
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗದಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಎರಡು ವರ್ಷದ ಗಂಡು ಚಿರತೆಯೊಂದು ಮಂಗಳವಾರ ಮುಂಜಾನೆ ಸಾವನ್ನಪ್ಪಿದೆ.
ತುಮಕೂರು ಜಿಲ್ಲೆಯ ಹಿರೇಹಳ್ಳಿ ಮತ್ತು ಕ್ಯಾತ್ಸಂದ್ರ ರೈಲು ನಿಲ್ದಾಣದ ನಡುವೆ ಈ ಘಟನೆ ನಡೆದಿತ್ತು. ರೈಲು ಚಿರತೆಯ ಹಿಂಗಾಲುಗಳು ಮತ್ತು ಬೆನ್ನಿನ ಭಾಗಕ್ಕೆ ಬಡಿದಿತ್ತು. ಇದರಿಂದ ಚಿರತೆ ತೀವ್ರವಾಗಿ ಗಾಯಗೊಂಡಿತ್ತು.
ಕ್ಯಾತ್ಸಂದ್ರ ರೈಲ್ವೆ ನಿಲ್ದಾಣದ ಗೇಟ್‌ಮ್ಯಾನ್, ಎಚ್ ಹರೀಶ್, ಮಂಗಳವಾರ ಮುಂಜಾನೆ 3 ಗಂಟೆಯ ನಂತರ ರೈಲ್ವೇ ಹಳಿಗಳ ಪಕ್ಕದಲ್ಲಿ ಚಿರತೆ ಮರಿ ಬಿದ್ದಿರುವುದನ್ನು ಗಮನಿಸಿ ಇಲ್ಲಿನ ಆರ್‌ಪಿಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: KRS ನಲ್ಲಿ ಚಿರತೆ ಕಣ್ಣಾಮುಚ್ಚಾಲೆ; 15 ದಿನಗಳಿಂದ ಬೃಂದಾವನ ಬಂದ್, ಅರಣ್ಯ ಇಲಾಖೆ ವಿರುದ್ಧ ಪ್ರವಾಸಿಗರು, ಸ್ಥಳೀಯರ ಆಕ್ರೋಶ!
ಬೆಳಿಗ್ಗೆ ಹಳಿಗಳ ಮೇಲೆ ಗಸ್ತು ತಿರುಗುತ್ತಿದ್ದಾಗ ಗಾಯಗೊಂಡು ಬಿದ್ದಿದ್ದ ಚಿರತೆ ಕಂಡು ಬಂದಿತ್ತು. ಇಲ್ಲಿ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಹರೀಶ್ ಅವರು ಹೇಳಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಆರ್‌ಪಿಎಫ್ ಸಬ್ ಇನ್ಸ್‌ಪೆಕ್ಟರ್ ಸುಧಾಕರ್ ನಾಯ್ಡು ಸ್ಥಳಕ್ಕೆ ಧಾವಿಸಿ ಸ್ಥಳೀಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಉಪ ವಲಯ ಅರಣ್ಯಾಧಿಕಾರಿ ಗಿರೀಶ್ ಹೇಳಿದ್ದಾರೆ.
ಇದನ್ನೂ ಓದಿ: ಮಂಡ್ಯ: ಕೆಆರ್ ಎಸ್ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ! ಪ್ರವಾಸಿಗರಲ್ಲಿ ಆತಂಕ
ರೈಲ್ವೆ ಸಿಬ್ಬಂದಿಯಿಂದ ಮಾಹಿತಿ ತಿಳಿದುಬಂದಿತ್ತು. ಒಂದು ವರ್ಷಕ್ಕೂ ಹೆಚ್ಚು ಪ್ರಾಯದ ಚಿರತೆ ಇದಾಗಿದ್ದು, ಈ ಸ್ಥಳದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲಾಗಿದೆ ಎಂದು ತಿಳಿಸಿದ್ದಾರೆ.
ತುಮೂರಿನ ಅರಣ್ಯ ರಕ್ಷಕಾಧಿಕಾರಿ ಎಂ ಆರ್ ಶ್ವೇತಾ ಮಾತನಾಡಿ, ಚಿರತೆ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಾಳೆ ವರದಿ ಬರುವ ನಿರೀಕ್ಷೆ ಇದೆ. ಘಟನೆ ತಡ ರಾತ್ರಿ ಅಥವಾ ಮುಂಜಾನೆ ಸಂಭವಿಸಿರಬೇಕು. ಸಾವಿಗೆ ನಿಖರ ಕಾರಣಗಳ ತಿಳಿಯಲು ಸ್ಥಳಕ್ಕೆ ಭೇಟಿ ನೀಡಲಾಗಿತ್ತು. ಚಿರತೆ ಹಳಿಗಳ ಮೇಲೆ ನುಗ್ಗಿರಬೇಕು ಮತ್ತು ರೈಲಿನಿಂದ ಬಂದ ಬೆಳಕು ಅದರ ಕಣ್ಣುಗಳು ಕಾಣದಂತೆ ಮಾಡಿರಬಹುದು ಎಂದು ಹೇಳಿದ್ದಾರೆ.