
ಬೆಂಗಳೂರು: ಪುಟ್‍ಪಾತ್ ತೆರವು ಮಾಡುತ್ತೇವೆಂದು ಬಂದ ಬಿಬಿಎಂಪಿ ಸಿಬ್ಬಂದಿಗಳು ಚಿಕ್ಕಪೇಟೆ ವಿಧಾನಸಭೆಯಲ್ಲಿರುವ ಇರುವ ಇತಿಹಾಸ ಪ್ರಸಿದ್ಧ ಶ್ರೀ ಜಲಕಂಠೇಶ್ವರ ದೇವಸ್ಥಾನವನ್ನು ಕೆಡವಿ ಹಾಕಿದ್ದಾರೆ.
ಬ್ರಾಂಡ್ ಬೆಂಗಳೂರು ಹೆಸರಲ್ಲಿ ನಡೆಯುತ್ತಿರುವ ಪಾದಚಾರಿ ಮಾರ್ಗ ತೆರವು ಮಾಡುವ ಕಾರ್ಯಚರಣೆ ಸಂದರ್ಭದಲ್ಲಿ ಇತಿಹಾಸ ಪ್ರಸಿದ್ದೀಯಾಗಿದ ಜಲಕಂಟೇಶ್ವರ ದೇವಾಲಯವನ್ನು ನೆಲಕ್ಕುರುಳಿಸಲಾಗಿದೆ.
ದೇವಾಲಯ ನೆಲಸಮ ಮಾಡಿದ ಹಿನ್ನೇಲೆ ಸಾರ್ವಜನಿಕರಿಂದ ತೀವ್ರ ಅಕ್ರೋಶ ವ್ಯಕ್ತವಾಗಿದ್ದು, ಮತ್ತೆ ದೇವಾಲಯ ನಿರ್ಮಿಸಿಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ದೇವಸ್ಥಾನ ಉರುಳಿ ಬೀಳುತ್ತಿದ್ದಂತೆ ಸ್ಥಳದಿಂದ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಪರಾರಿಯಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ದೇವಾಲಯ ಮರು ನಿರ್ಮಾಣ ಮಾಡಿಕೊಡುವ ಭರವಸೆ ನೀಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ದೇವಸ್ಥಾನ ಸಮಿತಿಯಿಂದ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್ ಮಾಹಿತಿ ಪಡೆದುಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಸಕರು, ದೇವಸ್ಥಾನದ ಆವರಣದಲ್ಲಿ ಅಂಗಡಿಗಳಿರುವ ಸಂಬಂಧ ಅಧಿಕಾರಿಗಳು ಲೋಕಾಯುಕ್ತಕ್ಕೆ ಹೋಗಿ ತೆರವು ಕಾರ್ಯಾಚರಣೆಗೆ ಆದೇಶ ಪಡೆದುಕೊಂಡಿದ್ದರು, ಇದರಂತೆ ಜೆಸಿಬಿ ಯಂತ್ರಗಳನ್ನು ಬಳಸಿ ತೆರವು ಕಾರ್ಯಾಚರಣೆ ನಡೆಸುವ ವೇಳೆ ದೇವಾಲಯಕ್ಕ ಹಾನಿಯಾಗಿದೆ. ಇದೀಗ ಅಧಿಕಾರಿಗಳು ಪುನಃಸ್ಥಾಪನೆ ಕಾರ್ಯವನ್ನು ಮಾಡಲು ಒಪ್ಪಿಕೊಂಡಿದ್ದಾರೆಂದು ಹೇಳಿದ್ದಾರೆ.
Advertisement