ಸುಗಮ ಸಂಚಾರ, ಪಾದಚಾರಿಗಳ ಸುರಕ್ಷತೆಗಾಗಿ 'ಸುರಕ್ಷಾ 75' ಆರಂಭಿಸಿದ ಬಿಬಿಎಂಪಿ

ನಗರದಲ್ಲಿ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಕೈಜೋಡಿಸಿರುವ ಬಿಬಿಎಂಪಿ ಮಿಷನ್ ಸುರಕ್ಷಾ 75ನ್ನು ಪ್ರಾರಂಭಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಸುಗಮ ಸಂಚಾರ ಹಾಗೂ ಪಾದಚಾರಿಗಳ ಸುರಕ್ಷತೆಗಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರೊಂದಿಗೆ ಕೈಜೋಡಿಸಿರುವ ಬಿಬಿಎಂಪಿ ಮಿಷನ್ ಸುರಕ್ಷಾ 75ನ್ನು ಪ್ರಾರಂಭಿಸಿದೆ.

150 ಕೋಟಿ ವೆಚ್ಚದಲ್ಲಿ 75 ಜಂಕ್ಷನ್‌ಗಳನ್ನು ಸುಧಾರಿಸಲಾಗುವುದು ಎಂದು ರಾಜ್ಯ ಮತ್ತು ಬಿಬಿಎಂಪಿ ಬಜೆಟ್ ನಲ್ಲಿ ಈ ಹಿಂದೆ ಘೋಷಣೆ ಮಾಡಲಾಗಿತ್ತು.

ಬೆಂಗಳೂರಿನ 75 ಜಂಕ್ಷನ್‌ಗಳನ್ನು ಮರುವಿನ್ಯಾಸಗೊಳಿಸುವ ಯೋಜನೆ ಇದಾಗಿದೆ. ಎಲ್ಲ ರಸ್ತೆ ಬಳಕೆದಾರರಿಗೆ, ವಿಶೇಷವಾಗಿ ಪಾದಚಾರಿಗಳು ಮತ್ತು ಸೈಕ್ಲಿಸ್ಟ್‌ಗಳು ಸೇರಿದಂತೆ ರಸ್ತೆ ಅಪಘಾತಗಳಿಂದ ಸುರಕ್ಷಿತಗೊಳಿಸುವ ಉದ್ದೇಶ ಈ ಯೋಜನೆಯದ್ದಾಗಿದೆ.

ಹೆಚ್ಚು ಅಪಘಾತಗಳಾಗುವ ಜಂಕ್ಷನ್‌ಗಳನ್ನು ಸುರಕ್ಷಿತವಾಗಿರಿಸುವ ಗುರಿಯನ್ನು ಹೊಂದಿರುವ ‘ಸುರಕ್ಷ 75 ಮಿಷನ್ 2023’ ಬಿಬಿಎಂಪಿ, ಬೆಂಗಳೂರು ಟ್ರಾಫಿಕ್ ಪೊಲೀಸ್, ವಿಶ್ವ ಸಂಪನ್ಮೂಲ ಸಂಸ್ಥೆ ಭಾರತ (ಡಬ್ಲ್ಯೂಆರ್‌ಐ) ಸಹಯೋಗದೊಂದಿಗೆ, ಬ್ಲೂಮ್‌ಬರ್ಗ್‌ ಫಿಲಾಂತ್ರೊಪಿಸ್‌ ಜಾಗತಿಕ ರಸ್ತೆ ಸುರಕ್ಷತೆಗಾಗಿ ಲೋಕೋಪಕಾರಿ ಉಪಕ್ರಮ (ಬಿಜಿಆರ್‌ಎಸ್‌) ಅಡಿಯಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ.

ರಾಜಭವನ ವೃತ್ತ, ಮಿನ್ಸ್ಕ್ ಸ್ಕ್ವೇರ್ ಜಂಕ್ಷನ್, ನಾಗಸಂದ್ರ ಎಂಎಸ್ ಜಂಕ್ಷನ್, ಫೋರಂ ಹಾಲ್ ಸರ್ಕಲ್, ಗೊರಗುಂಟೆಪಾಳ್ಯ ಜಂಕ್ಷನ್ ಸೇರಿದಂತೆ  ಬಿಬಿಎಂಪಿಯ ಎಂಟು ವಲಯಗಳಲ್ಲಿ 75 ಜಂಕ್ಷನ್‌ಗಳನ್ನು ಯೋಜನೆಯಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದೆ.

ನಗರದಲ್ಲಿ ಪ್ರತಿದಿನ ಸುಮಾರು 2000 ರಿಂದ 2500 ಹೊಸ ವಾಹನಗಳು ರಸ್ತೆಗಿಳಿಯಲಿದ್ದು, ಸುರಕ್ಷಾ75 ಸಂಚಾರ ನಿರ್ವಹಣೆ ಮತ್ತು ಪಾದಚಾರಿಗಳ ಸುರಕ್ಷತೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಎಂದು ವಿಶೇಷ ಆಯುಕ್ತ (ಸಂಚಾರ) ಎಂಎ ಸಲೀಂ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com