ಈವರೆಗೂ ಯಾರೊಬ್ಬರೂ ನಮ್ಮ ನೆರವಿಗೆ ಬಂದಿಲ್ಲ: ಸುಡಾನ್‌ನಲ್ಲಿ ಸಿಲುಕಿರುವ ಆದಿವಾಸಿಗಳು

ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರು ಮತ್ತು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರ ಕುರಿತು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮಾತಿನ ಸಮರ ಮುಂದುವರೆದಿದ್ದು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಯುದ್ಧ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಕನ್ನಡಿಗರು ಮತ್ತು ಹಕ್ಕಿಪಿಕ್ಕಿ ಬುಡಕಟ್ಟು ಜನಾಂಗದವರ ಕುರಿತು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವಿನ ಮಾತಿನ ಸಮರ ಮುಂದುವರೆದಿದ್ದು, ಈ ನಡುವಲ್ಲೇ ಈವರೆಗೂ ಯಾರೊಬ್ಬರೂ ನಮ್ಮ ನೆರವಿಗೆ ಬಂದಿಲ್ಲ ಎಂದು ಸಂಕಷ್ಟದಲ್ಲಿ ಸಿಲುಕಿಸುವ ಆದಿವಾಸಿಗಳು ಹೇಳಿದ್ದಾರೆ.

“ನಾವು ಟ್ವಿಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಜೈಶಂಕರ್ ಮತ್ತು ಸಿದ್ದರಾಮಯ್ಯ ಅವರ ಸಂದೇಶಗಳನ್ನು ನೋಡುತ್ತಿದ್ದೇವೆ, ಆದರೆ, ಇದುವರೆಗೆ ಯಾರೊಬ್ಬರೂ ನಮ್ಮನ್ನು ಸಂಪರ್ಕಿಸಿಲ್ಲ. ಒಳಗಿರುವಂತೆ, ಹೊರಗೆ ಬಾರದಂತೆ ರಾಯಭಾರಿ ಕಚೇರಿ ನಮಗೆ ಸೂಚಿಸಿದೆ. ನಮ್ಮ ಮೂಲಭೂತ ಅಗತ್ಯಗಳನ್ನು ಪರಿಹರಿಸಲಾಗುತ್ತಿಲ್ಲ ಎಂದು ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದ ಶಾಂದಿ ಬನ್ನೇರಾ ಎಂಬುವವರು ಹೇಳಿದ್ದಾರೆ.

ಒಟ್ಟು 20 ಜನರು ಪರಸ್ಪರ ಕಟ್ಟಡಗಳಲ್ಲಿ ವಾಸಿಸುತ್ತಿದ್ದೇವೆ. ಇಲ್ಲಿನ ಎಲ್ಲಾ ಅಂಗಡಿಗಳು ಮುಚ್ಚಲ್ಪಟ್ಟಿವೆ.  ಪಡಿತರ ದಾಸ್ತಾನುಗಳಿವೆ, ಆದರೆ ನೀರು ಅಥವಾ ವಿದ್ಯುತ್ ಇಲ್ಲ. ನಾವು ಉಳಿದುಕೊಂಡಿರುವ ಸ್ಥಳದಿಂದ 500 ಮೀಟರ್ ದೂರದಲ್ಲಿದ್ದ ನೀರಿನ ಟ್ಯಾಪ್ ಈಗ ಬತ್ತಿ ಹೋಗಿದೆ. ಸುತ್ತಲೂ ಶೆಲ್ ದಾಳಿ ನಡೆಯುತ್ತಿರುವುದರಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ಭಾಗಗಳಿಂದ ಸುಡಾನ್‌ಗೆ ಹೋದ ಅನೇಕ ಹಕ್ಕಿ ಪಿಕ್ಕಿ ಬುಡಕಟ್ಟು ಜನಾಂಗದವರಲ್ಲಿ ಶಾಂದಿ ಬನ್ನೇರಾ ಕೂಡ ಒಬ್ಬರಾಗಿದ್ದಾರೆ. ಶಾಂದಿ (27) ಒಂಬತ್ತು ತಿಂಗಳ ಹಿಂದೆ ಪತ್ನಿ ಪವಿತ್ರಾ ಅವರೊಂದಿಗೆ ಆಯುರ್ವೇದ ಔಷಧ ಹಾಗೂ ಇತರೆ ವಸ್ತುಗಳನ್ನು ಮಾರಾಟ ಮಾಡಿ ಜೀವನ ಸಾಗಿಸಲು ತೆರಳಿದ್ದರು. ಇನ್ನು ಕೆಲವರು ಕಟ್ಟಡ ಕಾರ್ಮಿಕರಾಗಿ ಹೋಗಿದ್ದರು.

ನೆರವು ಕೋರಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರವನ್ನು ಸಂಪರ್ಕಿಸಿದ್ದೆವು. ಆದರೆ, ಅವರೂ ಕೂಡ ವಿದೇಶಾಂಗ ಸಚಿವಾಲಯದ ಹೇಳಿದ್ದನ್ನೇ ಹೇಳಿದರು. ಇದೀಗ ನಮ್ಮ ಕುಟುಂಬ ಆತಂಕದಲ್ಲಿದೆ. ಬದುಕು ಕಟ್ಟಿಕೊಳ್ಳಲು ನಾವು ಇಲ್ಲಿದೆ ಬಂದಿದ್ದೆವು. ಆದರೆ, ಅದು ಆಗಲಿಲ್ಲ. ಇದೀಗ ಹಿಂತಿರುಗಲು ಬಯಸುತ್ತಿದ್ದೇವೆ. ಆದರೆ, ಸಾಧ್ಯವಾಗುತ್ತಿಲ್ಲ ಎಂದು ಸಂಕಷ್ಟಕ್ಕೆ ಸಿಲುಕಿರುವ ಮತ್ತೊಬ್ಬ ಆದಿವಾಸಿ ಹೇಳಿದ್ದಾರೆ.

ಹುಣಸೂರಿನ ನಮ್ಮ ಕುಗ್ರಾಮದಿಂದ ಸುಮಾರು 80 ಜನರು ಸುಡಾನ್‌ಗೆ ಹೋಗಿದ್ದಾರೆ. ಅವರನ್ನು ಕರೆತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದರೆ, ಯಾವುದೇ ಪ್ರಯೋಜನಗಳಾಗುತ್ತಿಲ್ಲ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ಸುಡಾನ್ ನಲ್ಲಿ ಸಂಕಷ್ಟಕ್ಕೆ ಸುಲುಕಿರುವ ಬುಡಕಟ್ಟು ಜನಾಂಗದ ವ್ಯಕ್ತಿಯ ಸಂಬಂಧಿ ಸತ್ಯ ಎಂಬುವವರು ಹೇಳಿದ್ದಾರೆ.

ಗೃಹ ಸಚಿವರಿಂದ ನೆರವಿನ ಭರವಸೆ
ಸುಡಾನ್‌ನಲ್ಲಿ ಸಿಲುಕಿರುವ ರಾಜ್ಯಜ ಜನರ ರಕ್ಷಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಬುಧವಾರ ಹೇಳಿದ್ದಾರೆ.

ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಅವರಿಗೆ ಸುಡಾನ್‌ನಲ್ಲಿ ಸಿಲುಕಿರುವ ಎಲ್ಲಾ ಕುಟುಂಬಗಳನ್ನು ಗುರುತಿಸಲು ಮತ್ತು ಶೀಘ್ರವಾಗಿ ಮರಳಲು ತೆಗೆದುಕೊಳ್ಳಬಹುದಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com