ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಸಿಬ್ಬಂದಿ, ಮೂಲಸೌಕರ್ಯಗಳ ಕೊರತೆ!

ಬೀದರ್, ಹಾವೇರಿ, ಚಾಮರಾಜನಗರ, ಹಾಸನ, ಬಳ್ಳಾರಿ, ಕೊಡಗು ಮತ್ತು ಬಾಗಲಕೋಟೆಯಲ್ಲಿ ಹೊಸದಾಗಿ ಏಳು ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಕಾಯ್ದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳ ಸಂಖ್ಯೆ 30ಕ್ಕೆ ಏರಿಕೆಯಾಗಲಿದೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೀದರ್, ಹಾವೇರಿ, ಚಾಮರಾಜನಗರ, ಹಾಸನ, ಬಳ್ಳಾರಿ, ಕೊಡಗು ಮತ್ತು ಬಾಗಲಕೋಟೆಯಲ್ಲಿ ಹೊಸದಾಗಿ ಏಳು ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ಕಾಯ್ದೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ಇದರಿಂದಾಗಿ ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳ ಸಂಖ್ಯೆ 30ಕ್ಕೆ ಏರಿಕೆಯಾಗಲಿದೆ.  

ಕೆಲವು ದಶಕಗಳ ಹಿಂದೆ ಒಂದೆರಡು ವಿಶ್ವವಿದ್ಯಾನಿಲಯಗಳನ್ನು ಹೊಂದಿದ್ದ ರಾಜ್ಯದಲ್ಲಿ ಕಾಲೇಜುಗಳ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ ಹೊಸ ವಿಶ್ವವಿದ್ಯಾಲಯಗಳನ್ನು ರಚಿಸಬೇಕಾಯಿತು. ದೇಶದಾದ್ಯಂತ ಮತ್ತು ಕೆಲ ಹೊರ ರಾಷ್ಟ್ರದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡುವ ಅಗ್ರ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಪ್ರತಿ ವರ್ಷ ಹೆಚ್ಚು ಹೊಸ ಕಾಲೇಜುಗಳನ್ನು ಸೇರಿಸುವ ಉನ್ನತ ರಾಜ್ಯಗಳಲ್ಲಿ ಇದು ಕೂಡ ಒಂದಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಈ ಸರ್ಕಾರಿ ವಿಶ್ವವಿದ್ಯಾನಿಲಯಗಳು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿವೆ ಮತ್ತು ಶಿಕ್ಷಣದ ಗುಣಮಟ್ಟವನ್ನು ಸಹ ಎದುರಿಸುತ್ತಿವೆ.  ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆಯನ್ನು 22 ವರ್ಷಗಳ ಹಿಂದೆ ಅಂಗೀಕರಿಸಲಾಗಿದೆ. ಇದು ಆಗ ಪ್ರಸ್ತುತವಾಗಿತ್ತು, ಆದರೆ ವಿಷಯಗಳು ಬದಲಾಗಿವೆ. ಆದ್ದರಿಂದ ನಾವು ಕರ್ನಾಟಕ ರಾಜ್ಯ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳ ವಿಧೇಯಕ ಹಾಗೂ ಕರ್ನಾಟಕ ರಾಜ್ಯ ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳ  ತರುತ್ತಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಹೇಳಿದ್ದಾರೆ.  ರಾಜ್ಯಾದ್ಯಂತ ಇರುವ ವಿಶ್ವವಿದ್ಯಾನಿಲಯಗಳ ವಸ್ತುಸ್ಥಿತಿಯನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತಂಡ ಪರಿಶೀಲಿಸಿದೆ.

ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ: ರಾಜ್ಯದಲ್ಲಿರುವ ಏಕೈಕ ತೋಟಗಾರಿಕೆ ವಿಜ್ಞಾನಗಳ ವಿವಿಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ, ಮೂಲಸೌಕರ್ಯಗಳ ಕೊರತೆ, ಸಂಶೋಧನೆ ಕೈಗೊಳ್ಳಲು ಮತ್ತು ಆಡಳಿತಾತ್ಮಕ ವೆಚ್ಚ ಭರಿಸಲು ಹಣದ ಕೊರತೆಯಿದೆ. ಈ ವಿವಿಯಡಿ ಒಟ್ಟು 9 ತೋಟಗಾರಿಕಾ ಕಾಲೇಜುಗಳಿವೆ. ವಿವಿ ಚಟುವಟಿಕೆಗಳು ರಾಜ್ಯದ 26 ಜಿಲ್ಲೆಗಳಲ್ಲಿದೆ. ವಿಶ್ವವಿದ್ಯಾಲಯದಲ್ಲಿ ಶೇ. 40 ರಷ್ಟು ಬೋಧಕ ಸಿಬ್ಬಂದಿಯ ಕೊರತೆಯಿದ್ದು, ಅಕಾಡೆಮಿಕ್ ಚಟುವಟಿಕೆ ಮೇಲೆ ಪರಿಣಾಮ ಬೀರುತ್ತಿದೆ. ತರಗತಿ ನಡೆಸುವಂತೆ ನಿವೃತ್ತ ಪ್ರಾಧ್ಯಾಪಕರನ್ನು ಕೇಳಿಕೊಂಡಿದ್ದೇವೆ ಎನ್ನುತ್ತಾರೆ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಂ. ಇಂದ್ರೇಶ್.

ವಿಜಯಪುರ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ: ರಾಜ್ಯದಲ್ಲಿರುವ ಏಕೈಕ ಮಹಿಳಾ ವಿವಿ ಕೂಡಾ ಪರಿಸ್ಥಿತಿ ಕೂಡಾ ಕೆಟ್ಟದಾಗಿದೆ. ಎರಡು ದಶಕಗಳು ಕಳೆದರೂ ಅನೇಕ ವಿಜ್ಞಾನ ಇಲಾಖೆಗಳಲ್ಲಿ ಖಾಯಂ ಬೋಧಕ ಸಿಬ್ಬಂದಿ ಇಲ್ಲ. ಇದು ರಾಜ್ಯಾದ್ಯಂತ 32 ಸ್ನಾತಕೋತ್ತರ ಕೋರ್ಸ್ ಗಳನ್ನು ಮತ್ತು ಕಾಲೇಜುಗಳನ್ನು ಹೊಂದಿದೆ. ಪ್ರಮುಖ ಕ್ಯಾಂಪಸ್ ನಲ್ಲಿಯೇ ಸಂಶೋಧನ ಕಾರ್ಯ ಕೈಗೊಳ್ಳಲು ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹಣದ ಕೊರತೆಯಿದೆ. ಇದನ್ನು ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ, ಸೂಕ್ತ ಪ್ರತಿಕ್ರಿಯೆ ಬಂದಿಲ್ಲ ಎಂದು ಕುಲಪತಿ ಬಿ.ಕೆ. ತುಳಸಿಮಾಲಾ ತಿಳಿಸಿದರು. 

ಗುಲ್ಬರ್ಗಾ ವಿವಿ ಕಲಬುರಗಿ: ಇಲ್ಲಿ ಮಂಜೂರಾದ 248 ಬೋಧಕ ಸಿಬ್ಬಂದಿ ಪೈಕಿ 129 ಹುದ್ದೆಗಳು ಖಾಲಿಯಿವೆ. ನಿಯಮಗಳ ಪ್ರಕಾರ, ಪ್ರತಿ ವಿಭಾಗದಲ್ಲಿ ಒಬ್ಬರು ಪ್ರಾಧ್ಯಾಪಕರು, ಇಬ್ಬರು ಸಹ ಪ್ರಾಧ್ಯಾಪಕರು ಮತ್ತು ನಾಲ್ಕು ಸಹಾಯಕ ಪ್ರಾಧ್ಯಾಪಕರು ಇರಬೇಕು. ಗುಲ್ಬರ್ಗ ವಿಶ್ವವಿದ್ಯಾಲಯದ 39 ವಿಭಾಗಗಳಲ್ಲಿ ಯಾವುದೂ ಈ ಮಾನದಂಡವನ್ನು ಪೂರೈಸಲ್ಲ.  ಇತ್ತೀಚೆಗೆ ಪದವಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗೆ ಅನರ್ಹರನ್ನು ಮೌಲ್ಯಮಾಪಕರನ್ನಾಗಿ ನೇಮಿಸಿ ಸುದ್ದಿಯಾಗಿತ್ತು. 15 ವರ್ಷಗಳಿಂದ ವಿಶ್ವವಿದ್ಯಾಲಯದಲ್ಲಿ ನೇಮಕಾತಿ ನಡೆದಿಲ್ಲ. ಪ್ರಸ್ತುತ 247 ಅತಿಥಿ ಶಿಕ್ಷಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕುಲಪತಿ ಪ್ರೊ.ದಯಾನಂದ ಅಗಸರ್ ತಿಳಿಸಿದರು. 

ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ: ದೇಶದ ಏಕೈಕ ಜಾನಪದ ವಿಶ್ವವಿದ್ಯಾನಿಲಯ ಹಾವೇರಿ ಜಿಲ್ಲೆಯ ಗೊಟಗೋಡಿನಲ್ಲಿ 2011 ರಲ್ಲಿ ಸ್ಥಾಪನೆಯಾಗಿದೆ. ಕಳೆದ 11 ವರ್ಷಗಳಲ್ಲಿ ರಾಜ್ಯ ಸರ್ಕಾರ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿಲ್ಲ. ಉಪಕುಲಪತಿಯಿಂದ ಹಿಡಿದು ಕಛೇರಿಯ ಗುಮಾಸ್ತರವರೆಗೆ ಇಲ್ಲಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದಾರೆ. ಹಲವು ಗುತ್ತಿಗೆ ಆಧಾರಿತ ಕಾರ್ಮಿಕರು ತಮಗೆ ಸರಿಯಾದ ವೇತನ ನೀಡುತ್ತಿಲ್ಲ, ಗುತ್ತಿಗೆ ನೌಕರರ ವೇತನಕ್ಕೆ ಹಣ ಬಾಕಿ ಇದೆ ಎಂದು ಆರೋಪಿಸಿದ್ದಾರೆ.  ಇಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಆಸಕ್ತಿ ತೋರಿಸುತ್ತಾರೆ, ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಕೆಲವರು ತಮ್ಮ ಸ್ನಾತಕೋತ್ತರ ಪದವಿಯನ್ನು ಮುಂದುವರಿಸಲು ಬೇರೆ ವಿಶ್ವವಿದ್ಯಾಲಯಗಳು ಅಥವಾ ಖಾಸಗಿ ಕಾಲೇಜುಗಳಿಗೆ ಮರಳುತ್ತಿದ್ದಾರೆ. 

ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಧೀರ್ಘಕಾಲದಿಂದ ನೇಮಕಾತಿ  ಸಮಸ್ಯೆ ಇದೆ. ಕಳೆದ ಕೆಲವು ವರ್ಷಗಳಿಂದ ಮಂಜೂರಾದ ಅರ್ಧದಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳಿಂದ ವಿವಿ ಕಾರ್ಯನಿರ್ವಹಿಸುತ್ತಿದೆ. ಬೋಧಕ ಸಿಬ್ಬಂದಿ ಕೊರತೆಯನ್ನು ಅರೆಕಾಲಿಕ ಅಥವಾ ಗುತ್ತಿಗೆ ಆಧಾರಿತ ಉಪನ್ಯಾಸಕರು ತುಂಬಿದ್ದಾರೆ ಮತ್ತು ಇತ್ತೀಚೆಗೆ, ಅವರು ವೇತನ ಹೆಚ್ಚಳಕ್ಕೆ ಒತ್ತಾಯಿಸಿ ಪ್ರತಿಭಟನೆಯನ್ನು ಪ್ರಾರಂಭಿಸಿದರು. ಮೂಲಸೌಕರ್ಯಕ್ಕೆ ಅನುದಾನದ ಕೊರತೆಯನ್ನೂ ವಿಶ್ವವಿದ್ಯಾಲಯ ಎದುರಿಸುತ್ತಿದೆ.

ಬೆಂಗಳೂರು ವಿಶ್ವವಿದ್ಯಾನಿಲಯ, ಬೆಂಗಳೂರು: ಹಳೆಯದಾದ ಮತ್ತು ಸುವ್ಯವಸ್ಥಿತವಾಗಿ ಸ್ಥಾಪನೆಯಾಗಿರುವ  ಬೆಂಗಳೂರಿನ ವಿಶ್ವವಿದ್ಯಾನಿಲಯಗಳು ಕೂಡಾ  ತೊಂದರೆಗಳನ್ನು ಎದುರಿಸುತ್ತವೆ. “ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರ ಕೊರತೆಯಿದ್ದರೆ, ಅತಿಥಿ ಅಧ್ಯಾಪಕರನ್ನು ತಕ್ಷಣವೇ ಭರ್ತಿ ಮಾಡಲಾಗುತ್ತದೆ. ಈಗಿನಂತೆ, ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ, ಆದರೆ ನಿವೃತ್ತಿ ವಯಸ್ಸು ಕೆಲವರು ಅತಿಥಿ ಅಧ್ಯಾಪಕರನ್ನು ನೇಮಿಸಿಕೊಳ್ಳಬೇಕಾಯಿತು. ಆದರೆ, ಬೆಂಗಳೂರು ಸಿಟಿ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳು ಹೊಸ ವಿಶ್ವವಿದ್ಯಾಲಯಗಳಾಗಿರುವುದರಿಂದ ಅಧ್ಯಾಪಕರ ನೇಮಕಾತಿಯಲ್ಲಿ ಸಮಸ್ಯೆ ಎದುರಿಸುತ್ತಿವೆ ಎಂದು ನಾವು ಕೇಳಿದ್ದೇವೆ ಎಂದು ಹೆಸರು ಹೇಳಲು ಬಯಸದ  ಬೆಂಗಳೂರು ವಿಶ್ವವಿದ್ಯಾಲಯದ ಬೋಧಕೇತರ ಸಿಬ್ಬಂದಿ ಹೇಳಿದರು. ನಿಧಿಯ ದುರುಪಯೋಗ, ಪ್ರಚಾರದಲ್ಲಿ ವಿಫಲತೆ ಮತ್ತು ಕುಲಪತಿಗಳು ಮತ್ತು ಸಿಂಡಿಕೇಟ್ ಸದಸ್ಯರ ನಡುವಿನ ಘರ್ಷಣೆಗೆ ಸಂಬಂಧಿಸಿದ ಆರೋಪಗಳೊಂದಿಗೆ ಬೆಂಗಳೂರು ವಿವಿ ಕೂಡ ವಿವಾದದಲ್ಲಿ ತುಂಬಿದೆ. 

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ ಬೆಂಗಳೂರು:  ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯವೂ ವಿವಾದದಲ್ಲಿ ಸಿಲುಕಿಕೊಂಡಿದೆ. ಕುಲಸಚಿವ ಡಾ.ರಾಮಕೃಷ್ಣ ರೆಡ್ಡಿ ವಿರುದ್ಧ ಐದು ವಿವಿಧ ಹುದ್ದೆ ಪಡೆದಿದ್ದು,  ಎಲ್ಲಾ ಹುದ್ದೆಗಳಿಂದ ಸಂಬಳ ಪಡೆಯುವ ಆರೋಪಕ್ಕೆ ತುತ್ತಾಗಿದ್ದಾರೆ. ಈ ಸಂಬಂಧ  ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯದ ಶೇಕಡಾ 80 ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ಮಂಗಳೂರು ವಿಶ್ವವಿದ್ಯಾನಿಲಯ: ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ವೇತನವನ್ನು ಮಾತ್ರ ಸರಕಾರ ನೀಡುತ್ತಿದ್ದು, ಉಳಿದೆಲ್ಲ ವೆಚ್ಚವನ್ನು ವಿಶ್ವವಿದ್ಯಾಲಯವೇ ಭರಿಸುತ್ತಿದೆ. ಆದಾಯವೂ ಇಲ್ಲ. ಈಗ ಈ ವೇತನದ ಮೊತ್ತವನ್ನೂ ನೀಡುತ್ತಿಲ್ಲ, ಕಳೆದ 10 ವರ್ಷಗಳಿಂದ ಹಂಗಾಮಿ ಉಪನ್ಯಾಸಕರಿದ್ದಾರೆ. ಈ ಹಿಂದೆ ವಿಶ್ವವಿದ್ಯಾನಿಲಯವು ಮೂಲ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಣವನ್ನು ಪಡೆಯುತ್ತಿತ್ತು. ಆದರೆ ಈಗ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾ ವಿಭಾಗ, ಐಟಿ ಮತ್ತು ಮಾಹಿತಿ ತಂತ್ರಜ್ಞಾನದ ಸುಧಾರಣೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಪ್ರತಿ ಯೋಜನೆಗೂ ಯುಜಿಸಿ ಹಣ ಬಿಡುಗಡೆಯಾಗುತಿತ್ತು. ಆದರೆ ಈಗ ಸ್ಥಗಿತಗೊಂಡಿದೆ. ಹಲವು ಬೋಧಕ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ ಮತ್ತು ಪ್ರಸ್ತುತ ಹೆಚ್ಚಿನ ಸಿಬ್ಬಂದಿ ತಾತ್ಕಾಲಿಕ ಆಧಾರದ ಮೇಲೆ ಇದ್ದಾರೆ" ಎಂದು ಮಾಜಿ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯ ಎಂ ಜಿ ಹೆಗ್ಡೆ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯ: ಹಂಪಿ ಕನ್ನಡ ವಿಶ್ವವಿದ್ಯಾಲಯ ಸದ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಕಳೆದ ನಾಲ್ಕೈದು ತಿಂಗಳಿನಿಂದ ಅತಿಥಿ ಅಧ್ಯಾಪಕರಿಗೂ ವೇತನ ಸಿಗುತ್ತಿಲ್ಲ. ಕನ್ನಡ ವಿಶ್ವವಿದ್ಯಾನಿಲಯವು ಹಣಕಾಸಿನ ಮುಗ್ಗಟ್ಟಿನಿಂದ ಹೆಣಗಾಡುತ್ತಿರುವುದನ್ನು ಜಕ್ಕೂ ದುರದೃಷ್ಟಕರ ಎಂದು ಕನ್ನಡ ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ. ವಿಶ್ವವಿದ್ಯಾಲಯ ನಿರ್ವಹಣೆಗೆ ಮಾಸಿಕ 15ರಿಂದ 20 ಕೋಟಿ ರೂ. ಅಗತ್ಯವಿದೆ.  ಹಲವು ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸಿಗುತ್ತಿಲ್ಲ, ಅತಿಥಿ ಉಪನ್ಯಾಸಕರು ಕಳೆದ ನಾಲ್ಕು ತಿಂಗಳಿನಿಂದ ಸಂಬಳಕ್ಕಾಗಿ ಕಾಯುತ್ತಿದ್ದಾರೆ. ಬಹುತೇಕ ಕಟ್ಟಡಗಳು ದುರಸ್ತಿಯಾಗಬೇಕಿದೆ.

ಮೈಸೂರು ವಿಶ್ವವಿದ್ಯಾನಿಲಯ: ರಾಜ್ಯದ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ, ಶತಮಾನದಷ್ಟು ಹಳೆಯದಾದ ಮೈಸೂರು ವಿಶ್ವವಿದ್ಯಾನಿಲಯವು ಒಟ್ಟು 660 ಬೋಧಕ ಹುದ್ದೆಗಳನ್ನು ಹೊಂದಿದ್ದು, 280 ರಷ್ಟು ಮಾತ್ರ ಖಾಯಂ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಇತರ ಹುದ್ದೆಗಳು ಖಾಲಿ ಇವೆ. ವಿಶ್ವವಿದ್ಯಾನಿಲಯವು ಅತಿಥಿ ಅಧ್ಯಾಪಕರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರಕ್ಕೆ  ಅಧಿಕಾರಿಗಳು ಪದೇ ಪದೇ ಮಾಡಿದ ಪ್ರಯತ್ನಗಳಿಗೆ ಒಪ್ಪಿಗೆಯನ್ನು ನೀಡಲಾಗಿಲ್ಲ, ಇದರಿಂದಾಗಿ ನ್ಯಾಕ್ ಮಾನ್ಯತೆಯಲ್ಲಿ ಉತ್ತಮ ದರ್ಜೆಯನ್ನು ಪಡೆಯುವಲ್ಲಿ ನಷ್ಟವಾಗಿದೆ. 

ಗಂಗೂಬಾಯಿ ಹಾನಗಲ್  ಸಂಗೀತ ಮತ್ತು ಪ್ರದರ್ಶಕ ಕಲಾ ವಿಶ್ವವಿದ್ಯಾಲಯ, ಮೈಸೂರು: ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು ಇದಕ್ಕೆ ಹೊರತಾಗಿಲ್ಲ, ಸರ್ಕಾರವು ಎರಡು ಸ್ಥಳಗಳನ್ನು ಗುರುತಿಸಿದ ನಂತರವೂ ಸ್ವಂತ ಕಟ್ಟಡವಿಲ್ಲದೆ ನರಳುತ್ತಿದೆ. ಸರಿಯಾದ ಜಾಗವಿಲ್ಲದೆ ಪತ್ರಿಕೆಗಳು ಧೂಳು ಹಿಡಿಯುತ್ತಿವೆ. ಈ ಮಧ್ಯೆ ವಿಶ್ವವಿದ್ಯಾನಿಲಯವು ಬೋಧಕರ  ಸಮಸ್ಯೆಗಳನ್ನು ಹೊಂದಿದೆ. ಅವರಲ್ಲಿ ಹೆಚ್ಚಿನವರು ತಾತ್ಕಾಲಿಕ ಬೋಧಕ ಸಿಬ್ಬಂದಿಯಾಗಿದ್ದು, ಸರಿಯಾದ ಕಾರಣ ನೀಡದೆ ಕೆಲಸದ ವಜಾಗೊಳಿಸಿರುವ ಕಾರಣ ಬೋಧಕೇತರ ಸಿಬ್ಬಂದಿ ಕಳೆದ 100 ದಿನಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಶ್ವವಿದ್ಯಾನಿಲಯ ಕೂಡಾ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. 

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು: 1992ರಲ್ಲಿ ಸ್ಥಾಪನೆಯಾದ ಯುಜಿಸಿಯಿಂದ ಮರು ಮಾನ್ಯತೆ ಪಡೆದಿರುವ  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರವೇಶಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಆದರೆ  ವಿವಿ ಅಧಿಕಾರಿಗಳ ನಡುವಿನ ಆಂತರಿಕ ಜಗಳ ಮತ್ತು ಹಣ ದುರುಪಯೋಗ ಮತ್ತು ಅಕ್ರಮಗಳ ಆರೋಪಗಳು ವಿದ್ಯಾರ್ಥಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com