ಕರ್ನಾಟಕದ ಮಾಜಿ ಸಿಎಂ ಅಕ್ರಮ ಪುತ್ರ ಎಂದು ತಮಿಳುನಾಡು ಸಚಿವರಿಗೆ ವಂಚನೆ: 14 ವರ್ಷದ ಹಿಂದೆಯೇ ಸುಕೇಶ್ ಬಂಧಿಸಿದ್ದ ಬೆಂಗಳೂರು ಪೊಲೀಸರು!

ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸುಕೇಶ್ ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ, 14 ವರ್ಷಗಳ ಹಿಂದೆಯೂ ಸುಕೇಶ್ ಆರು ಕಾರುಗಳನ್ನು ಹೊಂದಿದ್ದ, ಅದರಲ್ಲಿ ಕೆಲವು ಟಾಪ್ ಎಂಡ್ ಮಾದರಿಯವುಗಳಾಗಿದ್ದವು, ಪೊಲೀಸರು ಆತನಿಂದ ಎಲ್ಲಾ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸುಕೇಶ್ ಚಂದ್ರಶೇಖರ್
ಸುಕೇಶ್ ಚಂದ್ರಶೇಖರ್

ಬೆಂಗಳೂರು: ದೆಹಲಿಯ ಮಾಜಿ ಸಚಿವ ಸತ್ಯೇಂದರ್ ಜೈನ್ ವಿರುದ್ಧ ಗಂಭೀರ ಲಂಚದ ಆರೋಪಮಾಡಿದ್ದ ವಂಚಕ ಸುಕೇಶ್ ಚಂದ್ರಶೇಖರ್ ನನ್ನು 14 ವರ್ಷಗಳ ಹಿಂದೆಯೇ ಬೆಂಗಳೂರಿನಲ್ಲಿ ಸಹಾಯಕ ಪೊಲೀಸ್ ಆಯುಕ್ತ ಎಂ ಬಾಬು  ಮೊದಲ ಬಾರಿಗೆ ಬಂಧಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕುಖ್ಯಾತ ಅಪರಾಧಿ ಚಾರ್ಲ್ಸ್ ಶೋಭರಾಜ್ ನನ್ನು ಮಧುಕರ್ ಝೆಂಡೆ ಎಂಬ ದಕ್ಷ ಪೊಲೀಸ್ ಅಧಿಕಾರಿ ಬಂಧಿಸಿದ್ದರು. ಅದರಂತೆಯೇ ಸುಖೇಶ್ ನನ್ನು ಬಂಧಿಸಿದ ಮೊದಲ ಪೊಲೀಸ್ ಅಧಿಕಾರಿ ಎಂ. ಬಾಬು.

ಆರಂಭದ ದಿನಗಳಲ್ಲಿ ಸುಕೇಶ್ ವಿವಿಧ ರೀತಿಯ ಸೋಗು ಹಾಕುವ ಮೂಲಕ ವಂಚನೆ ಮಾಡುತ್ತಿದ್ದ, ಉದ್ಯಮಿಯೊಬ್ಬರಿಗೆ 200 ಕೋಟಿ ರು ವಂಚಿಸಿ ಸದ್ಯ  ತಿಹಾರ್ ಜೈಲಿನಲ್ಲಿ ಸುಕೇಶ್ ಅತಿಥಿಯಾಗಿದ್ದಾನೆ.  ಹಲವು ವರ್ಷಗಳ ಹಿಂದೆ ಹುಳಿ ಮಾವು ಪೊಲೀಸರಿಗೆ ಸುಕೇಶ್ ಚಳ್ಳಹೆಣ್ಣು ತಿನ್ನಿಸಿದ್ದ.  ಪೇದೆಗಳು ಮತ್ತು ಮುಖ್ಯಪೇದೆಗಳಿಂದಲೇ ಹಣ ಸಂಗ್ರಹಿಸಿದ್ದ, ಕೆಲ ದಿನಗಳ ನಂತರ ಪೊಲೀಸರು ತಮ್ಮ ಮೇಲಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದ್ದರು.

ಅದಾದ ನಂತರ ತಮಿಳುನಾಡಿನ ಹಾಲಿ ಸಚಿವರೊಬ್ಬರ ಬಳಿ ತಾನು ಕರ್ನಾಟಕದ ಮಾಜಿ ಸಿಎಂ ಒಬ್ಬರ ಅಕ್ರಮ ಮಗ ಎಂದು ಹೇಳಿಕೊಂಡು 10 ಲಕ್ಷ ರು ಹಣ ಮತ್ತು ಐಷಾರಾಮಿ ಕಾರೊಂದನ್ನು ವಂಚಿಸಿದ್ದ.  ತಾನು ಒಬ್ಬ ವಿಐಪಿ ಮಗ ಎಂಬಂತೆ ಪೋಸ್ ಕೊಡುತ್ತಿದ್ದ.

ವಾಹನಗಳಲ್ಲಿ ಹೋಗುತ್ತಿದ್ದ ವೇಳೆ ಆತ ವಿಐಪಿ ಪುತ್ರ ಎಂದು ಭಾವಿಸಿ, ಆತನಿಗೆ ಸೆಲ್ಯೂಟ್ ಹೊಡೆಯುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ಬಾಬು ಮಾಹಿತಿ ನೀಡಿದ್ದಾರೆ.  

ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಸುಕೇಶ್ ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ. 14 ವರ್ಷಗಳ ಹಿಂದೆಯೂ ಸುಕೇಶ್ ಆರು ಕಾರುಗಳನ್ನು ಹೊಂದಿದ್ದ, ಅದರಲ್ಲಿ ಕೆಲವು ಟಾಪ್ ಎಂಡ್ ಮಾದರಿಯವುಗಳಾಗಿದ್ದವು, ಪೊಲೀಸರು ಆತನಿಂದ ಎಲ್ಲಾ ಕಾರುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈಗ ಆತನನ್ನು ಮತ್ತೊಮ್ಮೆ ಬಂಧಿಸಲಾಗಿದೆ, ಕೇಂದ್ರೀಯ ತನಿಖಾ ದಳವು ಅಪರಾಧಿಯ ವಿರುದ್ಧ 70 ಪ್ರಕರಣಗಳ ದೀರ್ಘ ಪಟ್ಟಿಯನ್ನು ರಚಿಸಿದೆ. ಅವುಗಳಲ್ಲಿ ಕೆಲವು ಸುಕೇಶ್ ಐಎಎಸ್ ಅಧಿಕಾರಿಯಾಗಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯ ಮೊಮ್ಮಗನಂತೆ ನಟಿಸಿರುವ ಪ್ರಕರಣಗಳು ಸೇರಿವೆ. ಸುಕೇಶ್ ಕೂಡ ಚಾರ್ಲ್ಸ್ ಶೋಭ್ರಾಜ್ ನಂತೆ ಐನಾತಿ ವಂಚಕನಾಗಿದ್ದ,  ಎಂದು ಹಲವು ಗಂಟೆಗಳ ಕಾಲ ಆತನ ವಿಚಾರಣೆ ನಡೆಸಿದ್ದ ಬಾಬು ತಿಳಿಸಿದ್ದಾರೆ.

ಹಲವು ಸುಳ್ಳು ಮತ್ತು ಕಟ್ಟು ಕಥೆಗಳನ್ನು ಹೇಳಿ ಉಡುಗೊರೆಗಳ ಮೂಲಕ ನನ್ನನ್ನು ವಂಚಿಸಲು ಯತ್ನಿಸಿದೆ. ಆತ ಕಾನೂನನ್ನು ಚೆನ್ನಾಗಿ ತಿಳಿದುಕೊಂಡಿದ್ದಾನೆ. ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾನೆ. ಕೆಲವು ಪೊಲೀಸ್ ಅಧಿಕಾರಿಗಳು ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ, ಹೀಗಾಗಿ  ಅವರಿಗೆ ಕಡಿಮೆ ಪ್ರಮಾಣದ ಶಿಕ್ಷೆಯಾಗುತ್ತದೆ,  ಆದರೆ ಸಂತ್ರಸ್ತರ ಮೇಲೆ ಇದು ಅತೀವ ಪರಿಣಾಮ ಬೀರುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com