ತುಮಕೂರು: ಪ್ರತ್ಯೇಕ ಸ್ಮಶಾನವಿಲ್ಲ, ರಸ್ತೆ ಬದಿಯಲ್ಲೇ ದಲಿತ ಮಹಿಳೆ ಅಂತ್ಯಸಂಸ್ಕಾರ!

ಪ್ರತ್ಯೇಕ ಸ್ಮಶಾನವಿಲ್ಲದೇ ದಲಿತ ಮಹಿಳೆ ಅಂತ್ಯಸಂಸ್ಕಾರ ರಸ್ತೆ ಬದಿಯಲ್ಲೇ ಮಾಡಿರುವ ಧಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರತ್ಯೇಕ ಸ್ಮಶಾನವಿಲ್ಲದೇ ದಲಿತ ಮಹಿಳೆ ಅಂತ್ಯಸಂಸ್ಕಾರ ರಸ್ತೆ ಬದಿಯಲ್ಲೇ ಮಾಡಿರುವ ಧಾರುಣ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರಿನ ಮಧುಗಿರಿ ತಾಲೂಕಿನ ಬಿಜ್ವಾರ ಗ್ರಾಮದಲ್ಲಿ ನಿಧನರಾದ ದಲಿತ ಮಹಿಳೆ ಹನುಮಕ್ಕ (75 ವರ್ಷ) ಅವರು ಭಾನುವಾರದಂದು ಸುದೀರ್ಘ ಆನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದರು. ಅವರು ದಲಿತರಾದ್ದರಿಂದ ಗ್ರಾಮದ ಸ್ಮಶಾನದಲ್ಲಿ ಸಂಸ್ಕಾರ ನಡೆಸಲು ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಪರಿಣಾಮ ಬೇರೆ ದಾರಿಯಿಲ್ಲದೇ ಆಕೆಯ ಕುಟುಂಬ ಅಂತಿಮವಾಗಿ ರಸ್ತೆಬದಿಯಲ್ಲೇ ಅಂತ್ಯಕ್ರಿಯೆ ನಡೆಸಿ ಮತ್ತು ಅಂತಿಮ ವಿಧಿಗಳನ್ನು ನಡೆಸಿತು.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ದಲಿತ ಕಾರ್ಯಕರ್ತರು ಆಕ್ರೋಶದಿಂದ ಪ್ರತಿಕ್ರಿಯಿಸಿದ್ದು, ಇದು ಈ ಪ್ರದೇಶಕ್ಕೆ ವಿಶಿಷ್ಟವಾದ ಸಮಸ್ಯೆಯಲ್ಲ, ಮತ್ತು ರಾಜ್ಯದಾದ್ಯಂತ 1,000 ಕ್ಕೂ ಹೆಚ್ಚು ಹಳ್ಳಿಗಳ ಸಮಸ್ಯೆಯಾಗಿದೆ. ಹಳ್ಳಿಗಳಲ್ಲಿ ದಲಿತರಿಗೆ ಗೊತ್ತುಪಡಿಸಿದ ಸ್ಮಶಾನ ಭೂಮಿ ಇಲ್ಲ ಎಂದು ಹೋರಾಟಗಾರ ವಿಜಯ ಶ್ರೀನಿವಾಸ ಹೇಳಿದ್ದಾರೆ. ಅಲ್ಲದೆ ಬಹಳ ದಿನಗಳಿಂದ ಈ ಸಮಸ್ಯೆ ಇದೆ. ದಲಿತರ ಘನತೆ ಕಾಪಾಡಲು ರಾಜಕೀಯ ಪಕ್ಷಗಳಲ್ಲಿ ಯಾವುದೇ ನಂಬಿಕೆ ಇಲ್ಲ. ಜಾಗವಿಲ್ಲದಿದ್ದರೆ ಸರ್ಕಾರವೇ ಜಮೀನು ಖರೀದಿಸಬೇಕು ಎಂದು ಆಗ್ರಹಸಿದ್ದಾರೆ.

ದಲಿತ ಜನಾಂದೋಲನ ಹೋರಾಟಗಾರ ನರಸಿಂಹಮೂರ್ತಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸುಮಾರು 200 ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನ ಭೂಮಿಯೇ ಇಲ್ಲ ಎಂದು ಹೇಳಿದ್ದಾರೆ. ಇದೇ ವಿಚಾರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ‘ಇದು ನನ್ನ ಗಮನಕ್ಕೆ ಬಂದಿದೆ. ಸ್ಮಶಾನಕ್ಕಾಗಿ ಮಂಜೂರಾದ ಭೂಮಿ ತನ್ನದು ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಸೋಮವಾರ ಸಹಾಯಕ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ. ಸುಮಾರು 90 ಪ್ರತಿಶತ ಹಳ್ಳಿಗಳು ಸ್ಮಶಾನ ಭೂಮಿಯನ್ನು ಹೊಂದಿವೆ. ಇಂದು ಇದೇ ವಿಚಾರವಾಗಿ ಸಿರಾದಿಂದ ಯಾರೋ ನನ್ನ ಬಳಿ ಬಂದಿದ್ದರು ಎಂದು ಹೇಳಿದ್ದಾರೆ.

ಈ ಹಿಂದೆ ಮಧುಗಿರಿಯಿಂದ ಶಾಸಕರಾಗಿ ಆಯ್ಕೆಯಾಗಿ ಇದೀಗ ಕೊರಟಗೆರೆ ಶಾಸಕರಾಗಿರುವ ತುಮಕೂರು ಜಿಲ್ಲಾ ಮಾಜಿ ಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ''ಸುಮಾರು 150 ದಲಿತರಿರುವ ಬಿಜ್ಜಳದ ಬಗ್ಗೆ ನನಗೆ ಅರಿವಿದೆ. ಸಚಿವರು, ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com