ಕ್ರಿಮಿನಲ್‌ಗಳು ರಾಜಕೀಯ ನಾಯಕರು ಮತ್ತು ಪೊಲೀಸರ ಕೈಯಲ್ಲಿ ಸಿಲುಕಿರುವ ದಾಳಗಳು: ಭಾಸ್ಕರ್ ರಾವ್

ಬಡತನ, ಅಜ್ಞಾನ ಮತ್ತು ಅವಕಾಶಗಳ ಕೊರತೆ’ಗೂ ಅಪರಾಧಕ್ಕೂ ನಿಕಟ ಸಂಬಂಧವಿದೆ ಎಂದು ರಾಜಕೀಯ ಪ್ರವೇಶಿಸಿ ಚುನಾವಣಾ ಅಖಾಡಕ್ಕಿಳಿದಿರುವ ಬೆಂಗಳೂರು ನಗರ ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ಅವರು ಹೇಳಿದ್ದಾರೆ.
ಭಾಸ್ಕರ್ ರಾವ್
ಭಾಸ್ಕರ್ ರಾವ್

ಬೆಂಗಳೂರು: ಬಡತನ, ಅಜ್ಞಾನ ಮತ್ತು ಅವಕಾಶಗಳ ಕೊರತೆ’ಗೂ ಅಪರಾಧಕ್ಕೂ ನಿಕಟ ಸಂಬಂಧವಿದೆ ಎಂದು ರಾಜಕೀಯ ಪ್ರವೇಶಿಸಿ ಚುನಾವಣಾ ಅಖಾಡಕ್ಕಿಳಿದಿರುವ ಬೆಂಗಳೂರು ನಗರ ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್ ಅವರು ಹೇಳಿದ್ದಾರೆ.

ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಬಿಝಡ್ ಜಮೀರ್ ಅಹ್ಮದ್ ಖಾನ್ ವಿರುದ್ಧ ಭಾಸ್ಕರ್ ರಾವ್ ಅವರು ಭಾಸ್ಕರ್ ರಾವ್ ಅವರು ಸ್ಪರ್ಧಿಸುತ್ತಿದ್ದಾರೆ.

ಈ ಹಿಂದೆ ಚಾಮರಾಜಪೇಟೆ ಕ್ಷೇತ್ರದ ಟಿಕೆಟ್'ನ್ನು ರೌಡಿ ಶೀಟರ್ ಸೈಲೆಂಟ್ ಸುನೀಲ ಬಯಸಿದ್ದ. ಆದರೆ, ಟಿಕೆಟ್ ನ್ನು ಬಿಜೆಪಿ ಭಾಸ್ಕರ್ ರಾವ್ ಅವರಿಗೆ ನೀಡಿತ್ತು. ಇದಕ್ಕೆ ಸೈಲೆಂಟ್ ಸುನೀಲ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು, ಬಿಜೆಪಿ ಕಚೇರಿ ಮುಂದೆ ದಾಂಧಲೆ ನಡೆಸಿದ್ದರು,

ಈ ಬೆಳವಣಿಗೆಗಳ ಬಳಿಕ ಹೇಳಿಕೆ ನೀಡಿದ್ದ ಭಾಸ್ಕರ್ ರಾವ್ ಅವರು, ಸೈಲೆಂಟ್ ಸುನೀಲನದ ಬೆಂಬಲ ಪಡೆಯಲು ಮುಕ್ತನಾಗಿದ್ದೇನೆಂದು ಹೇಳಿದ್ದರು. ಈ ಹೇಳಿಕೆ ವಿವಾದಗಳನ್ನು ಹುಟ್ಟುಹಾಕಿತ್ತು.

ಈ ಹೇಳಿಕೆಗೆ ಇದೀಗ ಸ್ಪಷ್ಟನೆ ನೀಡಿರುವ ಭಾಸ್ಕರ್ ರಾವ್ ಅವರು, ಸಾಮಾನ್ಯ ಜನರಿಗೂ ರೌಡಿಗಳೆಂಬ ಹಣೆಪಟ್ಟಿ ನೀಡಲಾಗುತ್ತದೆ. ಬಡತನ, ಅಜ್ಞಾನ ಮತ್ತು ಅವಕಾಶಗಳ ಕೊರತೆಗೂ ಅಪರಾಧಕ್ಕೂ ನಿಕಟ ಸಂಬಂಧವಿದೆ. ಚಾಮರಾಜಪೇಟೆಯಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಬೇಕು. ಕ್ಷೇತ್ರದಲ್ಲಿ ಬಡತನ, ಕಗ್ಗಂಟು, ಹೊಲಸು, ಕಸ, ಶಿಕ್ಷಣ ಮತ್ತು ಆರೋಗ್ಯ ಅವಕಾಶಗಳ ಕೊರತೆ ಇದೆ. ಚರಂಡಿಗಳು ಮುಚ್ಚಿಹೋಗಿದ್ದು, ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶಿಕ್ಷಣ ಮತ್ತು ಅವಕಾಶಗಳು ಇಲ್ಲದಂತಾಗಿದೆ, ಕೆಲವರು ರೌಡಿ ಶೀಟರ್ ಗಳಾಗಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಸಹಜವಾಗುತ್ತಿದೆ ಎಂದು ಹೇಳಿದ್ದಾರೆ.

ಅಪರಾಧ ಮಾಡಿದ ನಂತರ ಒಬ್ಬ ವ್ಯಕ್ತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತದೆ. ನಂತರ ಆ ವ್ಯಕ್ತಿ ಹಣ ಹಾಗೂ ಅಧಿಕಾರದಿಂದ ಹೊರಬರುತ್ತಾನೆ. ರಾಜಕೀಯ ವ್ಯಕ್ತಿಗಳು ಪೊಲೀಸರ ಬಳಸಿಕೊಂಡು ಅವರಿಗೆ ಜಾಮೀನು ಸಿಗುವಂತೆ ಮಾಡುತ್ತಾರೆ. ಬಳಿಕ ಮತ್ತಿಬ್ಬರನ್ನು ತಮ್ಮೊಂದಿಗೆ ಹೊರಬರುವ ರೌಡಿಗಳು ಪ್ರಾವೀಣ್ಯತೆ ಪಡೆಯುವವರೆಗೆ ಹೆಚ್ಚು ಅಪರಾಧಗಳನ್ನು ಮಾಡುತ್ತಾರೆ. ನಂತರ ದುರ್ಬಲವರ್ಗದ ಯುವಕರನ್ನು ನೇಮಿಸಿಕೊಳ್ಳಲು ಪ್ರಾರಂಭಿಸುತ್ತಾರೆ ಬಳಿಕ ನೆರೆಹೊರೆ ಪ್ರದೇಶಗಳು ಅಪರಾಧದ ಕೇಂದ್ರಗಳಾಗಿ ಬದಲಾಗುತ್ತವೆ.

ಚಾಮರಾಜಪೇಟೆಯ ಹಾಲಿ ಶಾಸಕರು ಬಡವರಿಗೆ ಆಮಿಷವೊಡ್ಡುತ್ತಿದ್ದು, ಹಣವನ್ನು ನೀಡುತ್ತಿದ್ದಾರೆ. ಜನರಿಗೆ ಉತ್ತಮ ಜೀವನ ಪರಿಸ್ಥಿತಿಗಳನ್ನು ಒದಗಿಸಿ. ಕ್ಷೇತ್ರದ ಅಭಿವೃದ್ಧಿಗೆ ಪಾಲಿಕೆ ಪ್ರತಿ ವರ್ಷ ಸಾಕಷ್ಟು ಹಣ ನೀಡುತ್ತದೆ. ಚಾಮರಾಜಪೇಟೆಯಲ್ಲಿ ಈ ಹಣ ಎಲ್ಲಿ ಖರ್ಚಾಗಿದೆ? ಭ್ರಷ್ಟಾಚಾರ ಒಂದು ಪಿಡುಗು. ಚಾಮರಾಜಪೇಟೆಯಲ್ಲಿ ನೈರ್ಮಲ್ಯ ಕರುಣಾಜನಕವಾಗಿದ್ದು, ಕೊಳೆಗೇರಿಗಳ ಪರಿಸ್ಥಿತಿ ಹದಗೆಡುತ್ತಿದೆ. ಜನರು ಚರಂಡಿಗಳ ಬಳಿ ಮಲಗುತ್ತಿದ್ದಾರೆ. ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇ ಆದರೆ, ಆದ್ಯತೆಯ ಮೇರೆಗೆ ಕ್ಷೇತ್ರವನ್ನು ಸ್ವಚ್ಛಗೊಳಿಸಲಾಗುತ್ತದೆ.

ಜನರಿಗೆ ಉತ್ತಮ ಶಿಕ್ಷಣ, ನೈರ್ಮಲ್ಯ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತೇನೆ. ಯುವಕರಿಗೆ ಆಕಾಂಕ್ಷೆಗಳಿವೆ, ಆದರೆ, ಅವುಗಳನ್ನು ಸಾಧಿಸಲು ಯಾವುದೇ ಮಾರ್ಗಗಳಿಲ್ಲ. ಇದನ್ನು ಪರಿಹರಿಸಲು ಬಲಿಷ್ಠ ಆಡಳಿತ, ರಾಜಕೀಯ ಇಚ್ಛಾಶಕ್ತಿಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಜೆ ನಗರ, ರಾಯಪುರಂ, ಪಾದರಾಯನಪುರ, ಚಾಮರಾಜಪೇಟೆ, ಕೆಆರ್ ಮಾರುಕಟ್ಟೆ, ಚಲವಾದಿಪಾಳ್ಯ ಮತ್ತು ಆಜಾದ್‌ನಗರ ಎಂಬ ಏಳು ವಾರ್ಡ್‌ಗಳಿದ್ದು, ಈ ಪ್ರದೇಶದಲ್ಲಿ ಮುಸ್ಲಿಮರು (ಸುಮಾರು 45%) ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com