ಬೆಂಗಳೂರು: ಜಾಗ್ರತೆ! ಕೋವಿಡ್ 4ನೇ ಅಲೆ ಭೀತಿ ನಡುವೆ ಡೆಂಗ್ಯೂ ಹೆಚ್ಚಳ

ಕೋವಿಡ್-19 ನಾಲ್ಕನೇ ಅಲೆಯ ಭೀತಿಯ ನಡುವೆಯೇ ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೋವಿಡ್-19 ನಾಲ್ಕನೇ ಅಲೆಯ ಭೀತಿಯ ನಡುವೆಯೇ ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಆತಂಕ ಹೆಚ್ಚಾಗುವಂತೆ ಮಾಡಿದೆ.

ನಗರದಲ್ಲಿ ಈ ವರ್ಷ 38 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಹಿತಿ ನೀಡಿದೆ.

ಬಿಬಿಎಂಪಿ, ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರು ಮಾತನಾಡಿ, ದಾಸರಹಳ್ಳಿಯಲ್ಲಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿವೆ. ನಗರದಲ್ಲಿ ಇದುವರೆಗೆ ಕಾಲರಾ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಹರೀಶ್ ಅವರು, 100 ಸಾರ್ವಜನಿಕ ನಲ್ಲಿಗಳು, 515 ಸಾರ್ವಜನಿಕ ಬೋರ್‌ವೆಲ್‌ಗಳು, 471 ಆರ್‌ಒ ಪ್ಲಾಂಟ್‌ಗಳು ಮತ್ತು 124 ತಿನಿಸುಗಳ ಮಾದರಿಗಳನ್ನು ಸಂಗ್ರಹಿಸಿ ಪರಿಶೀಲನೆ ಮಾಡಲಾಗಿದೆ. ಅಲ್ಲದೆ, 2,03,403 ಮನೆಗಳು ಮತ್ತು 2,98,962 ಸೈಟ್‌ಗಳನ್ನು ಸಮೀಕ್ಷೆ ನಡೆಸಲಾಗಿದ್ದು, ಇಲ್ಲಿಯವರೆಗೆ 3,153 ಲಾರ್ವಾ-ಬ್ರೀಡಿಂಗ್ ಪಾಯಿಂಟ್‌ಗಳನ್ನು ಗುರುತಿಸಲಾಗಿದೆ. ಕೋವಿಡ್ -19 ಮತ್ತು ಡೆಂಗ್ಯೂ ನಿಯಂತ್ರಣಕ್ಕಾಗಿ ನಗರದಾದ್ಯಂತ ನಿರಂತರ ಮೇಲ್ವಿಚಾರಣೆ ಮತ್ತು ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ರೋಗಲಕ್ಷಣ ಇರುವವರನ್ನು ಕೂಡಲೇ ಪರೀಕ್ಷೆಗೊಳಪಡಿಸಿ ಚಿಕಿತ್ಸೆ ನೀಡುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೋವಿಡ್-19 ಪರೀಕ್ಷೆಯನ್ನು ಹೆಚ್ಚಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಘನತ್ಯಾಜ್ಯ ನಿರ್ವಹಣೆ ಕುರಿತು ಮಾತನಾಡಿ, ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬಹುದಾದ ಸ್ಥಳಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುತ್ತಿದೆ. "ಸ್ಥಳದ ಕೊರತೆಯಿಂದಾಗಿ, ಪ್ರತಿ 3-4 ವಾರ್ಡ್‌ಗಳಿಗೆ 1 ಘಟಕವನ್ನು ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ. ಹಾಗಾಗಿ 198 ವಾರ್ಡ್‌ಗಳಿಗೆ 90 ಯೋಜನೆ ರೂಪಿಸಲಾಗಿತ್ತು. 243 ವಾರ್ಡ್‌ಗಳ ವಿಂಗಡಣೆ ಕಾರ್ಯದಿಂದ ಈ ಸಂಖ್ಯೆ ಹೆಚ್ಚಿಸಬೇಕಾಗಿದೆ ಎಂದು ಹೇಳಿದರು.

ಬ್ಲಾಕ್ ಸ್ಪಾಟ್‌ಗಳನ್ನು ನಿತ್ಯ ಕ್ಲಿಯರ್ ಮಾಡುವ ಟೆಂಪರರಿ ಬ್ಲಾಕ್ ಸ್ಪಾಟ್ಸ್ 1479 ಆಗಿದ್ದೂ ಪರ್ಮನೆಂಟ್ ಬ್ಲಾಕ್ ಸ್ಪಾಟ್ - 118 ಇತ್ತು , ಸದ್ಯ 76 ಕ್ಕೆ ಇಳಿಕೆ ಆಗಿದೆ, ಬ್ಲಾಕ್ ಸ್ಪಾಟ್ ತೆರವು ಸಂಬಂಧ ಪಾಲಿಕೆಯಿಂದ‌ ನೂತನ‌ ಟೆಂಡರ್ ಕರೆಯಲಾಗಿದೆ. 6,18,46, 941 ರೂ ವೆಚ್ಚದಲ್ಲಿ‌ ಟೆಂಡರ್‌ ಕರೆಯಲಾಗಿದೆ. ಟೆಂಡರ್ ನಲ್ಲಿ ಪರ್ಮನೆಂಟ್ ಬ್ಲಾಕ್ ಸ್ಪಾಟ್‌ಗಳಲ್ಲಿ‌ ಕಸ ಹಾಕದಂತೆ ನೋಡಿಕೊಳ್ಳಬೇಕು, ನಂತರ ಆ ಸ್ಥಳವನ್ನು ಬ್ಯೂಟಿಫಿಕೇಷನ್ ಮಾಡಬೇಕು. ಬೇರೆ ಟೆಕ್ನಾಲಜಿ ಅಥವಾ ಸಿಬ್ಬಂದಿ ನೇಮಕ ಮಾಡಿ‌ ಬ್ಲಾಕ್ ಸ್ಪಾಟ್‌ನಲ್ಲಿ‌ ಕಸ ಬೀಳದಂತೆ ನೋಡಿಕೊಳ್ಳಬೇಕು. ಮನೆ‌ಗಳಲ್ಲಿ‌ ಉತ್ಪತ್ತಿಯಾಗುವ ಕಸ, ಹಾಗೂ ಬೀದಿ ಕಸ ತೆರವು ಗುತ್ತಿಗೆದಾರನದ್ದೆ ಆಗಿರುತ್ತದೆ. ಉದಯ ಶಿವಕುಮಾರ್ ಇನ್ಫ್ರಾ ಪ್ರೈವೇಟ್ ಲಿಮಿಟೆಡ್‌ಗೆ ಟೆಂಡರ್ ನೀಡಲಾಗಿದೆ. ಪಾಲಿಕೆ ಮುಂದಿನ ದಿನಗಳಲ್ಲಿ ನಗರದಲ್ಲಿ ಬ್ಲಾಕ್ ಸ್ಪಾಟ್ ಇಲ್ಲದ ಹಾಗೆ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com