
ಆಪಾರ್ಟ್ ಮೆಂಟ್ ನಲ್ಲಿ ಪಿಎಸ್ಐ ಗಲಾಟೆ
ಬೆಂಗಳೂರು: ಅಪಾರ್ಟ್ ಮೆಂಟ್ ನಿವಾಸಿಗಳ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಪರಪ್ಪನ ಅಗ್ರಹಾರ ಠಾಣೆ PSI ಗಂಗಾಧರ್ ರಸ್ತೆಯಲ್ಲಿ ಗೂಂಡಾವರ್ತನೆ ತೋರಿದ್ದು, ಸಬ್ ಇನ್ಸ್ಪೆಕ್ಟರ್ ವಿರುದ್ಧ ಅಪಾರ್ಟ್‌ಮೆಂಟ್ ನಿವಾಸಿಗಳು (Apartment Resident) ಆಕ್ರೋಶ ಹೊರ ಹಾಕಿದ್ದಾರೆ. ನೀರಿನ ವಿಚಾರಕ್ಕೆ ಗಲಾಟೆ ನಡೆದಿದ್ದು, ಮಹಾವೀರ್ ಆರ್ಕೇಡ್ ಅಪಾರ್ಟ್ಮೆಂಟ್ (Mahaveer Arcade Apartment) ನಿವಾಸಿ ಮೇಲೆ PSI ಗಂಗಾಧರ್ ಹಲ್ಲೆ ಮಾಡಿದ್ದಾರೆ. ಹಲ್ಲೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿ (Police Officer) ವರ್ತನೆ ಬಗ್ಗೆ ಸಾರ್ವಜನಿಕರು ಸಹ ಕಿಡಿಕಾರಿದ್ದಾರೆ.
My neighbour, a sheer gentleman being thrashed and heckled by a gunda police man who also happened to be our neighbour. This is happening in our society when the maintenance dafaulters were imposed fines after several warnings.@BlrCityPolice @ArvindLBJP @Tejasvi_Surya. pic.twitter.com/Z0KgypK2cL
— law abiding citizen (@beelzebub_abhi) November 5, 2022
ಹೊಸ ರೋಡ್ ಚೂಡಸಂದ್ರದ ಬಳಿ ಇರುವ ಮಹಾವೀರ್ ಆರ್ಕೇಡ್ ಅಪಾರ್ಟ್ಮೆಂಟ್ ನಲ್ಲೇ ವಾಸವಿರುವ ಗಂಗಾಧರ್, ನೀರು ಬಿಡುವ ವಿಚಾರಕ್ಕೆ ಜಗಳ ತೆಗೆದಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ನಿತ್ಯ ಪಿಎಸ್ಐ ಕಾಟಕ್ಕೆ ಬೇಸತ್ತ ನಿವಾಸಿಗಳು, ಪಿಎಸ್ಐ ವಿರುದ್ಧ ಧ್ವನಿ ಎತ್ತಿದ್ದಾರೆ. ಇದಕ್ಕೆ ಸಿಟ್ಟಾದ ಪಿಎಸ್ಐ ಗಂಗಾಧರ್ ನಡು ರಸ್ತೆಯಲ್ಲೇ ಅಪಾರ್ಟ್ಮೆಂಟ್ ನಿವಾಸಿ ಮೇಲೆ ಹಲ್ಲೆ ನಡೆಸಿ, ಗೂಂಡಾವರ್ತನೆ ತೋರಿದ್ದಾರೆ. ಬಳಿಕ ನಿವಾಸಿಗಳು ವಿಡಿಯೋವನ್ನು ಬೆಂಗಳೂರು ಸಿಟಿ ಪೊಲೀಸ್ ಟ್ವೀಟರ್ ಖಾತೆಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಉದ್ಯೋಗಿಗೆ ಹನಿಟ್ರ್ಯಾಪ್; 10 ಮಂದಿಯ ಖತರ್ನಾಕ್ ಗ್ಯಾಂಗ್ ಸೆರೆ
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು
ನೀರು ಮತ್ತು ಎಲೆಕ್ಟ್ರಿಸಿಟಿ ಬಂದ್ ವಿಚಾರಕ್ಕೆಪಿಎಸ್‌ಐ ಮತ್ತು ಅಪಾರ್ಟ್‌ಮೆಂಟ್ ಪ್ರೆಸಿಡೆಂಟ್ ಹಾಗೂ ನಿವಾಸಿಗಳ ನಡುವೆ ಮಾರಾಮಾರಿ ನಡೆದಿದ್ದು, ಅಪಾರ್ಟ್ಮೆಂಟ್ ನಿವಾಸಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಪೊಲೀಸ್ ಹಿರಿಯ ಅಧಿಕಾರಿ ಸಹ ನಿವಾಸಿಗಳ ದೂರು ಆಧರಿಸಿ ಪಿಎಸ್‌ಐ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ. ಈ ಹಿಂದೆ ಸಹ PSI ಗಂಗಾದರ್ ಸಾಕಷ್ಟು ಬಾರಿ ಗಲಾಟೆ ಮಾಡಿದ್ದರಂತೆ. ಹೀಗಾಗಿ ಪಿಎಸ್ಐ ನನ್ನುಅಪಾರ್ಟ್ಮೆಂಟ್ನಿಂದ ಬೇರೆಡೆಗೆ ಸ್ಥಳಾಂತರ ಮಾಡಲು ನಿವಾಸಿಗಳು ಮನವಿ ಮಾಡಿದ್ದಾರೆ. ಅಧಿಕಾರಿಗಳು ಸಹ ಸ್ಥಳಾಂತರ ಮಾಡುವ ಭರವಸೆ ನೀಡಿದ್ದಾರೆ.
The gunda was on a spree.@BlrCityPolice @Tejasvi_Surya @ArvindLBJP @IEBengaluru @east_bengaluru pic.twitter.com/mdSzDFqruN
— law abiding citizen (@beelzebub_abhi) November 5, 2022
ಅಪಾರ್ಟ್ ಮೆಂಟ್ ಮೇನ್ಟೇನೆನ್ಸ್ ವ ದರದ ವಿಚಾರಕ್ಕೆ ಗಲಾಟೆ
ಅಲ್ಲದೆ PSI ಗಂಗಾಧರ್ ಕಳೆದ ಹಲವು ತಿಂಗಳಿನಿಂದ ಫ್ಲಾಟ್ Maintenance ಚಾರ್ಜ್ ಪಾವತಿ ಮಾಡಿಲ್ಲ. ಹೀಗಾಗಿ ಅವರ ಮನೆಗೆ ಇಂದು ನೀರಿನ ಸಂಪರ್ಕ ಮತ್ತು ಎಲೆಕ್ಟ್ರಿಸಿಟಿ ಸಂಪರ್ಕ ಕಟ್ ಮಾಡಲಾಗಿತ್ತು. ಇದನ್ನು ಪಿಎಸ್ಐ ಪ್ರಶ್ನೆ ಮಾಡಿ ಗಲಾಟೆ ತೆಗೆದಿದ್ದಾರೆ. ಈ ವೇಳೆ ಇಬ್ಬರು ನಿವಾಸಿಗಳನ್ನು ಠಾಣೆಗೆ ಕರೆದೊಯ್ಯಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆ ಇತರೆ ಅಪಾರ್ಟ್ಮೆಂಟ್ ನಿವಾಸಿಗಳು ಪೊಲೀಸರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಘಟನಾಸ್ಥಳಕ್ಕೆಅಲ್ಲಿನ ನಿವಾಸಿ ಪಿಎಸ್‌ಐ ಗಂಗಾಧರ್ ಸಹಬಂದಿದ್ದರು. ಈ ವೇಳೆ ಅಪಾರ್ಟ್ಮೆಂಟ್ ನಿವಾಸಿಗಳು ಮತ್ತುಪಿ ಎಸ್ಐ ನಡುವೆ ಮಾರಾಮಾರಿ ನಡೆದಿದೆ.