ಮಾನವ ಹಕ್ಕುಗಳ ಆಯೋಗದ ಹೆಸರಿನಲ್ಲಿ ವ್ಯಾಪಾರಿಗಳ ಸುಲಿಗೆ: ನಾಲ್ವರು ಮಹಿಳೆಯರು ಸೇರಿ 7 ಮಂದಿ ಬಂಧನ

ಮಾನವ ಹಕ್ಕು ಆಯೋಗದ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಗಳಿಂದ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಏಳು ಮಂದಿ ದುಷ್ಕರ್ಮಿಗಳ ತಂಡವೊಂದನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಾನವ ಹಕ್ಕು ಆಯೋಗದ ಅಧಿಕಾರಿಗಳ ಸೋಗಿನಲ್ಲಿ ಉದ್ಯಮಿಗಳಿಂದ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಏಳು ಮಂದಿ ದುಷ್ಕರ್ಮಿಗಳ ತಂಡವೊಂದನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತರನ್ನು ಪ್ರಕಾಶ್ ಮೂರ್ತಿ (41), ಪ್ರದೀಪ್ (29), ದ್ರುವರಾಜ್ (37), ರಮ್ಯಾ (32), ಸುಶ್ಮಿತಾ (26), ಜಯಲಕ್ಷ್ಮಿ (30) ಮತ್ತು ಇಂದಿರಾ (30) ಎಂದು ಗುರ್ತಿಸಲಾಗಿದೆ.

ಆರೋಪಿಗಳು ವ್ಯಾಪಾರಸ್ಥರ ಅಂಗಡಿಗಳಿಗೆ ತೆರಳಿ ಅಕ್ರಮ ಗ್ಯಾಸ್ ಸಿಲಿಂಡರ್‌ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ತಮ್ಮ ಬಳಿ ಮಾಹಿತಿ ಇದೆ ಎಂದು ಹೇಳಿ ಹೆದರಿಸುತ್ತಿದ್ದರು. ಸಂತ್ರಸ್ತರು ಸುಳ್ಳು ಆರೋಪದಲ್ಲಿ ಸಿಲುಕಬಹುದೆಂಬ ಭಯದಿಂದ ಆರೋಪಿಗಳಿಗೆ ಹಣ ನೀಡುತ್ತಿದ್ದರು ಎನ್ನಲಾಗಿದೆ.

ಬಳಿಕ ಮತ್ತಷ್ಟು ಉದ್ಯಮಿಗಳಿಂದ ಹಣ ಸುಲಿಗೆ ಮಾಡಲು ಉಪ್ಪಾರಪೇಟೆಗೆ ತೆರಳಿದ್ದರು. ಈ ಸಂಬಂಧ ಭದ್ರಪ್ಪ ಲೇಔಟ್‌ನಲ್ಲಿರುವ ಮಾರುತಿ ನಗರದ ನಿವಾಸಿ ಘೇವಾ ಚಂದ್ ರಾಥೋಡ್ (39) ಎಂಬುವವರು ಮಂಗಳವಾರ ಮಧ್ಯಾಹ್ನ  ದೂರು ದಾಖಲಿಸಿದ್ದರು.

ಬಳಿಕ ಉಪ್ಪಾರಪೇಟೆ ಪೊಲೀಸರು ಆರೋಪಿಗಳನ್ನು ಬಂಧನಕ್ಕೊಳಪಡಿಸಿ, ಕೊಡಿಗೇಹಳ್ಳಿ ಪೊಲೀಸರ ವಶಕ್ಕೆ ನೀಡಿದ್ದರು.

ಸೋಮವಾರ ಮಧ್ಯಾಹ್ನ ರಾಥೋಡ್ ಮತ್ತು ಮತ್ತೊಬ್ಬ ಉದ್ಯಮಿಯಿಂದ ಆರೋಪಿಗಳು 7,000 ರೂ. ವಸೂಲಿ ಮಾಡಿದ್ದರು.

ದೂರು ದಾಖಲಿಸಿದ್ದ ರಾಥೋಡ್ ಅವರು ಗೃಹೋಪಯೋಗಿ ವಸ್ತುಗಳ ಅಂಗಡಿ ನಡೆಸುತ್ತಿದ್ದು, ಅಂಗಡಿಗೆ ಎಸ್‌ಯುವಿಯಲ್ಲಿ ಬಂದ ಆರೋಪಿಗಳು ತಮ್ಮನ್ನು ಮಾನವ ಹಕ್ಕುಗಳ ಅಧಿಕಾರಿಗಳು ಹೇಳಿ ಹಣ ವಸೂಲಿ ಮಾಡಿದ್ದರು.

ಎಸ್ಯುವಿ ಮೇಲೆ ಮಾನವ ಹಕ್ಕುಗಳ ಹೆಸರಿನ ನಾಮ ಫಲಕ ಇದ್ದು, ನಂಬರ್ ಪ್ಲೇಟ್ ಹಸಿರು ಬೋರ್ಡ್‌ನಲ್ಲಿ ಇದ್ದುದರಿಂದ ವ್ಯಾಪಾರಸ್ಥರು ಆರೋಪಿಗಳನ್ನು ಸರ್ಕಾರಿ ಅಧಿಕಾರಿಗಳೆಂದು ನಂಬಿ ಹಣವನ್ನು ನೀಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com