ಒತ್ತುವರಿ ತೆರವುಗೊಳಿಸಲು ನೋಟಿಸ್ ನೀಡುವ ಅಗತ್ಯವಿಲ್ಲ: ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಮಿತಿಯ ಸದಸ್ಯರು, ಜಲಮೂಲಗಳ ಮೇಲೆ ಮತ್ತು ಬಫರ್ ವಲಯಗಳಲ್ಲಿ ಒತ್ತುವರಿ ಮಾಡಿಕೊಂಡಿರುವ ಆಸ್ತಿಗಳನ್ನು ತೆರವುಗೊಳಿಸಲು ನೋಟಿಸ್‌ ನೀಡುವ ಅಗತ್ಯವಿಲ್ಲ. ಆದಾಗ್ಯೂ  ವ್ಯಕ್ತಿಗೆ ತಿಳಿಸಲು ಕಾನೂನು ಪ್ರಕ್ರಿಯೆಯ ಭಾಗವಾಗಿ ಮಾತ್ರ ನೋಟಿಸ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ
ಬೆಂಗಳೂರಿನಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ

ಬೆಂಗಳೂರು: ಹೈಕೋರ್ಟ್ ನಿರ್ದೇಶನದಂತೆ ಒತ್ತುವರಿ ಮಾಡಿಕೊಂಡಿದ್ದ ಆಸ್ತಿಗಳನ್ನು ನೆಲಸಮ ಮಾಡುವ ಮೂಲಕ ಕಂದಾಯ ಇಲಾಖೆ ಮತ್ತು (ಬಿಬಿಎಂಪಿ)  ಅತಿಕ್ರಮಣ ತೆರವು ಕಾರ್ಯಾಚರಣೆ ಆರಂಭಿಸಿದೆ. ಇದೇ ವೇಳೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸಮಿತಿಯ ಸದಸ್ಯರು, ಜಲಮೂಲಗಳ ಮೇಲೆ ಮತ್ತು ಬಫರ್ ವಲಯಗಳಲ್ಲಿ ಒತ್ತುವರಿ ಮಾಡಿಕೊಂಡಿರುವ ಆಸ್ತಿಗಳನ್ನು ತೆರವುಗೊಳಿಸಲು ನೋಟಿಸ್‌ ನೀಡುವ ಅಗತ್ಯವಿಲ್ಲ. ಆದಾಗ್ಯೂ  ವ್ಯಕ್ತಿಗೆ ತಿಳಿಸಲು ಕಾನೂನು ಪ್ರಕ್ರಿಯೆಯ ಭಾಗವಾಗಿ ಮಾತ್ರ ನೋಟಿಸ್‌ಗಳನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಎಡೆಬಿಡದೆ ಸುರಿದ ಭಾರಿ ಮಳೆಯಿಂದಾಗಿ ಪೂರ್ವ ಬೆಂಗಳೂರಿನ ಕೆಲವು ಭಾಗಗಳಲ್ಲಿ ಹಾನಿಗೊಳಗಾದ ಕುರಿತು, ಹೆಸರು ಹೇಳಲು ಇಚ್ಛಿಸದ ಸಮಿತಿಯ ಹಿರಿಯ ಸದಸ್ಯರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

'ಸಮಿತಿಯ ಅಧಿಕಾರಾವಧಿಯು ಇನ್ನೊಂದು ವರ್ಷ ಮುಂದುವರಿದಿದ್ದರೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳು ನಿರ್ದೇಶನದಂತೆ ಕೆಲಸ ಮಾಡಿದ್ದರೆ, ಆಗ ಈ ಪ್ರದೇಶಗಳಲ್ಲಿನ ಪ್ರವಾಹ ಮತ್ತು ಹಾನಿಗಳು ಶೇ 50 ರಷ್ಟು ಕಡಿಮೆಯಾಗುತ್ತಿತ್ತು' ಎಂದಿದ್ದಾರೆ.

ಎರಡು ಪ್ರಮುಖ ಕೆರೆಗಳಾದ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ ಬೆಂಕಿ ಮತ್ತು ಮಾಲಿನ್ಯದ ಬಗ್ಗೆ ಪರಿಶೀಲಿಸಲು ಮತ್ತು ಅವುಗಳಲ್ಲಿ ಹೂಳು ತೆಗೆದಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಕೆರೆಯ ಜಾಗಗಳು, ಜೌಗು ಪ್ರದೇಶಗಳು ಮತ್ತು ಬಫರ್ ವಲಯಗಳನ್ನು ರಕ್ಷಿಸಲು ಎನ್‌ಜಿಟಿಯು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯ ಅಧಿಕಾರಾವಧಿ 2021 ರಲ್ಲಿ ಕೊನೆಗೊಂಡಿತು.

ಪ್ರವಾಹಕ್ಕೆ ಅತಿಕ್ರಮಣ ಮಾತ್ರ ಸಮಸ್ಯೆಯಲ್ಲ ಎನ್ನುವ ಅವರು, ಮಳೆನೀರು ಹೋಗುವ ಚರಂಡಿಗಳ ಸಾಮರ್ಥ್ಯವನ್ನು ಅವಲಂಭಿಸಿದೆ. ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಚಾಪೆಯಡಿಯಲ್ಲಿ ತೇಲಾಡುತ್ತಿದ್ದಾರೆ. ಚರಂಡಿಗಳ ಅಗಲ ಕುಗ್ಗಿದೆ, ಯಾವುದೇ ಇಂಗು ಗುಂಡಿಗಳಿಲ್ಲ, ಆದ್ದರಿಂದ 170 ಮಿಮೀಗಿಂತ ಹೆಚ್ಚು ಮಳೆಯಾದಾಗ ಚರಂಡಿಗಳು ಎಲ್ಲಾ ಮಳೆ ನೀರನ್ನು ಒಯ್ಯುತ್ತವೆ ಎಂದು ನಿರೀಕ್ಷಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

'ಇನ್ನೊಂದು ಪ್ರಮುಖ ಸಮಸ್ಯೆಯೇ ಭೂ ಬಳಕೆಯಾಗಿದೆ. ಮಹದೇವಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 20-25 ವರ್ಷಗಳಲ್ಲಿ ಕೃಷಿ ಮತ್ತು ಭತ್ತದ ಗದ್ದೆಗಳನ್ನು ರಚಿಸಲಾಗಿದೆ. ಈ ಪ್ರದೇಶಗಳು ಕಡಿಮೆ ಎತ್ತರದಲ್ಲಿವೆ ಮತ್ತು ಮಹದೇಶ್ವರನಗರ ಅಥವಾ ಲಾಲ್‌ಬಾಗ್ ಅಥವಾ ಇತರ ಪ್ರದೇಶಗಳಿಗೆ ಹೋಲಿಸಿದರೆ ಬಯಲು ಪ್ರದೇಶಗಳಾಗಿವೆ. ಅಲ್ಲಿ ಏರಿಳಿತಗಳು ಮತ್ತು ಎತ್ತರಗಳಿವೆ. ಆದ್ದರಿಂದ ಸಾಂಪ್ರದಾಯಿಕವಾಗಿ ಅಂತಹ ಪ್ರದೇಶಗಳಿಂದ ಹರಿದು ಬರುವ ನೀರೆಲ್ಲ ಈ ಬಯಲು ಪ್ರದೇಶಗಳಿಗೆ ಹರಿದು ಬಂದು ನಿಲ್ಲುತ್ತದೆ. ಈಗಲೂ ಅದೇ ನಡೆದಿದೆ. ಹೀಗಾಗಿ ನೀರು ಹರಿಯುವ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿಲ್ಲ. ಬದಲಿಗೆ ನೀರು ನಿಂತ ಜಾಗದಲ್ಲಿ ಪ್ರವಾಹದ ಸಮಸ್ಯೆ ಉಂಟಾಗಿದೆ' ಎಂದು ಸದಸ್ಯರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com