ವಿವಿ ಪುರಂ ಫುಡ್ ಸ್ಟ್ರೀಟ್‌ಗೆ ನ್ಯೂ ಲುಕ್‌: ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಸೂಚನೆ

ರಾಜಧಾನಿಯ ಪಾರಂಪರಿಕ ಹಾಗೂ ಹಳೆಯ ಪ್ರದೇಶವಾಗಿರುವ ವಿ.ವಿ. ಪುರಂನ ಫುಡ್‌ ಸ್ಟ್ರೀಟ್‌ (ತಿಂಡಿ ಬೀದಿ) ಗೆ ಹೈಟೆಕ್‌ ಸ್ಪರ್ಶ ನೀಡಲಾಗುತ್ತಿದ್ದು, ಕಾಮಗಾರಿಗಳ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಬುಧವಾರ ಸೂಚನೆ ನೀಡಿದೆ.
ಬೆಂಗಳೂರಿನ ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿ ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ.
ಬೆಂಗಳೂರಿನ ವಿವಿ ಪುರಂ ಫುಡ್ ಸ್ಟ್ರೀಟ್‌ನಲ್ಲಿ ನವೀಕರಣ ಕಾರ್ಯ ಭರದಿಂದ ಸಾಗುತ್ತಿದೆ.

ಬೆಂಗಳೂರು: ರಾಜಧಾನಿಯ ಪಾರಂಪರಿಕ ಹಾಗೂ ಹಳೆಯ ಪ್ರದೇಶವಾಗಿರುವ ವಿ.ವಿ. ಪುರಂನ ಫುಡ್‌ ಸ್ಟ್ರೀಟ್‌ (ತಿಂಡಿ ಬೀದಿ) ಗೆ ಹೈಟೆಕ್‌ ಸ್ಪರ್ಶ ನೀಡಲಾಗುತ್ತಿದ್ದು, ಕಾಮಗಾರಿಗಳ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಬುಧವಾರ ಸೂಚನೆ ನೀಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ದಕ್ಷಿಣ ವಲಯ ವ್ಯಾಪ್ತಿಯ ವಿವಿಪುರಂ ವಾರ್ಡ್ ನಲ್ಲಿ ಬರುವ ಫುಡ್ ಸ್ಟ್ರೀಟ್ (ತಿಂಡಿ ಬೀದಿ) ಹಾಗೂ ಧರ್ಮರಾಯ ಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಬರುವ ಗಂಗಾಧರೇಶ್ವರ ದೇವಸ್ಥಾನ ಗೋಡೆ ಕುಸಿದಿರುವ ಸ್ಥಳ ಕ್ಕೆ ಬಿಬಿಎಂಪಿ ದಕ್ಷಿಣ ವಲಯ ಆಯುಕ್ತರಾದ ಜಯರಾಮ್ ರಾಯಪುರ ಅವರು ನಿನ್ನೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಈ ವೇಳೆ ಫುಡ್ ಸ್ಟ್ರೀಟ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಫುಡ್ ಸ್ಟ್ರೀಟ್ ನಲ್ಲಿ 5 ಮೀಟರ್ ಕಾಂಕ್ರೀಟ್ ರಸ್ತೆ, 3 ಮೀಟರ್ ಫುಟ್‌ಪಾತ್, 25 ವಿದ್ಯುತ್ ದೀಪಗಳ ಅಳವಡಿಕೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಆಗಸ್ಟ್ 15ರೊಳಗೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆಸೂಚನೆ ನೀಡಿದರು.

ಸಜ್ಜನ್ ರಾವ್ ವೃತ್ತ ಮತ್ತು ಮಿನರ್ವ ವೃತ್ತದ ನಡುವೆ ಸುಮಾರು 200 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ನಡೆಯುತ್ತಿದ್ದು, ಈಗಾಗಲೇ ಒಳಚರಂಡಿ ಸಂಪರ್ಕ, ನೀರು ಸರಬರಾಜು ಸಂಪರ್ಕ, ಮಳೆನೀರು ಸಂಪರ್ಕ, ಕೇಬಲ್ ಲೈನ್ ಡಕ್ಟ್, ಕೇಬಲ್ ಚೇಂಬರ್ ಕಾಮಗಾರಿ ಪೂರ್ಣಗೊಂಡಿದೆ. ಶೇ.70ರಷ್ಟು ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಕಾಂಕ್ರೀಟ್ ರಸ್ತೆ ಪೂರ್ಣಗೊಂಡ ಬಳಿಕ ಬ್ರೌನ್ ಕಲರ್ ಐರನ್ ಆಕ್ಸೈಡ್ ನಿಂದ ರಸ್ತೆ ಪಾಲಿಶ್ ಮಾಡಲಾಗುವುದು. ಇದರಿಂದ ರಸ್ತೆಯು ಆಕರ್ಷಣೀಯವಾಗಿ ಕಾಣಲಿದೆ ಎಂದು ಹೇಳಿದರು.

ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಇರುವ ಇತಿಹಾಸ ಪ್ರಸಿದ್ಧ ಶ್ರೀ ಜಲಕಂಠೇಶ್ವರ ದೇವಸ್ಥಾನದ ರಸ್ತೆಗೂ ಭೇಟಿ ನೀಡಿದ ಅವರು, ಹಾನಿಗೊಳಗಾದ ಭಾಗದ ನವೀಕರಣ ಕಾಮಗಾರಿಯನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com