ಬೆಂಗಳೂರು: ನೀರಿನ ಟ್ಯಾಂಕ್ ಕುಸಿತ ಪ್ರಕರಣ; ಕಟ್ಟಡ ಮಾಲೀಕನ ವಿರುದ್ಧ ಪ್ರಕರಣ ದಾಖಲು

ಕಟ್ಟಡದ ಮೇಲಿಂದ ನೀರಿನ ಟ್ಯಾಂಕ್ ಕುಸಿದು ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.
ತಳ್ಳುಗಾಡಿಯ ಮೇಲೆ ಬಿದ್ದಿದ್ದ ವಾಟರ್ ಟ್ಯಾಂಕ್.
ತಳ್ಳುಗಾಡಿಯ ಮೇಲೆ ಬಿದ್ದಿದ್ದ ವಾಟರ್ ಟ್ಯಾಂಕ್.

ಬೆಂಗಳೂರು: ಕಟ್ಟಡದ ಮೇಲಿಂದ ನೀರಿನ ಟ್ಯಾಂಕ್ ಕುಸಿದು ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಬುಧವಾರ ರಾತ್ರಿ 10.45ರ ವೇಳೆಗೆ ಬೌರಿಂಗ್ ಆಸ್ಪತ್ರೆ ಬಳಿಯ ವಾಣಿಜ್ಯ ಕಟ್ಟಡದ ಐದನೇ ಮಹಡಿಯಿಂದ ಓವರ್‌ಹೆಡ್‌ ಟ್ಯಾಂಕ್‌ ಹಾಗೂ ಪ್ಯಾರಪೆಟ್ ಗೋಡೆಯ ಒಂದು ಭಾಗವು ಕುಸಿದು ಬಿದ್ದಿತ್ತು. ಇದು ಎಗ್ ರೈಸ್ ಮಾರಾಟ ಮಾಡುತ್ತಿದ್ದ ತಳ್ಳುಗಾಡಿಯ ಮೇಲೆ ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿ, ಐದು ಮಂದಿ ಗಾಯಗೊಂಡಿದ್ದರು.

“ವಾಟರ್ ಟ್ಯಾಂಕ್ ಐದನೇ ಮಹಡಿಯಿಂದ ಬಿದ್ದಿದೆ. ಟ್ಯಾಂಕ್‌ಗೆ ಸರಿಯಾದ ಬೆಂಬಲವನ್ನು ನೀಡದಿರುವುದು ತನಿಖೆಯಲ್ಲಿ ಕಂಡು ಬಂದಿದೆ.ಘಟನೆಯ ನಿಖರವಾದ ಕಾರಣವನ್ನು ಕಂಡುಹಿಡಿಯಲು ಎಫ್‌ಎಸ್‌ಎಲ್ ತಜ್ಞರು ಮತ್ತು ಪ್ರಮಾಣೀಕೃತ ಸಿವಿಲ್ ಎಂಜಿನಿಯರ್‌ಗಳ ಅಭಿಪ್ರಾಯವನ್ನು ಪಡೆಯಲಾಗುತ್ತಿದೆ ಎಂದು ಡಿಸಿಪಿ (ಪೂರ್ವ) ಭೀಮಾಶಂಕರ್ ಎಸ್ ಗುಳೇದ್ ಅವರು ಹೇಳಿದ್ದಾರೆ.

ಪ್ರಕರಣ ಸಂಬಂಧ ಕಟ್ಟಡ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ ಅಡಿಯಲ್ಲಿ ನಿರ್ಲಕ್ಷ್ಯ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com