ಸೋಶಿಯಲ್ ಮೀಡಿಯಾ ಸ್ನೇಹಿತೆಯಿಂದ ಹಣಕಾಸು ಸಂಸ್ಥೆ ಉದ್ಯೋಗಿಗೆ 35 ಲಕ್ಷ ರೂ. ವಂಚನೆ

ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತವಾಗಿದ್ದ ಮಹಿಳೆಯೊಬ್ಬರೊಂದಿಗೆ 45 ವರ್ಷದ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ವಂಚನೆಗೊಳಗಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಪರಿಚಿತವಾಗಿದ್ದ ಮಹಿಳೆಯೊಬ್ಬರೊಂದಿಗೆ 45 ವರ್ಷದ ಹಣಕಾಸು ಸಂಸ್ಥೆಯೊಂದರ ಉದ್ಯೋಗಿಯೊಬ್ಬರು ವಂಚನೆಗೊಳಗಾಗಿದ್ದಾರೆ.

ಆರೋಪಿ ನ್ಯಾನ್ಸಿ ವಿಲಿಯಂ ಗೆಳೆತನವಾದ ನಂತರ ಅನೇಕ ಬಾರಿ ವಿಡಿಯೋ ಕಾಲ್ ಮಾಡಿ, ಭಾರತಕ್ಕೆ ಬಂದು ಜ್ಯೂವೆಲ್ಲರಿ ವ್ಯವಹಾರ ಆರಂಭಿಸುವುದಾಗಿ ಭರವಸೆ ನೀಡಿದ್ದಾಳೆ. ಆಕೆಯನ್ನು ನಂಬಿದ ಹಣಕಾಸು ಕಂಪನಿ ಸಿಬ್ಬಂದಿ ರೂ. 35 ಲಕ್ಷ ಹೂಡಿಕೆ ಮಾಡಿದ್ದಾರೆ. ಆಕೆ ತನ್ನ ಪ್ರೊಫೈಲ್ ನ್ನು ಡಿಲೀಟ್ ಮಾಡಿದ ನಂತರ ಆತ ಮೋಸ ಹೋಗಿರುವ ಅರಿವಾಗಿದೆ.

ಜಾನಿ (ಹೆಸರು ಬದಲಾಯಿಸಲಾಗಿದೆ) ನೀಡಿದ ದೂರಿನ ಆಧಾರದ ಮೇಲೆ ಸಿಇಎನ್ (ಪೂರ್ವ) ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲ ತಿಂಗಳ ಹಿಂದೆ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದ್ದು, ವಿಡಿಯೋ ಕಾಲ್ ಮಾಡಲು ನಂಬರ್ ಪಡೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತಕ್ಕೆ ಬಂದು ಜ್ಯೂವೆಲ್ಲರಿ ವ್ಯವಹಾರ ಆರಂಭಿಸುವುದಾಗಿ ಆಕೆ ನಂಬಿಸಿದ್ದಳು. ಆಕೆಯನ್ನು ನಂಬಿದ ಜಾನಿ, ಏಪ್ರಿಲ್ ಮತ್ತು ಮೇ ತಿಂಗಳ ನಡುವೆ ಆಕೆಯ ಐದು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿದ್ದಾನೆ. ವಾರದಿಂದ ಆಕೆ ಕಡೆಯಿಂದ ಫೋನ್ ಇಲ್ಲ, ಮೆಸೇಜ್ ಇಲ್ಲದಂತಾಗಿದೆ. ನಂತರ ಸೋಶಿಯಲ್ ಮೀಡಿಯಾ ಅಕೌಂಟ್ ಡಿಲೀಟ್ ಆಗಿರುವುದು ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಬ್ಯಾಂಕ್ ಖಾತೆ ಮತ್ತು ವ್ಯವಹಾರದ ಮಾಹಿತಿಯನ್ನು ವಿಚಾರಣಾಧಿಕಾರಿಗಳ ಮುಂದೆ ಜಾನಿ ಹಂಚಿಕೊಂಡಿದ್ದಾನೆ. ಪೊಲೀಸರು ಅವುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ಪ್ರಕರಣದ ತನಿಖೆಗೆ ತಂಡವೊಂದನ್ನು ಪೊಲೀಸರು ರಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com