ಜಾತಿ ಪ್ರಮಾಣಪತ್ರ ಇಲ್ಲವೇ? ಹಾಗಿದ್ದರೆ ಸಿಇಟಿ ವಿದ್ಯಾರ್ಥಿಗಳು ಜನರಲ್ ಮೆರಿಟ್ ವರ್ಗಕ್ಕೆ ಒಳಪಡುತ್ತಾರೆ ಎಂದ ಕೆಇಎ
ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ದಾಖಲೆ ಪರಿಶೀಲನೆಯಲ್ಲಿನ ಹಲವಾರು ಸಮಸ್ಯೆಗಳ ಪೈಕಿ ವಿವರಗಳನ್ನು ಸರಿಯಾಗಿ ಅಪ್‌ಲೋಡ್ ಮಾಡದ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳನ್ನು ಸಾಮಾನ್ಯ ಮೆರಿಟ್ (ಜಿಎಂ) ವರ್ಗಕ್ಕೆ ಪರಿವರ್ತಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೇಳಿದೆ.
Published: 03rd November 2022 11:33 AM | Last Updated: 03rd November 2022 03:30 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ದಾಖಲೆ ಪರಿಶೀಲನೆಯಲ್ಲಿನ ಹಲವಾರು ಸಮಸ್ಯೆಗಳ ಪೈಕಿ ವಿವರಗಳನ್ನು ಸರಿಯಾಗಿ ಅಪ್‌ಲೋಡ್ ಮಾಡದ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳನ್ನು ಸಾಮಾನ್ಯ ಮೆರಿಟ್ (ಜಿಎಂ) ವರ್ಗಕ್ಕೆ ಪರಿವರ್ತಿಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೇಳಿದೆ.
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು ಜಾತಿ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗದ ಹಲವಾರು ಪ್ರಕರಣಗಳು ಪರಿಶೀಲನೆ ಪ್ರಕ್ರಿಯೆಯಲ್ಲಿನ ದೋಷಗಳಿಗೆ ಕಾರಣವಾಗಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ .ಎಸ್ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಅಭ್ಯರ್ಥಿಗಳು ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಸರಿಯಾಗಿ ಅಪ್‌ಲೋಡ್ ಮಾಡುತ್ತಿಲ್ಲ. ಒಂದು ವೇಳೆ ಅಭ್ಯರ್ಥಿಗಳು ಆರ್‌ಡಿ ಸಂಖ್ಯೆಗಳನ್ನು ಮರೆತಿದ್ದರೆ, ಅವರು ತಮ್ಮ ಸಂಖ್ಯೆಯ ಬದಲಿಗೆ ತಮ್ಮ ಪೋಷಕರು ಅಥವಾ ಒಡಹುಟ್ಟಿದವರ ಸಂಖ್ಯೆಯನ್ನು ನಮೂದಿಸುತ್ತಿದ್ದಾರೆ. ಇದು ದಾಖಲೆ ಪರಿಶೀಲನೆ ಪ್ರಕ್ರಿಯೆಯಲ್ಲಿ ದೋಷವಾಗಿ ಕಂಡುಬರುತ್ತದೆ' ಎಂದು ಅವರು ಹೇಳಿದರು.
ಇದನ್ನೂ ಓದಿ: ಕೆಸಿಇಟಿ: ಕೆಇಎ ಕೌನ್ಸೆಲಿಂಗ್ ದಿನಾಂಕ ಪ್ರಕಟ
ಈ ವರ್ಷದ ದಾಖಲೆ ಪರಿಶೀಲನೆಯನ್ನು ಆನ್‌ಲೈನ್‌ನಲ್ಲಿ ಮಾಡಲಾಗುತ್ತಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಅಂದರೆ, ಸಿಸ್ಟಮ್‌ನಿಂದ ತಪ್ಪುಗಳನ್ನು ತಕ್ಷಣವೇ ಕಂಡುಹಿಡಿಯಲಾಗುತ್ತಿದೆ.
ಕೆಇಎ ಪ್ರಕಾರ, ಸುಮಾರು 13,000 ಅಭ್ಯರ್ಥಿಗಳು ದೋಷಗಳನ್ನು ಎದುರಿಸಿದ್ದಾರೆ. ಆದಾಗ್ಯೂ, ಅವುಗಳಲ್ಲಿ ಹೆಚ್ಚಿನವುಗಳನ್ನು ಪರಿಹರಿಸಲಾಗಿದೆ. ಜಾತಿ ಅಥವಾ ಆದಾಯ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗದ ಉಳಿದ ಅಭ್ಯರ್ಥಿಗಳನ್ನು ಜಿಎಂ ವರ್ಗಕ್ಕೆ ಪರಿವರ್ತಿಸಲಾಗುತ್ತದೆ ಮತ್ತು ಅಂತವರು ಎರಡನೇ ಸುತ್ತಿನಲ್ಲಿ ಸೀಟುಗಳನ್ನು ಪಡೆಯಲಾಗುತ್ತದೆ.
ಇದನ್ನೂ ಓದಿ: ಮೂಲ ಪಟ್ಟಿಯಂತೆ ಪರಿಷ್ಕೃತ ಕೆಸಿಇಟಿ ಪಟ್ಟಿಯಲ್ಲಿ ಟಾಪ್ 500 ರ್ಯಾಂಕ್: ಸಚಿವ ಅಶ್ವಥ್ ನಾರಾಯಣ
'ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಲು, ಮೊದಲ ಸುತ್ತಿನಲ್ಲಿ ಅಂತವರ ಸ್ಥಾನಗಳನ್ನು ರದ್ದುಗೊಳಿಸಲು ಮತ್ತು ಮುಂದಿನ ಸುತ್ತಿನಲ್ಲಿ ಅವರನ್ನು ಜಿಎಂ ವರ್ಗಕ್ಕೆ ಸೇರಿಸಲು ನಿರ್ದೇಶನವನ್ನು ನೀಡಲಾಗಿದೆ' ಎಂದು ಅವರು ಹೇಳಿದರು.