ಮಂಗಳೂರು ಸ್ಫೋಟ ಪ್ರಕರಣ: ಅಲ್-ಖೈದಾ ಉಗ್ರ ಸಂಘಟನೆಯ ವಿಡಿಯೋಗಳನ್ನು ಇತರೆ ಆರೋಪಿಗಳೊಂದಿಗೆ ಶೇರ್ ಮಾಡುತ್ತಿದ್ದ ಶಾರೀಕ್!
ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಅಲ್ ಖೈದಾದಿಂದ ಪ್ರೇರಿತನಾಗಿದ್ದ ಎನ್ನಲಾಗಿದ್ದು, ಈತ ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹಮದ್ ಮತ್ತು ಸಯ್ಯದ್ ಯಾಸಿನ್ ಜೊತೆ ಉಗ್ರ ಸಂಘಟನೆಗಳ ವಿಡಿಯೋಗಳನ್ನು ಸೇವ್ ಮಾಡಿ ಶೇರ್ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
Published: 29th November 2022 08:10 AM | Last Updated: 29th November 2022 11:54 AM | A+A A-

ಮೊಹಮ್ಮದ್ ಶಾರಿಕ್
ಮಂಗಳೂರು: ಮಂಗಳೂರು ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಅಲ್ ಖೈದಾದಿಂದ ಪ್ರೇರಿತನಾಗಿದ್ದ ಎನ್ನಲಾಗಿದ್ದು, ಈತ ಪ್ರಕರಣದ ಇತರ ಇಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹಮದ್ ಮತ್ತು ಸಯ್ಯದ್ ಯಾಸಿನ್ ಜೊತೆ ಉಗ್ರ ಸಂಘಟನೆಗಳ ವಿಡಿಯೋಗಳನ್ನು ಸೇವ್ ಮಾಡಿ ಶೇರ್ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.
"ಶಾರೀಕ್ ಅಫ್ಘಾನಿಸ್ತಾನದ ಯುದ್ಧ ಹಾಗೂ ಅಲ್-ಖೈದಾ ಮತ್ತು ಇಸಿಸ್ ಭಾಷಣಗಳ ವೀಡಿಯೊಗಳನ್ನು ಇಟ್ಟುಕೊಂಡಿದ್ದು, ಅದನ್ನು ಉರ್ದುಗೆ ಅನುವಾದಿಸಲಾಗಿದೆ. ಈ ವಿಡಿಯೋಗಳನ್ನು ಟೆಲಿಗ್ರಾಮ್, ಸಿಗ್ನಲ್, ಇನ್‌ಸ್ಟಾಗ್ರಾಮ್, ವೈರ್, ಎಲಿಮೆಂಟ್ ಇತ್ಯಾದಿಗಳ ಮೂಲಕ ಉಗ್ರವಾದ, ಮೂಲಭೂತವಾದ, ಐಸಿಸ್ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದ ಪಿಡಿಎಫ್ ಫೈಲ್‌ಗಳು, ವೀಡಿಯೊಗಳು, ಆಡಿಯೊಗಳು ಮತ್ತು ಲಿಂಕ್‌ಗಳನ್ನು ಯಾಸಿನ್‌ಗೆ ಕಳುಹಿಸುತ್ತಿದ್ದ. ಈ ಮೂಲಕ ಮಾಜ್‌ನನ್ನು ಬ್ರೈನ್‌ವಾಶ್ ಮಾಡಿದ್ದ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮಂಗಳೂರು ಸ್ಫೋಟ ಪ್ರಕರಣ: ಸ್ಯಾಟ್ ಲೈಟ್ ಫೋನ್ ಬಳಕೆಯಾಗಿಲ್ಲ- ಎಸ್ ಪಿ ಸ್ಪಷ್ಟನೆ; ಕದ್ರಿ ದೇವಾಲಯಕ್ಕೆ ಬಿಗಿ ಭದ್ರತೆ
ಮಾಜ್ ಮುನೀರ್ ಅಹಮದ್ ಮತ್ತು ಸಯ್ಯದ್ ಯಾಸಿನ್ ಇಬ್ಬರೂ ಶಿವಮೊಗ್ಗದಲ್ಲಿ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗಳಾಗಿದ್ದಾರೆ.
ಮೂವರು ಇಸಿಸ್‌ನ ಅಧಿಕೃತ ಮಾಧ್ಯಮ ಕೇಂದ್ರ ಅಲ್-ಹಯಾತ್ ಟೆಲಿಗ್ರಾಮ್‌ನಲ್ಲಿ ನಡೆಸುತ್ತಿರುವ ಚಾನೆಲ್‌ಗಳ ಸದಸ್ಯರಾಗಿದ್ದಾರೆ. ಶಾರಿಕ್ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಿದ್ಧಾಂತಗಳನ್ನು ಪ್ರತಿಪಾದಿಸುತ್ತಿದ್ದ ಎಂದು ಮೂಲವೊಂದು ತಿಳಿಸಿದೆ.
ಶಾರಿಕ್ ಮತ್ತು ಅವರ ಸಹಚರರು 'ಖಲಿಫೇಟ್' ಸ್ಥಾಪಿಸಲು ಮತ್ತು ಷರಿಯಾ ಕಾನೂನನ್ನು ಹೇರಲು ಬಯಸಿದ್ದರು ಎಂದು ಹೇಳಲಾಗುತ್ತಿದೆ.
"ಕಾಫಿರರ" ವಿರುದ್ಧ ಅವರು 'ಜಿಹಾದ್' ನಡೆಸಬೇಕೆಂದು ಶಾರಿಕ್ ಬಯಸಿದ್ದ. ಇದರೊಂದಿಗೆ ತಮ್ಮ ಸಹಚರರೊಂದಿಗೆ ಬಾಂಬ್ ತಯಾರಿಕೆಯ ಪಿಡಿಎಫ್‌ಗಳನ್ನು ಹಂಚಿಕೊಳ್ಳುತ್ತಿದ್ದರು ಮತ್ತು ಶಿವಮೊಗ್ಗದಲ್ಲಿ ಪ್ರಾಯೋಗಿಕ ಸ್ಫೋಟದ ಮೊದಲು ಆನ್‌ಲೈನ್‌ನಲ್ಲಿ ಟೈಮರ್-ರಿಲೇ ಸರ್ಕ್ಯೂಟ್‌ಗಳನ್ನು ಕೂಡ ಖರೀದಿಸಿದ್ದ ಎಂದು ವರದಿಗಳು ತಿಳಿಸಿವೆ.
ಮಂಗಳೂರು ಸ್ಫೋಟಕ್ಕೂ ಮುನ್ನ ಅವರು ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದರು. ಶಾರಿಕ್ ಕ್ರಿಪ್ಟೋ ಮೂಲಕ ಯಾಸಿನ್‌ಗೆ ಬಾಂಬ್‌ಗಳಿಗಾಗಿ ಹಣವನ್ನು ಕಳುಹಿಸಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.