ಬೆಂಗಳೂರಿಗೆ ಹೊಸ ತಲೆನೋವು: ಪ್ರವಾಹ ಇಳಿಮುಖವಾದ ನಂತರ ಡೆಂಗ್ಯೂ, ವೈರಲ್ ಜ್ವರದ ಪ್ರಕರಣಗಳಲ್ಲಿ ಏರಿಕೆ!
ಬೆಂಗಳೂರಿನ ಮಹದೇವಪುರ ವಲಯದಲ್ಲಿ ಎರಡು ವಾರಗಳ ಹಿಂದೆ ಸುರಿದ ಭಾರಿ ಮಳೆಗೆ ಪ್ರವಾಹದ ನೀರು ಇಳಿಮುಖವಾಗಿದ್ದು, ಸೊಳ್ಳೆಗಳ ಉತ್ಪತ್ತಿ ತಾಣಗಳಲ್ಲಿ ಹೆಚ್ಚಳವಾಗಿದ್ದು, ಡೆಂಗ್ಯೂ ಮತ್ತು ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ
Published: 17th September 2022 12:12 PM | Last Updated: 17th September 2022 02:15 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರಿನ ಮಹದೇವಪುರ ವಲಯದಲ್ಲಿ ಎರಡು ವಾರಗಳ ಹಿಂದೆ ಸುರಿದ ಭಾರಿ ಮಳೆಗೆ ಪ್ರವಾಹದ ನೀರು ಇಳಿಮುಖವಾಗಿದ್ದು, ಸೊಳ್ಳೆಗಳ ಉತ್ಪತ್ತಿ ತಾಣಗಳಲ್ಲಿ ಹೆಚ್ಚಳವಾಗಿದ್ದು, ಡೆಂಗ್ಯೂ ಮತ್ತು ವೈರಲ್ ಜ್ವರ ಪ್ರಕರಣಗಳು ಹೆಚ್ಚಾಗುತ್ತಿವೆ.
ಈ ತಿಂಗಳಿನಲ್ಲಿ ಇದುವರೆಗೆ ರಾಜ್ಯದಲ್ಲಿ 635 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 103 ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಹದೇವಪುರ ವಲಯವೊಂದರಿಂದಲೇ 44 ಪ್ರಕರಣಗಳು ವರದಿಯಾಗಿದ್ದು, ಕಳೆದ ತಿಂಗಳು ವಲಯದಲ್ಲಿ 28 ಪ್ರಕರಣಗಳಿತ್ತು, ಈಗ ತೀವ್ರ ಏರಿಕೆಯಾಗಿದೆ. ಪ್ರವಾಹದಂತಹ ಪರಿಸ್ಥಿತಿಯನ್ನು ಪರಿಗಣಿಸಿ, ಮಹದೇವಪುರ ವಲಯದಲ್ಲಿ ಆರೋಗ್ಯ ಸಮಸ್ಯೆಗಳನ್ನು ಕನಿಷ್ಠಕ್ಕೆ ಸೀಮಿತಗೊಳಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಸೊಳ್ಳೆಗಳ ಉತ್ಪತ್ತಿಯನ್ನು ತಡೆಗಟ್ಟಲು ಪವರ್ ಸ್ಪ್ರೇಗಳನ್ನು ಬಳಸುವುದು, ಆರೋಗ್ಯ ಶಿಬಿರಗಳು ಸೇರಿದಂತೆ ಮುಂಜಾಗ್ರತಾ ಕ್ರಮಗಳನ್ನು ನಾವು ತೆಗೆದುಕೊಂಡಿದ್ದರಿಂದ, ನಾವು ರೋಗಕಾರಕಗಳಿಂದ ಹರಡುವ ರೋಗಗಳ ಪ್ರಮಾಣವನ್ನು ನಿಯಂತ್ರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. . BWSSB ಸಹ ಕ್ಲೋರಿನೇಷನ್ ಹೆಚ್ಚಿಸಿದೆ, ಇದರಿಂದಾಗಿ ನೀರಿನಿಂದ ಹರಡುವ ರೋಗಗಳನ್ನು ನಿಯಂತ್ರಿಸಬಹುದು. ಇನ್ನೂ ನಾಲ್ಕು ದಿನಗಳ ಕಾಲ ಆರೋಗ್ಯ ಶಿಬಿರಗಳು ನಡೆಯಲಿವೆ,'' ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು 'ಮಹಾ' ಮಳೆಗೆ ಕೊನೆಗೂ ಕಾರಣ ಕಂಡು ಹಿಡಿದ ವಿಜ್ಞಾನಿಗಳು..!! ಏನು ಗೊತ್ತಾ?
ಸಾಫ್ಟ್‌ವೇರ್ ಮತ್ತು ಐಟಿ/ಬಿಟಿ ವೃತ್ತಿಪರರಲ್ಲದೆ, ಬೆಳ್ಳಂದೂರು, ಹಗದೂರು ಮತ್ತು ವರ್ತೂರಿನಲ್ಲಿ ವಲಸೆ ಕಟ್ಟಡ ಕಾರ್ಮಿಕರಿದ್ದಾರೆ. 84 ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳು ಹೋಟೆಲ್‌ಗಳಿಗೆ ಸ್ಥಳಾಂತರಗೊಂಡಿವೆ. 400 ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಎರಡು ಛತ್ರಗಳಿಗೆ ಸ್ಥಳಾಂತರಗೊಂಡಿದ್ದ, ಅಲ್ಲಿ ಅವರಿಗೆ ಆಹಾರವನ್ನು ಒದಗಿಸಲಾಗುತ್ತಿತ್ತು, ಇದೀಗ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ನಾವು ಡೆಂಗ್ಯೂ ಮತ್ತು ವೈರಲ್ ಜ್ವರದ ಪ್ರಕರಣಗಳನ್ನು ಮಾತ್ರ ನೋಡಿದ್ದೇವೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ವೈರಲ್ ಜ್ವರ ಮತ್ತು ಶಂಕಿತ ಡೆಂಗೆ ಪ್ರಕರಣಗಳಲ್ಲಿ ಶೇ.5ರಷ್ಟು ಹೆಚ್ಚಳವಾಗಿದೆ ಎಂದು ಮಹದೇವಪುರ ವಲಯದ ಸರ್ಜಾಪುರ ರಸ್ತೆಯ ಅಪೋಲೋ ಕ್ಲಿನಿಕ್‌ನ ಮಕ್ಕಳ ತಜ್ಞ ಡಾ.ಮಿಥಿಲೇಶ್ ಕುಮಾರ್ ತಿಳಿಸಿದ್ದಾರೆ, ಸೊಳ್ಳೆ ನಿಯಂತ್ರಣದ ಜೊತೆಗೆ, ಜನರು ಫಿಲ್ಟರ್ ಮಾಡಿದ ಅಥವಾ ಕುದಿಸಿ ತಣ್ಣಗಾದ ನೀರನ್ನು ಕುಡಿಯಬೇಕು ಎಂದು ಅವರು ಸಲಹೆ ನೀಡಿದರು.