ಕೊನೆಗೂ ತಾಯಿ ಮಡಿಲು ಸೇರಿದ ಕಂದಮ್ಮ: ವಾಣಿ ವಿಲಾಸ ಆಸ್ಪತ್ರೆಯ ಮಗು ಕಳ್ಳತನ ಪ್ರಕರಣ ಸುಖಾಂತ್ಯ!

ವಾಣಿ ವಿಲಾಸ ಆಸ್ಪತ್ರೆಯಿಂದ ಶನಿವಾರ ಅಪಹರಣಕ್ಕೊಳಗಾಗಿದ್ದ 8 ದಿನದ ಪುಟ್ಟ ಮಗುವನ್ನು ತಾಯಿಯ ಮಡಿಲು ಸೇರಿಸುವಲ್ಲಿ ವಿವಿ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಾಣಿ ವಿಲಾಸ ಆಸ್ಪತ್ರೆಯಿಂದ ಶನಿವಾರ ಅಪಹರಣಕ್ಕೊಳಗಾಗಿದ್ದ 8 ದಿನದ ಪುಟ್ಟ ಮಗುವನ್ನು ತಾಯಿಯ ಮಡಿಲು ಸೇರಿಸುವಲ್ಲಿ ವಿವಿ ಪುರಂ ಪೊಲೀಸರು ಯಶಸ್ವಿಯಾಗಿದ್ದಾರೆ.

ನಾಪತ್ತೆಯಾಗಿದ್ದ ಮಗುವಿನ ಪತ್ತೆಗೆ ಮುಂದಾಗಿದ್ದ ಪೊಲೀಸರು, ಸುಮಾರು 600 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದರು. ಇದರಂತೆ ಆರೋಪಿಯನ್ನು ಬಂಧನಕ್ಕೊಳಪಡಿಸಿ ಕೊನೆಗೂ ಮಗುವನ್ನು ತಾಯಿಯ ಮಡಿಲು ಸೇರಿಸಿದ್ದಾರೆ.

ಬಂಧಿತ ಆರೋಪಿಯನ್ನು ರಶ್ಮಿ (30) ಎಂದು ಗುರ್ತಿಸಲಾಗಿದೆ. ಕೆಲ ತಿಂಗಳ ಹಿಂದಷ್ಟೇ ಪತಿಯನ್ನು ಕಳೆದುಕೊಂಡು ವಿಧವೆಯಾಗಿದ್ದ ರಶ್ಮಿ, ದುಃಖದಲ್ಲಿರುವಾಗಲೇ ಗರ್ಭಪಾತಕ್ಕೆ ಒಳಗಾಗಿದ್ದಳು. ಮರುಮದುವೆಯಾಗಲು ಆಸಕ್ತಿಯಿಲ್ಲದ ಕಾರಣ, ಮಗುವೊಂದನ್ನು ದತ್ತು ಪಡೆದುಕೊಳ್ಳಲು ನಿರ್ಧರಿಸಿದ್ದಳು. ಆದರೆ, ಇದು ಸಾಧ್ಯವಾಗದ ಕಾರಣ ಮಗುವನ್ನು ಅಪಹರಿಸಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಮಗುವನ್ನು ಕರೆತಂದಾಗ ನಾವು ನಿದ್ರೆಯಲ್ಲಿದ್ದೆವು. ಎಬ್ಬಿಸಿ, ಮಗುವನ್ನು ತೋರಿಸಿದರೆ, ಕನಸು ಎಂದೇ ನಾವು ಭಾವಿಸಿದ್ದೆವು. ನಮ್ಮ ಅದೃಷ್ಟವನ್ನು ನಂಬಲು ಸಾಧ್ಯವಾಗಿರಲಿಲ್ಲ. ನನ್ನ ಮಗನಿಗೆ ಎಡಗೈಯಲ್ಲಿ ಮಚ್ಚೆ ಇತ್ತುಯ ಅದು ಮುಖ್ಯ ಗುರುತಾಗಿತ್ತು ಎಂದು ಮಗುವಿನ ತಂದೆ ಪ್ರಸನ್ನ ಅವರು ಹೇಳಿದ್ದಾರೆ.

ಮಗುವನ್ನು ಅಪಹರಿಸಿದ್ದ ಮಹಿಳೆ, ಸೀರೆಯಲ್ಲಿ ಸುತ್ತಿಕೊಂಡು ಆಟೋದಲ್ಲಿ ಕೆ.ಆರ್.ರಸ್ತೆ, ಬನಶಂಕರಿ, ಗೊರಗುಂಟೆಪಾಳ್ಯ, ಕಾಮಾಕ್ಷಿಪಾಳ್ಯದಲ್ಲಿ ಪ್ರಯಾಣಿಸಿದ್ದರು. ಕೊನೆಗೆ ರಾಮನಗರಕ್ಕೆ ಬಸ್ ಹತ್ತಿದ್ದಳು. ಇದೀಗ ಆಕೆಯನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏಪ್ರಿಲ್ 6 ರಂದು ಆಸ್ಪತ್ರೆಗೆ ದಾಖಲಾಗಿ ಮರುದಿನ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಸುಮಾ ಅವರಿಗೆ ಬಿಳಿ ರಕ್ತ ಕಣಗಳ ಸಂಖ್ಯೆ ಕಡಿಮೆ ಇರುವುದು ಕಂಡು ಬಂದಿತ್ತು. ಹೀಗಾಗಿ ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿ ಇರುವಂತೆ ಶಿಫಾರಸು ಮಾಡಲಾಗಿತ್ತು.

ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದ ಪ್ರಸನ್ನ ಅವರು ತುಮಕೂರು ಜಿಲ್ಲೆಯ ತಮ್ಮ ಊರಿಗೆ ಹೋಗಿದ್ದರು. ಸಂಬಂಧಿ ನಾಗಮ್ಮ ಅವರು ಸುಮಾ ಹಾಗೂ ಮಗುವಿನೊಂದಿಗೆ ಕೊಠಡಿಯಲ್ಲಿದ್ದರು. ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಗುವಿಗೆ ಹಾಲುಣಿಸಿದ್ದ ಸುಮಾ ಅವರು ನಿದ್ರೆಗೆ ಜಾರಿದ್ದರು. ಈ ವೇಳೆ ಮಗು ನಾಪತ್ತೆಯಾಗಿದೆ. ಮಗು ಎನಾಯಿತು ಎಂಬ ಸುಳಿಸುವ ಆಸ್ಪತ್ರೆಯ ಸಿಬ್ಬಂದಿಗಾಗಲಿ, ಸುಮಾ ಅವರ ಜೊತೆಗಿದ್ದ ಸಂಬಂಧಿ ನಾಗಮ್ಮ ಅವರಿಗಾಗಲಿ ತಿಳಿದು ಬಂದಿಲ್ಲ. ಬಳಿಕ ನಗಕ್ಕೆ ಬಂದ ಪ್ರಸನ್ನ ಅವರು ಪೊಲೀಸರಿಗೆ ದೂರು ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com