ಕರ್ನಾಟಕದಲ್ಲಿ 14 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿಲ್ಲ: ಆರೋಗ್ಯ ಮಿಷನ್ ಮಾಹಿತಿ

ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ನಡುವೆಯೇ ರಾಜ್ಯದಲ್ಲಿ ಸುಮಾರು 14.3 ಲಕ್ಷ ಜನರು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿಲ್ಲ ಎನ್ನುವ ಆಘಾತಕಾರಿ ವರದಿಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಬಿಡುಗಡೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದೇಶದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ನಡುವೆಯೇ ರಾಜ್ಯದಲ್ಲಿ ಸುಮಾರು 14.3 ಲಕ್ಷ ಜನರು ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿಲ್ಲ ಎನ್ನುವ ಆಘಾತಕಾರಿ ವರದಿಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್ ಬಿಡುಗಡೆ ಮಾಡಿದೆ.

ಸತತವಾಗಿ ಮೂರು ಕೋವಿಡ್ ಅಲೆಗಳನ್ನು ಎದುರಿಸುವ ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಜನರು ಇನ್ನೂ ಕೋವಿಡ್ ಎರಡನೇ ಡೋಸ್ ಲಸಿಕೆಯನ್ನೇ ಪಡೆದಿಲ್ಲ ಎಂಬ ಮಾಹಿತಿಯನ್ನು ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕ ನವೀನ್ ಭಟ್ ತಿಳಿಸಿದ್ದಾರೆ. ಇದರ ಜೊತೆಗೆ ರಾಜ್ಯದಲ್ಲಿ “3.96 ಕೋಟಿ ಜನರು ತಮ್ಮ ಮುನ್ನೆಚ್ಚರಿಕೆಯ ಡೋಸ್ ಪಡೆದಿಲ್ಲ.ಪ್ರಸ್ತುತ ರಾಜ್ಯದಲ್ಲಿ ಕೇವಲ ಶೇ 23 ರಷ್ಡು ಜನರು ಮಾತ್ರ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದೆ. 

ಲಸಿಕೆಗಳ ಕೊರತೆಯೊಂದಿಗೆ, ಈ ಅಂಕಿಅಂಶಗಳು ಈಗ ಕಳವಳಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 1,950 ಮಂದಿ ದಾಟಿದೆ.ರಾಜ್ಯದಲ್ಲಿ 377 ಹೊಸ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ನಗರವೊಂದರಲ್ಲೇ 263 ಹೊಸ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಶಿವಮೊಗ್ಗ 23, ದಾವಣಗೆರೆ 12, ಕಲಬುರಗಿ 12, ಬಳ್ಳಾರಿ 9 , ತುಮಕೂರು 9, ಮತ್ತು ಚಿಕ್ಕಮಗಳೂರು 7 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕರ್ನಾಟಕ 2 ಲಕ್ಷ ಡೋಸ್‌ಗಳನ್ನು ಸ್ವೀಕರಿಸಲಿದೆ “ಲಸಿಕೆಗಳನ್ನು ಖರೀದಿಸಲು ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಲಾಗಿದೆ ಎಂದು ಚುನಾವಣಾ ಸ್ಕ್ರೀನಿಂಗ್ ಸಮಿತಿ ತಿಳಿಸಿದೆ. ಲಸಿಕೆ ಲಭ್ಯತೆ ಮತ್ತು ಫಲಾನುಭವಿಗಳ ಸಂಖ್ಯೆಯನ್ನು ಆಧರಿಸಿ ಸಾಮೂಹಿಕ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷ ಡಾ ಎಂ ಕೆ ಸುದರ್ಶನ್ ತಿಳಿಸಿದ್ದಾರೆ. ಇತ್ತೀಚಿನ ಸೋಂಕುಗಳ ಹೆಚ್ಚಳದ ದೃಷ್ಟಿಯಿಂದ, ಹೆಚ್ಚಾಗಿ ಎಕ್ಸ್ ಬಿಬಿ ಒಮಿಕ್ರಾನ್ ಸೋಂಕು ಹೆಚ್ಚಾಗಿದೆ. ಆಸ್ಪತ್ರೆಗೆ ದಾಖಲು ನಿಧಾನಗತಿಯ ಏರಿಕೆ ಮತ್ತು ಹೆಚ್ಚಾಗಿ ವಯಸ್ಸಾದವರು ಮತ್ತು ಸಹವರ್ತಿಗಳಲ್ಲಿ ಸಾವುಗಳ ಹೆಚ್ಚಳ, ಮೇಲಿನವರಿಗೆ ಬಲವಾಗಿ ಶಿಫಾರಸು ಮಾಡಲಾಗಿದೆ. 

ಕರ್ನಾಟಕ ಆರೋಗ್ಯ ಇಲಾಖೆಯು 2 ಲಕ್ಷ ಕಾರ್ಬೆವ್ಯಾಕ್ಸ್ ಡೋಸ್ ಅನ್ನು ಖರೀದಿಗೆ ಚಿಂತನೆ ನಡೆಸಿದೆ. ಆದರೆ ಮಾದರಿ ನೀತಿ ಸಂಹಿತೆಯಿಂದ ಲಸಿಕೆಗಳನ್ನು ಖರೀದಿ ಅಸಾಧ್ಯವಾಗುತ್ತಿದೆ. ಚುನಾವಣಾ ಸ್ಕ್ರೀನಿಂಗ್ ಸಮಿತಿಗೆ ಕಡತವನ್ನು ಕಳುಹಿಸಲಾಗಿದೆ. ಚುನಾವಣಾ ಆಯೋಗದಿಂದ ಒಪ್ಪಿಗೆ ಸಿಕ್ಕ ಬಳಿಕ ಲಸಿಕೆ ತಯಾರಕರ ಜೊತೆ ಮಾತನಾಡಿ ಸೂಕ್ತ ಆದೇಶ ಮಾಡಲಾಗುವುದು ಎಂದು ಅವರು ತಿಳಿಸಿದರು. ಲಸಿಕೆ ಡೋಸ್‌ಗಳ ಲಭ್ಯತೆ ಹಾಗೂ ಫಲಾನುಭವಿಗಳ ಸಂಖ್ಯೆಯನ್ನು ಆಧರಿಸಿ ಮತ್ತೆ ಸಾಮೂಹಿಕ ಲಸಿಕಾಕರಣ ಅಭಿಯಾನ ಆರಂಭಿಸಲಾಗುವುದು ಎಂದರು.

60 ವರ್ಷ ವಯಸ್ಸಿನವರು ಮತ್ತು ಆರೋಗ್ಯ ಸಮಸ್ಯೆ ಹೊಂದಿರುವವರು ಲಸಿಕೆಯ ಮುನ್ನೆಚ್ಚರಿಕೆಯ ಪ್ರಮಾಣ ಹೆಚ್ಚಿಸಲಾಗುವುದು ಎಂದಿದ್ದಾರೆ. ಅಣಕು ಕಾರ್ಯಾಚರಣೆಯಿಂದ ಕಲಿತ ಪಾಠಗಳ ಆಧಾರದ ಮೇಲೆ, ಕರ್ನಾಟಕದ ಆಸ್ಪತ್ರೆಗಳು ಕೋವಿಡ್ ಪ್ರಕರಣಗಳಲ್ಲಿ ಸಂಭವನೀಯ ಏರಿಕೆ ನಿಭಾಯಿಸಲು ಸಜ್ಜಾಗುತ್ತಿವೆ.”ಕೋವಿಡ್ ನಿರ್ವಹಣೆಗಾಗಿ ಎಲ್ಲವೂ ಜಾರಿಯಲ್ಲಿದೆ ಮತ್ತು ನಾವು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ಡೀನ್ ಡಾ ಮನೋಜ್ ಕುಮಾರ್ ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com