ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಮತ್ತೆ ಗುಂಡಿ, ಬಿಬಿಎಂಪಿಯ ಕಳಪೆ ಕಾಮಗಾರಿಗೆ ಸಾರ್ವಜನಿಕರ ಟೀಕೆ!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕಳಪೆ ಕಾಮಗಾರಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮಂಗಳವಾರ ಮುಂಜಾನೆ ಸುಮನಹಳ್ಳಿ ಸೇತುವೆಯಲ್ಲಿ ಗುಂಡಿಯೊಂದು ಪತ್ತೆಯಾಗಿದ್ದು, ರಸ್ತೆಗೆ ಹಾಕಿದ್ದ ಕಾಂಕ್ರೀಟ್‌ ಕಳಚಿ ಕೆಳಗಿದ್ದ ಕಬ್ಬಿಣ ಕಾಣಿಸುತ್ತಿದೆ.
ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದಿರುವುದು
ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಗುಂಡಿ ಬಿದ್ದಿರುವುದು

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಕಳಪೆ ಕಾಮಗಾರಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಮಂಗಳವಾರ ಮುಂಜಾನೆ ಸುಮನಹಳ್ಳಿ ಸೇತುವೆಯಲ್ಲಿ ಗುಂಡಿಯೊಂದು ಪತ್ತೆಯಾಗಿದ್ದು, ರಸ್ತೆಗೆ ಹಾಕಿದ್ದ ಕಾಂಕ್ರೀಟ್‌ ಕಳಚಿ ಕೆಳಗಿದ್ದ ಕಬ್ಬಿಣ ಕಾಣಿಸುತ್ತಿದೆ. ಸೇತುವೆ ಮೇಲೆ ಚಲಿಸುತ್ತಿದ್ದ ಕೆಲವು ವಾಹನ ಸವಾರರು ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಕೂಡಲೇ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಈ ರಂಧ್ರದ ಮೂಲಕ ಕೆಳಗಿನ ರಸ್ತೆಯಲ್ಲಿ ವಾಹನಗಳು ಹಾದುಹೋಗುವುದನ್ನು ಗುರುತಿಸಬಹುದು ಎಂದು ಹೇಳಿದರು.

ಬಿಬಿಎಂಪಿಯ ಪ್ರಧಾನ ಎಂಜಿನಿಯರ್‌ ಸಿ.ಎಸ್‌. ಪ್ರಹ್ಲಾದ್ ಮಾತನಾಡಿ, ಬೀಮ್ ಮತ್ತು ಸ್ಟೀಲ್ ಪರಿಕಲ್ಪನೆಯನ್ನು ಬಳಸಿಕೊಂಡು ಬಿಡಿಎ ಈ ಮೇ‌ಲ್ಸೇತುವೆಯನ್ನು ನಿರ್ಮಿಸಿದೆ. ಎರಡನೇ ಬಾರಿಗೆ ಈ ರಸ್ತೆಯಲ್ಲಿ ಕುಸಿತವಾಗಿದೆ.  ಗೊರಗುಂಟೆಪಾಳ್ಯಕ್ಕೆ ಸಂಪರ್ಕ ಕಲ್ಪಿಸುವ ಈ ಸೇತುವೆಯು ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಬಿಬಿಎಂಪಿ ವತಿಯಿಂದಲೇ ನಾವು ದುರಸ್ತಿ ಕಾಮಗಾರಿ ಕೈಗೊಳ್ಳಲಿದ್ದೇವೆ’ ಎಂದು ತಿಳಿಸಿದರು.

ಸೇತುವೆಯ ಮೇಲೆ ರಂಧ್ರವಿರುವ ಬಗ್ಗೆ 9.15ಕ್ಕೆ ನಮಗೆ ಮಾಹಿತಿ ಸಿಕ್ಕಿತು. ಮೇಜರ್ ರೋಡ್ ಸೆಕ್ಷನ್‌ನಿಂದ ಬಿಬಿಎಂಪಿ ಇಂಜಿನಿಯರ್ಗಳನ್ನು ಕರೆಸಿದ್ದೇವೆ. ಈ ಪ್ರದೇಶದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು, ಬುಧವಾರದಿಂದ ಪೂರ್ಣ ಪ್ರಮಾಣದ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸೇತುವೆಯ ನಾಯಂಡಹಳ್ಳಿ-ಗೊರಗುಂಟೆಪಾಳ್ಯ ಭಾಗದ ಕಾಮಗಾರಿ ಆರಂಭವಾಗಲಿದ್ದು, ಅದನ್ನು ಮುಚ್ಚಬೇಕಾಗಬಹುದು ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಸೇತುವೆ ದುರಸ್ತಿ ಕಾರ್ಯದಿಂದಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಉಂಟಾಗಬಹುದು ಎಂದು ಕಾಮಾಕ್ಷಿಪಾಳ್ಯ ಸಂಚಾರ ನಿರೀಕ್ಷಕ ಹರೀಶ್ ಎಂ.ಟಿ ತಿಳಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕೂಡ ಇದೇ ಕಾರಣಕ್ಕಾಗಿ ಈ ಸೇತುವೆ ಸುದ್ದಿಯಲ್ಲಿತ್ತು. ಮೇಲ್ಸೇತುವೆಯ ಮಧ್ಯದಲ್ಲಿ ಗುಂಡಿ ಬಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಪಾಲಿಕೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿತ್ತು. ಇದೀಗ ಮತ್ತೆ 2019ರಲ್ಲಿ ಕುಸಿದಿದ್ದ ಸ್ಥಳದಿಂದ ಸುಮಾರು 15 ಅಡಿ ಮುಂದೆ ಈ ಕುಸಿತ ಉಂಟಾಗಿದೆ.

2004ರಲ್ಲಿ ಈ ಸೇತುವೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿ 2015 ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಿತ್ತು. ಈ ರಸ್ತೆಯಲ್ಲಿ ಕೆಲವು ಹಾನಿಯುಂಟಾಗಿದೆ. ಹಾನಿ ಮತ್ತು ಕೆಟ್ಟ ಗುಣಮಟ್ಟವನ್ನು ಪತ್ತೆಹಚ್ಚಲು ಅಲ್ಟ್ರಾ ಸೌಂಡ್‌ವೇವ್‌ಗಳನ್ನು ಹೊಂದಿರುವ ಯಂತ್ರವನ್ನು ಬಳಸಲಾಗುತ್ತದೆ. ಬ್ಯೂರೋ ವೆರಿಟಾಸ್ ಎಂಬ ಎಂಜಿನಿಯರಿಂಗ್ ಸಂಸ್ಥೆಯು ಅಧ್ಯಯನ ನಡೆಸಿ ವರದಿ ನೀಡಲು ಮುಂದಾಗಿದೆ. ಸದ್ಯಕ್ಕೆ ಬಿಬಿಎಂಪಿ ಬುಧವಾರ ದುರಸ್ತಿ ಕಾರ್ಯ ಆರಂಭಿಸಲಿದ್ದು, ಸ್ಥಳದಲ್ಲಿ ಬ್ಯಾರಿಕೇಡ್ ಹಾಕಲಾಗಿದೆ ಎಂದು ಪ್ರಹ್ಲಾದ್ ಟಿಎನ್ಐಇಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com