ಸಿಲಿಕಾನ್ ಸಿಟಿ ಬೆಂಗಳೂರು ಜಲಾವೃತ; ಟ್ರ್ಯಾಕ್ಟರ್‌ನಲ್ಲಿ ಕಚೇರಿಗೆ ಹೊರಟ ಟೆಕ್ಕಿಗಳು!

ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನಗರದ ಬಹುತೇಕ ಭಾಗಗಳು ನೀರಿನಲ್ಲಿ ಜಲಾವೃತವಾಗಿದ್ದು, ಟೆಕಿಗಳು ಟ್ರ್ಯಾಕ್ಟರ್‌ನಲ್ಲಿ ಕಚೇರಿಗೆ ಹೊರಟ ದೃಶ್ಯ ಇದೀಗ ವ್ಯಾಪಕ ಚರ್ಚೆಗೀಡಾಗುತ್ತಿದೆ.
ಟ್ರಾಕ್ಟರ್ ಆಶ್ರಯಿಸಿದ ಟೆಕಿಗಳು
ಟ್ರಾಕ್ಟರ್ ಆಶ್ರಯಿಸಿದ ಟೆಕಿಗಳು

ಬೆಂಗಳೂರು: ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನಗರದ ಬಹುತೇಕ ಭಾಗಗಳು ನೀರಿನಲ್ಲಿ ಜಲಾವೃತವಾಗಿದ್ದು, ಟೆಕಿಗಳು ಟ್ರ್ಯಾಕ್ಟರ್‌ನಲ್ಲಿ ಕಚೇರಿಗೆ ಹೊರಟ ದೃಶ್ಯ ಇದೀಗ ವ್ಯಾಪಕ ಚರ್ಚೆಗೀಡಾಗುತ್ತಿದೆ.

ಹೌದು.. ನಿರಂತರ ಭಾರೀ ಮಳೆಯಿಂದಾಗಿ ಬೆಂಗಳೂರು ನಗರ ತೀವ್ರ ಜಲಾವೃತಗೊಂಡಿದ್ದು, ಭಾರತದ 'ಸಿಲಿಕಾನ್ ವ್ಯಾಲಿ'ಯಲ್ಲಿನ ಅನೇಕ ಐಟಿ ವೃತ್ತಿಪರರು ತಮ್ಮ ಕೆಲಸದ ಸ್ಥಳಗಳನ್ನು ತಲುಪಲು ಟ್ರಾಕ್ಟರ್‌ಗಳನ್ನು ಆಶ್ರಯಿಸುತ್ತಿದ್ದಾರೆ. ಸೋಮವಾರ ನಗರದ ರೈನ್ ಬೋ ಲೇಔಟ್ ನಲ್ಲಿನ ನಿವಾಸಿಗಳು  ಮತ್ತು ಇಲ್ಲಿ ವಾಸಿಸುವ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗಳನ್ನು ತಲುಪಲು ಟ್ರ್ಯಾಕ್ಟರ್‌ಗಳ ನೆರವು ಪಡೆದರು. 

ನಗರದ ಐಟಿ ವೃತ್ತಿಪರರಿಗೆ ಟ್ರ್ಯಾಕ್ಟರ್ ಸವಾರಿ ಮಾಡುವುದು ಒಟ್ಟಿನಲ್ಲಿ ಹೊಸ ಅನುಭವವಾಗಿದೆ. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. 

ಈ ಕುರಿತು ಮಾತನಾಡಿರುವ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುವ ಮಹಿಳೆಯೊಬ್ಬರು, 'ಮಳೆ ಕಾರಣ ನೀಡಿ ನಾವು ಕಚೇರಿಯಿಂದ ಹಲವಾರು ರಜೆಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಇದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತಿದೆ. 50 ರೂ.ಗೆ ಡ್ರಾಪ್ ಮಾಡಲು ನಾವು ಟ್ರಾಕ್ಟರ್‌ಗಳಿಗಾಗಿ ಕಾಯುತ್ತಿದ್ದೇವೆ. ಕೆಲ ಟ್ರಾಕ್ಟರ್ ಚಾಲಕರು ನಮಗೆ ನೆರವು ನೀಡಲು ಮುಂದೆ ಬಂದಿದ್ದಾರೆ ಎಂದು ಹೇಳಿದ್ದಾರೆ. 

ಶಾಲಾ ಮಕ್ಕಳಿಗೂ ಟ್ರಾಕ್ಟರ್ ಆಸರೆ
ಮಾತ್ರವಲ್ಲ ಇತ್ತ ಮಳೆ ನೀರಿನಿಂದಾಗಿ ಜಲಾವೃತ್ತವಾಗಿರುವ ಮಾರತ್ ಹಳ್ಳಿಯ ಹಲವು ಪ್ರದೇಶಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಟ್ರಾಕ್ಟರ್ ಗಳನ್ನೇ ಆಶ್ರಯಿಸುವ ಪರಿಸ್ಥಿತಿ ಇದೆ. ಇಂದೂ ಕೂಡ ಹತ್ತಾರು ಮಕ್ಕಳ ಏಕಕಾಲದಲ್ಲಿ ಟಾಕ್ಟರ್ ನಲ್ಲಿ ಕುಳಿತು ಶಾಲೆಗೆ ತೆರಳುತ್ತಿರುವ ದೃಶ್ಯಗಳು ವೈರಲ್ ಆಗಿತ್ತು.

ರಸ್ತೆಯಲ್ಲಿ ನೀರು ಭಾರಿ ಟ್ರಾಫಿಕ್ ಜಾಮ್
ಜಲಾವೃತದಿಂದಾಗಿ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಇದರಿಂದ ಸಾಮಾನ್ಯ ಜನರ ಜೀವನ ಅಸ್ತವ್ಯಸ್ತವಾಗಿದೆ. ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಚಲಾಯಿಸುವುದು ಕಷ್ಟಕರವಾಗಿದೆ ಎಂದು ಕೋರಮಂಗಲದ ಸ್ಥಳೀಯರೊಬ್ಬರು ಹೇಳಿದರು. "ತುಂಬಾ ಮಳೆಯಾಗಿದೆ. ಬೆಳಗ್ಗೆ ಎದ್ದು ನೋಡಿದಾಗ ರಸ್ತೆಗಳು ಜಲಾವೃತವಾಗಿದೆ. ರಸ್ತೆಯಲ್ಲಿ ನೀರು ಡಿವೈಡರ್ ಮಟ್ಟಕ್ಕೆ ಏರಿದೆ. ನಂತರ ನಾವು ರಸ್ತೆ ಮತ್ತು ನೆಲಮಾಳಿಗೆಯಿಂದ ನೀರನ್ನು ಪಂಪ್ ಮಾಡಲು ಪ್ರಾರಂಭಿಸಿದ್ದೇವೆ. ನನ್ನ ಮನೆಯ ಇಡೀ ನೆಲಮಾಳಿಗೆಯು ನೀರಿನಲ್ಲಿ ಮುಳುಗಿದೆ" ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು. 

ನಗರದ ನೆಲಮಾಳಿಗೆಗಳ ಅಂಗಡಿಗಳು ಮತ್ತು ಅಪಾರ್ಟ್‌ಮೆಂಟ್‌ಗಳ ಅನೇಕ ಸ್ಥಳಗಳು ಜಲಾವೃತಗೊಂಡಿವೆ. ಮಳೆ ಬಂದಾಗಲೆಲ್ಲ ಇದೇ ರೀತಿ ಪರಿಸ್ಥಿತಿ ಎದುರಾಗುತ್ತದೆ. ಈ ವರ್ಷ ಧಾರಾಕಾರ ಮಳೆಯಾಗಿದೆ, ನೆಲಮಾಳಿಗೆಯಲ್ಲಿ ಅಂಗಡಿಗಳನ್ನು ಹೊಂದಿರುವವರು ತೊಂದರೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು. ವರ್ಷಕ್ಕೊಮ್ಮೆ ಇಂತಹ ಪರಿಸ್ಥಿತಿ ಎದುರಾಗುತ್ತಿದ್ದು, ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ನೀರನ್ನು ಪಂಪ್‌ ಮಾಡಬೇಕಾಗಿದೆ ಎಂದು ಮತ್ತೊಬ್ಬ ಸ್ಥಳೀಯರು ಹೇಳಿದರು.

''ಪ್ರತಿ ವರ್ಷ ಮಳೆ ಬಂದ ಮೇಲೆ ನೀರಿನ ಬವಣೆ ಉಂಟಾಗುತ್ತಿದ್ದು, ನೀರು ಹೊರ ಹಾಕಬೇಕು, ಶಾಶ್ವತ ಪರಿಹಾರ ಇಲ್ಲ, ರಸ್ತೆ ನಿರ್ಮಾಣ ಮಾಡುವಾಗ ಚರಂಡಿ ವ್ಯವಸ್ಥೆ ಸರಿಯಾಗಿ ಮಾಡಿಲ್ಲ, ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅನೇಕ ಮಹಿಳೆಯರು ನಿಜವಾಗಿ ಜಾರಿ ನೀರಿಗೆ ಬಿದ್ದಿದ್ದಾರೆ,’’ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಇದನ್ನೂ ಓದಿ: ತೊರೆಕಾಡನಹಳ್ಳಿ ಪಂಪ್ ಹೌಸ್ ಸುತ್ತಾ ಕಾಂಕ್ರೀಟ್ ತಡೆಗೋಡೆ ನಿರ್ಮಾಣ: ಸಿಎಂ ಬೊಮ್ಮಾಯಿ
 
ಏತನ್ಮಧ್ಯೆ, ನಗರದ ಪ್ರವಾಹ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ 300 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ರಾಜ್ಯಾದ್ಯಂತ ಮಳೆ ಮತ್ತು ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ 600 ಕೋಟಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಸ್ತೆಗಳು, ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು, ಶಾಲೆಗಳು ಮುಂತಾದ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಪುನಃಸ್ಥಾಪಿಸಲು ಬೆಂಗಳೂರಿಗೆ 300 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಬೊಮ್ಮಾಯಿ ಹೇಳಿದರು.

ಜುಲೈನಲ್ಲಿ, ಕರ್ನಾಟಕವು ಮಳೆಯಿಂದಾಗಿ ಭಾರೀ ಪ್ರವಾಹವನ್ನು ಅನುಭವಿಸಿತು, ನಂತರ ರಕ್ಷಣಾ ಕಾರ್ಯಾಚರಣೆಗಳು ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಕೂಡ ಕೇಂದ್ರದಿಂದ ಆರ್ಥಿಕ ನೆರವು ಪಡೆಯಬೇಕಿತ್ತು ಎಂದು ನಿವಾಸಿಯೊಬ್ಬರು ಕಿಡಿಕಾರಿದ್ದಾರೆ.

ಇದು ಕಳೆದ 32 ವರ್ಷಗಳಲ್ಲಿ (1992-93) ಅತಿ ಹೆಚ್ಚು ಮಳೆಯಾಗಿದ್ದು, ಬೆಂಗಳೂರಿನ 164 ಕೆರೆಗಳು ನೀರಿನಿಂದ ತುಂಬಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com