ವ್ಯರ್ಥ, ಹಣ ನೀರುಪಾಲು!: ದಕ್ಷಿಣ ಕನ್ನಡ ಜಿಲ್ಲೆಗೆ ಲವಣ ನೀರು ಶುದ್ಧೀಕರಣ ಘಟಕ ಏಕೆ ಬೇಕು? ತಜ್ಞರು, ಪರಿಸರವಾದಿಗಳ ಪ್ರಶ್ನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಶುಕ್ರವಾರ ಕಡಲತಡಿ ಮಂಗಳೂರಿಗೆ ಆಗಮಿಸಿ ಸಮುದ್ರ ನೀರಿನಿಂದ ಉಪ್ಪನ್ನು ತೆಗೆಯುವ ಪ್ರಕ್ರಿಯೆಯ ಸಮುದ್ರ ಲವಣ ನೀರು ಶುದ್ಧೀಕರಣ ಘಟಕ (Desalination plant)ಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಘಟಕದ ಪ್ರಸ್ತುತತೆ, ಉಪಯುಕ್ತತೆ ಬಗ್ಗೆ ಪ್ರಶ್ನೆಗಳು, ಆಕ್ಷೇಪಗಳು ಎದ್ದಿವೆ.
ಮಂಗಳೂರಿನಲ್ಲಿ ಪ್ರಧಾನಿ ಮೋದಿಯವರಿಗೆ ರಾಜ್ಯ ಬಿಜೆಪಿ ನಾಯಕರಿಂದ ಸನ್ಮಾನ
ಮಂಗಳೂರಿನಲ್ಲಿ ಪ್ರಧಾನಿ ಮೋದಿಯವರಿಗೆ ರಾಜ್ಯ ಬಿಜೆಪಿ ನಾಯಕರಿಂದ ಸನ್ಮಾನ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿನ್ನೆ ಶುಕ್ರವಾರ ಕಡಲತಡಿ ಮಂಗಳೂರಿಗೆ ಆಗಮಿಸಿ ಸಮುದ್ರ ನೀರಿನಿಂದ ಉಪ್ಪನ್ನು ತೆಗೆಯುವ ಪ್ರಕ್ರಿಯೆಯ ಸಮುದ್ರ ಲವಣ ನೀರು ಶುದ್ಧೀಕರಣ ಘಟಕ (Desalination plant)ಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆದರೆ ಘಟಕದ ಪ್ರಸ್ತುತತೆ, ಉಪಯುಕ್ತತೆ ಬಗ್ಗೆ ಪ್ರಶ್ನೆಗಳು, ಆಕ್ಷೇಪಗಳು ಎದ್ದಿವೆ.

ಪ್ರತಿದಿನ ಕೇವಲ 30 ಮಿಲಿಯನ್ ಲೀಟರ್ ಸಮುದ್ರ ಉಪ್ಪು ನೀರನ್ನು ಬಳಸಲು ಯೋಗ್ಯ ನೀರನ್ನಾಗಿ ಬಳಸುವ ಯೋಜನೆಯ ಘಟಕ ನಿರ್ಮಾಣಕ್ಕೆ 677 ಕೋಟಿ ರೂಪಾಯಿ ಖರ್ಚು ಮಾಡುವ ಅಗತ್ಯತೆಯನ್ನು ಜಲ ತಜ್ಞರು ಮತ್ತು ಪರಿಸರವಾದಿಗಳು ಪ್ರಶ್ನಿಸುತ್ತಿದ್ದಾರೆ.

ಇಡೀ ವರ್ಷಕ್ಕೆ ಈ ಘಟಕ 1 ಟಿಎಂಸಿ ಉಪ್ಪು ನೀರನ್ನು ಸಿಹಿಗೊಳಿಸುವ ಪ್ರಕ್ರಿಯೆ ಮಾಡಲಿದೆ. 2 ಸಾವಿರ ಟಿಎಂಸಿ ಸ್ವಚ್ಛ ನೀರು ಶರಾವತಿ ನದಿಯಿಂದ ಸಮುದ್ರಕ್ಕೆ ಹರಿದುಬರಲಿದೆ. ಅಲ್ಲದೆ 44 ಇತರ ನದಿಗಳು ದಕ್ಷಿಣ ಕನ್ನಡ ಮೂಲಕ ಹಾದುಹೋಗುತ್ತದೆ. ಸಾಕಷ್ಟು ಶುದ್ಧ ನೀರು ಸಮುದ್ರ ಪಾಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲಿ ಹೀಗೆ ಬಳಕೆಗೆ ಯೋಗ್ಯ ನೀರು ಸಾಕಷ್ಟು ಇರುವಾಗ ಈ ಘಟಕದ ಅಗತ್ಯವೇನಿದೆ ಎಂದು ತಜ್ಞರು, ಪರಿಸರವಾದಿಗಳು ಪ್ರಶ್ನಿಸುತ್ತಿದ್ದಾರೆ.

ಖ್ಯಾತ ಪರಿಸರವಾದಿ ಮತ್ತು ಪರಿಸರ ಬೆಂಬಲಿತ ಗುಂಪು ಲಿಯೊ ಸಾಲ್ಡಾನ್ಹ, ಅತಿ ಹೆಚ್ಚು ಮಳೆ ಬೀಳುವ ಮತ್ತು ಜಲ ಸಂಪದ್ಭರಿತ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವಣ ಶುದ್ಧೀಕರಣ ಘಟಕವನ್ನು ಸ್ಥಾಪಿಸುವುದು ಅಸಂಬದ್ಧ ಕಲ್ಪನೆಯಾಗಿದೆ, ಹಣವನ್ನು ನೀರುಪಾಲಾಗಿಸುವ ಉದ್ದೇಶ ಕಾಣುತ್ತಿದೆ. ಒಟ್ಟಾರೆಯಾಗಿ, 44 ನದಿಗಳು ಪಶ್ಚಿಮ ಘಟ್ಟಗಳ ಇಳಿಜಾರುಗಳಲ್ಲಿ ಹರಿಯುತ್ತವೆ. ನದಿಗಳ ನೀರು ಸಮುದ್ರ ಪಾಲಾಗುತ್ತವೆ. ಈ ನೀರನ್ನು ಬಳಸಬಹುದಲ್ಲವೇ ಎಂದು ಕೇಳುತ್ತಾರೆ.

ಪಶ್ಚಿಮ ಘಟ್ಟಗಳಲ್ಲಿನ ಅರಣ್ಯಗಳನ್ನು ಸಂರಕ್ಷಿಸಿದರೆ, ಹೊಲಗಳು ಮತ್ತು ಜೌಗು ಪ್ರದೇಶಗಳನ್ನು ನಾಶಪಡಿಸದಿದ್ದರೆ ಈ ಪ್ರದೇಶದಲ್ಲಿ ಸಂವೇದನಾಶೀಲ ಗ್ರಾಮೀಣ ಮತ್ತು ನಗರಾಭಿವೃದ್ಧಿಗೆ ಸಾಕಷ್ಟು ನೀರು ಸಿಗುತ್ತದೆ. ಮಂಗಳೂರನ್ನು ಇನ್ನೊಂದು ಮುಂಬೈಯನ್ನಾಗಿ ಮಾಡಲು ಮುಂದಾದರೆ ಸಾಕಾಗುವುದಿಲ್ಲ. ಇದು ಸಮರ್ಥನೀಯವಾದ ನಿರ್ಧಾರವಲ್ಲ. ಇಡೀ ಪ್ರದೇಶವನ್ನು ನಾಶಪಡಿಸುವ ಯೋಜನೆಯಷ್ಟೆ ಎನ್ನುತ್ತಾರೆ.

ಸಮುದ್ರದ ನೀರು ಹೇರಳವಾಗಿದ್ದು, ಘಟಕ ಸ್ಥಾಪಿಸಿದರೆ ಯಾವುದೇ ಪ್ರತಿಕೂಲ ಪರಿಣಾಮಗಳಿಲ್ಲ ಎಂದು ಊಹಿಸುತ್ತದೆ. ಆದರೆ ಘಟಕದಿಂದ ಉಪ್ಪುನೀರು ಲವಣಾಂಶದ ಆಘಾತಕ್ಕೆ ಕಾರಣವಾಗುತ್ತದೆ, ಇದು ಸಮುದ್ರ ಪರಿಸರ ವ್ಯವಸ್ಥೆಗಳನ್ನು ಹಾಳುಮಾಡುತ್ತದೆ. ಘಟಕಕ್ಕೆ ಅಗಾಧವಾದ ವಿದ್ಯುತ್ ಅಗತ್ಯವಿರುತ್ತದೆ, ದುಬಾರಿಯಾಗಿದೆ. ಭಾರತಕ್ಕೆ ಭಾರತದಂತಹ ದೇಶಕ್ಕೆ ಆದಾಯ ಮಾರ್ಗವಿದೆಯೇ ಎಂದು ಅವರು ಪ್ರಶ್ನಿಸುತ್ತಾರೆ.

ಪಶ್ಚಿಮ ಕರಾವಳಿಯ ಪ್ರದೇಶಗಳು ಹೇರಳವಾದ ಜಲಸಂಪನ್ಮೂಲಗಳನ್ನು ಹೊಂದಿವೆ ಎಂಬುದು ನಿಜ. ಆದರೆ ಇಲ್ಲಿನ ಹೆಚ್ಚಿನ ನಗರ ಪ್ರದೇಶಗಳು ನೀರಿನ ಕೊರತೆಯಿಂದ ತತ್ತರಿಸಿರುವುದರಿಂದ ಒಂದು ತಿರುವು ಕೂಡ ಇದೆ. ಅಣೆಕಟ್ಟುಗಳು ಮತ್ತು ಸಂಗ್ರಹಣಾ ಸೌಲಭ್ಯಗಳ ಕೊರತೆಯೇ ಇದಕ್ಕೆ ಕಾರಣ. ನೇತ್ರಾವತಿ ನದಿಯ ಉದ್ದಕ್ಕೂ ಇರುವ ಎತ್ತಿನಹೊಳೆ ಜಲಾಶಯವು ತುಲನಾತ್ಮಕವಾಗಿ ಕಡಿಮೆ ಸಂಗ್ರಹವನ್ನು ಹೊಂದಿದೆ. ನಗರ ಪ್ರದೇಶಗಳಲ್ಲಿ ನೀರಿನ ಕೊರತೆಯುಂಟಾಗಬಾರದು ಎಂದು ಘಟಕ ಸ್ಥಾಪಿಸಲಾಗುತ್ತಿದೆ. ನೀರಿನ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚಿನ  ಘಟಕಗಳು ಇರಬಹುದು ಎಂದು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ಈ ಯೋಜನೆಯನ್ನು ಅಮೂಲ್ಯ ಸಂಪನ್ಮೂಲಗಳ ವ್ಯರ್ಥ ಎಂದು ಕಾಂಗ್ರೆಸ್ ಕರೆದಿದೆ. ಇಷ್ಟು ಪ್ರಮಾಣದ ಸಿಹಿನೀರಿನ ಸಂಪನ್ಮೂಲಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಮೊತ್ತದ ಹಣವನ್ನು ವ್ಯಯಿಸಿ ಘಟಕ ಸ್ಥಾಪಿಸುವುದು ಸಂಪೂರ್ಣವಾಗಿ ಅನಗತ್ಯ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿದಿನ ಲಕ್ಷಾಂತರ ಲೀಟರ್ ಸಿಹಿನೀರು ದಕ್ಷಿಣ ಕನ್ನಡದಿಂದ ಅರಬ್ಬಿ ಸಮುದ್ರಕ್ಕೆ ಹರಿಯುತ್ತಿದ್ದಂತೆ, ಕೇವಲ 30 ಮಿಲಿಯನ್ ಲೀಟರ್ ಉಪ್ಪುನೀರನ್ನು ನಿರ್ಲವಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸಣ್ಣ ಶೇಖರಣಾ ಸೌಲಭ್ಯಗಳನ್ನು ನಿರ್ಮಿಸಿ ಸಮುದ್ರಕ್ಕೆ ಹರಿಯುವ ಸಣ್ಣ ಪ್ರಮಾಣದ ಸಿಹಿನೀರನ್ನು ಉಳಿಸಲು ಪ್ರಯತ್ನಿಸುವುದು ಇದಕ್ಕಿಂತ ಸುಲಭ ವಿಧಾನವಾಗಿದೆ. ಈ ಘಟಕದಿಂದ ಖಂಡಿತವಾಗಿಯೂ ಜನರ ಅಗತ್ಯಗಳನ್ನು ಪೂರೈಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ದಕ್ಷಿಣ ಕನ್ನಡ ಮೂಲದವರಾದ ಬಿ ಕೆ ಹರಿಪ್ರಸಾದ್ ಹೇಳುತ್ತಾರೆ. ಜೆಡಿಎಸ್ ಹಿರಿಯ ನಾಯಕ ಎಚ್.ಡಿ.ಕುಮಾರಸ್ವಾಮಿ, ಇದು ಕೇವಲ ಬಿಳಿ ಆನೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಮಾಜಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಮತ್ತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಅವರ ಅವಧಿಯಲ್ಲಿ ಇಲಾಖೆಯು ಉಪ್ಪುನೀರಿನ ಸಂಶೋಧನೆಯನ್ನು ನಡೆಸಿತು. ಪ್ರತಿ ಲೀಟರ್‌ಗೆ ಸುಮಾರು 30 ಪೈಸೆಗೆ ನಿರ್ಲವಣೀಕರಣ ಘಟಕ ನಿರ್ಮಿಸಲು ಸಾಧ್ಯ ಎಂದು ತೀರ್ಮಾನಿಸಿದ್ದರು. ಕರಾವಳಿ ಪ್ರದೇಶಗಳಲ್ಲಿನ ಉಪ್ಪುನೀರಿನ ಘಟಕಗಳು ಸಮಸ್ಯೆಗೆ ಶಾಶ್ವತ ಪರಿಹಾರವಾಗುವುದಿಲ್ಲ. ನೀರಿನ ಅಭಾವಕ್ಕೆ ಇದು ಮಧ್ಯಂತರ ಪರಿಹಾರವಷ್ಟೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com