರಡು ಬಾರಿ ನಗರಕ್ಕೆ ಭೇಟಿ ನೀಡಿದ್ದರು.

ಇದಿಷ್ಟೂ ರಸ್ತೆ ಗುಂಡಿಗಳ ಕುರಿತ ವಿಚಾರಗಳಾಗದರೆ ಇತ್ತೀಚೆಗೆ ಪ್ರವಾಹ ಸಮಸ್ಯೆಗೆ ಕೂಡ ಬೆಂಗಳೂರು ಸುದ್ದಿಗೆ ಗ್ರಾಸವಾಗಿತ್ತು.

ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಟೆಕ್ಕಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಆದರೆ, ಸರ್ಕಾರ ಅಭಿವೃದ್ಧಿ ಕಾರ್ಯ ಹಾಗೂ ಅತಿಕ್ರಮಣಗಳ ಮೇಲೆ ದೂಷಣೆ ಮಾಡಿ ಕೈತೊಳೆದುಕೊಳ್ಳುವ ಕೆಲಸ ಮಾಡಿತು. ಬಳಿಕ ಅತಿಕ್ರಮಣ ತೆರವು ಕಾರ್ಯಾಚರಣೆಯ ಆರಂಭವಾಯಿತು, ಆದರೆ, ಸಮೀಕ್ಷೆಗಳು ಮತ್ತು ನಕ್ಷೆಗಳ ಕೊರತೆಯಿಂದಾಗಿ ಈ ಕಾರ್ಯ ಸ್ಥಗಿತಗೊಂಡಿತು.ಸಮುದಾಯಗಳು ಮತ್ತು ಅಪಾರ್ಟ್‌ಮೆಂಟ್ ಸಂಕೀರ್ಣಗಳ ನಿವಾಸಿಗಳು ಮತ್ತು ಬಿಲ್ಡರ್‌ಗಳು ತಡೆಯಾಜ್ಞೆ ಪಡೆಯಲು ನ್ಯಾಯಾಲಯ ಮತ್ತು ಲೋಕಾಯುಕ್ತದ ಮೆಟ್ಟಿಲೇರಿದರು.

ಅನೇಕ ವೇದಿಕೆಗಳಲ್ಲಿ ತಜ್ಞರು ಮತ್ತು ನಾಗರಿಕ ಕಾರ್ಯಕರ್ತರು ಪುರಸಭೆಯ ಚುನಾವಣೆಗಳ ನಡೆಸದಿರುವುದಕ್ಕೆ ಸರ್ಕಾರವನ್ನು ದೂಷಿಸಿದರು. ವಾರ್ಡ್ ಕಾರ್ಪೊರೇಟರ್‌ಗಳು ಇದ್ದಿದ್ದರೆ, ಹದಗೆಟ್ಟ ರಸ್ತೆಗಳು, ಪ್ರವಾಹ ಮತ್ತು ಕಸದ ಹಾವಳಿಯ ಸಮಸ್ಯೆಗಳನ್ನು ತ್ವರಿತವಾಗಿ ನಿಭಾಯಿಸಬಹುದಿತ್ತು ಎಂದು ಕೆಲವು ನಗರ ಯೋಜಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸಮಸ್ಯೆಗಳನ್ನು ಪ್ರಸ್ತುತ ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿಗಳು ನಿರ್ವಹಿಸುತ್ತಿದ್ದಾರೆ, ಅವರು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಕೂಡ ಹೊಂದಿದ್ದಾರೆ. ನ್ಯಾಯಾಲಯಗಳು ಮತ್ತು ಚುನಾವಣಾ ಆಯೋಗದ ಮಧ್ಯಪ್ರವೇಶದ ಹೊರತಾಗಿಯೂ ವಾರ್ಡ್ ವಿಂಗಡಣೆಯ ಕಸರತ್ತು ಇನ್ನೂ ಪೂರ್ಣಗೊಂಡಿಲ್ಲ.

ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಯೋಜಿತವಲ್ಲದ ಬೆಳವಣಿಗೆಗಳು ಕಂಡು ಬಂದಿವೆ, ಈ ಪ್ರದೇಶಗಳಲ್ಲಿ ರಸ್ತೆಗಳು, ಚರಂಡಿಗಳು ಮತ್ತು ಕುಡಿಯುವ ನೀರಿನ ಸಂಪರ್ಕಗಳಂತಹ ಮೂಲಭೂತ ಸೌಕರ್ಯಗಳನ್ನು ಇನ್ನೂ ಒದಗಿಸಬೇಕಾಗಿದೆ. ಟೆಕ್ ಕಾರಿಡಾರ್‌ಗಳು, ಅಪಾರ್ಟ್ಮೆಂಟ್ ಸಂಕೀರ್ಣಗಳು ಮತ್ತು ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಪ್ರದೇಶಗಳು ನಗರದ ಬೆಳವಣಿಗೆಗೆ ನಿರ್ಣಾಯಕವಾಗಿವೆ. ಆದಾಗ್ಯೂ, ಸರ್ಕಾರದ ಗಮನವು ಇನ್ನೂ ಸಿಬಿಡಿ ಪ್ರದೇಶಗಳ ಮೇಲೆ ಇದೆ ಎಂದು ತಜ್ಞರು ಸ್ಪಷ್ಟವಾಗಿ ತಿಳಿಸಿದ್ದಾರೆ.

ಐದು ಉಪಗ್ರಹ ಟೌನ್‌ಶಿಪ್‌ಗಳ ಕಲ್ಪನೆಯು ಚಾಲ್ತಿಗೊಳ್ಳದೆ ಬಾಕಿ ಉಳಿದಿದೆ, ಈ ಕಾರಣದಿಂದಾಗಿ ಸಿಬಿಡಿ ಪ್ರದೇಶಗಳಲ್ಲಿ ವಾಹನಗಳನ್ನು ನಿರ್ಬಂಧಿಸುವ ದೀರ್ಘಾವಧಿಯ ಬೇಡಿಕೆಗಳನ್ನು ಪರಿಹರಿಸಲಾಗಿಲ್ಲ. ಮತ್ತೊಂದು ಕಾರಣವೆಂದರೆ ಸರ್ಕಾರವು ಇನ್ನೂ ಉಪನಗರ ರೈಲು ಯೋಜನೆಯನ್ನು ಪ್ರಾರಂಭಿಸದಿರುವುದಾಗಿದೆ.

ಸುಗಮ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಸಮನ್ವಯದ ಕೊರತೆ ಎದುರಾಗಿದ್ದು, ಇದರಿಂದಾಗಿ ವಿವಿಧ ಸರ್ಕಾರಿ ಸಂಸ್ಥೆಗಳ ತಜ್ಞರು ಅಡೆತಡೆಯಿಲ್ಲದ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ನಗರ ಯೋಜಕರು ಮತ್ತು ವಲಸಿಗ ಜನರ ಪ್ರಕಾರ ಬೆಂಗಳೂರು ಅತ್ಯಂತ ದುಬಾರಿ ನಗರವಾಗಿದೆ. ಚುನಾವಣೆಗಳು ಸಮೀಪಿಸುತ್ತಿದ್ದರೂ, ಟೆಕ್ ಸಿಟಿಗೆ ಫೇಸ್‌ಲಿಫ್ಟ್ ನೀಡಲು ಯಾವುದೇ ಪ್ರಮುಖ ಘೋಷಣೆಗಳು ಅಥವಾ ಯೋಜನೆಗಳು ಘೋಷಣೆಯಾಗಿಲ್ಲ. ಜವಾಬ್ದಾರಿಯನ್ನು ತೆಗೆದುಕೊಳ್ಳಲು, ಯೋಜನೆಯನ್ನು ಕಾರ್ಯಗತಗೊಳಿಸಲು ಯಾವುದೇ ಸಂಸ್ಥೆ ಮುಂದೆ ಬಾರದಿರುವುದು ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.

ಬೆಂಗಳೂರು ತನ್ನದೇ ಆದ ಕಾಯ್ದೆಯನ್ನು ಬಿಬಿಎಂಪಿ ಕಾಯಿದೆ 2020, ಕೆಎಂಸಿ ಕಾಯಿದೆಯನ್ನು ಹೊಂದಿದ್ದರು, ಎರಡು ವರ್ಷಗಳ ಕೆಳಗೆ ಅಂದರೆ, ಕೊರೋನಾ ಮಹಾಮಾರಿ ರೋಗ ಎದುರಾಗುವುದಕ್ಕೂ ಮೊದಲೇ ಇದ್ದ ಪರಿಸ್ಥಿತಿ ಈಗಲೂ ಇರುವುದು ವಿಪರ್ಯಾಸದ ವಿಚಾರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com