ಅತ್ಯಾಚಾರಕ್ಕೆ ವಿರೋಧಿಸಿದ್ದಕ್ಕೆ ಯುವತಿಯ ಹತ್ಯೆ: ಆರೋಪಿ ಬಂಧನ

ನಾಪತ್ತೆಯಾಗಿದ್ದ ಯುವತಿ, ಶವವಾಗಿ ಪತ್ತೆಯಾಗಿದ್ದ ಪ್ರಕರಣ ಬೇಧಿಸಿರುವ ಮಹದೇವಪುರ ಠಾಣೆ ಪೊಲೀಸರು, ಪಕ್ಕದ ಮನೆಯಲ್ಲಿಯೇ ನೆಲೆಸಿದ್ದ ಹಂತಕನನ್ನು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಆರೋಪಿ.
ಬಂಧಿತ ಆರೋಪಿ.
Updated on

ಬೆಂಗಳೂರು: ನಾಪತ್ತೆಯಾಗಿದ್ದ ಯುವತಿ, ಶವವಾಗಿ ಪತ್ತೆಯಾಗಿದ್ದ ಪ್ರಕರಣ ಬೇಧಿಸಿರುವ ಮಹದೇವಪುರ ಠಾಣೆ ಪೊಲೀಸರು, ಪಕ್ಕದ ಮನೆಯಲ್ಲಿಯೇ ನೆಲೆಸಿದ್ದ ಹಂತಕನನ್ನು ಬಂಧನಕ್ಕೊಳಪಡಿಸಿದ್ದಾರೆ.

ಮಹೇಶ್ವರಿ ನಗರದ ನವಾಸಿ ಕೃಷ್ಣ ಚಂದ್ರ ಸೇತಿ (28) ಬಂಧತ ಆರೋಪಿಯಾಗಿದ್ದಾನೆ. ಗುರುವಾರ ರಾತ್ರಿ ಪಕ್ಕದ ಮನೆಯ ಮಹಾನಂದಾ (21) ಅವರನ್ನು ಮನೆಯೊಳಗೆ ಎಳೆದುಕೊಂಡು ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ವೇಳೆ ಆಕೆ ಜೋರಾಗಿ ಚೀರಾಡಿ ಪ್ರತಿರೋಧವೊಡ್ಡಿದಾಗ ಆಕೆ ಕುತ್ತಿಗೆಗೆ ಧರಿಸಿದ್ದ ದಾರವನ್ನೇ ಬಿರಿಯಾಗಿ ಹಿಡಿದು, ಬಾಯಿ ಮುಚ್ಚಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದ. ಬಳಿಕ ಶವವನ್ನು ಡ್ರಮ್ ನಲ್ಲಿ ಇರಿಸಿದ್ದ ಆರೋಪಿ, ಮುಂಜಾನೆ ಮೃತದೇಹವನ್ನು ಆಕೆ ಮನೆ ಎದುರು ಎಸೆದು ಮನೆ ಸೇರಿಕೊಂಡಿದ್ದ.

ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚಱಣೆ ನಡೆಸಿದ ಪೊಲೀಸರು, ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.

ಕಲಬುರಗಿ ಮೂಲಕ ಮಹಾನಂದಾ ಮತ್ತು ಆಕೆಯ ಅಕ್ಕ ಸರೋಜಾ ಮಹದೇವಪುರ ಮಹೇಶ್ವರಿ ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಇಲ್ಲಿನ ಖಾಸಗಿ ಪೆಟ್ರೋಲ್ ಬಂಕ್ ವೊಂದರಲ್ಲಿ ಸಹೋದರಿಯರು ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಏಕಾಏಕಿ ಮಹಾನಂದಾ ನಾಪತ್ತೆಯಾಗಿದ್ದಳು. ಎಲ್ಲೆಡೆ ಹುಡುಕಾಡಿದ ಆಕ್ಕ ಸರೋಜಾ ರಾತ್ರಿ 12ಕ್ಕೆ ಮಹದೇವಪುರ ಠಾಣೆಗೆ ತೆರಳಿ ತಂಗಿ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಶುಕ್ರವಾರ ಮುಂಜಾನೆ 5 ಗಂಟೆಗೆ ಸಹರೋಜಾ ಮನೆಯಿಂದ ಹೊರ ಬಂದಾಗ ಆವರಣದಲ್ಲೇ ತಂಗಿ ಮಹಾನಂದಾಳ ಮೃತದೇಹ ಪತ್ತೆಯಾಗಿತ್ತು.

ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲಸರು ಮೃತದೇಹವನ್ನು ಕೂಲಂಕಷವಾಗಿ ತಪಾಸಣೆ ನಡೆಸಿದ್ದು, ಈ ವೇಳೆ ಮಹಾನಂದಾಳ ಚಪ್ಪಲಿಗಳು ಮನೆಯ ಬಳಿಯೇ ಇದ್ದವು. ಇನ್ನು ಮೃತದೇಹ ಪಾದಗಳಲ್ಲಿ ಯಾವುದೇ ಧೂಳು ಇಲ್ಲದಿರುವುದು ಕಂಡು ಬಂದಿದೆಯ ಮನೆಯ ಸುತ್ತಮುತ್ತ ಮಹಾನಂದಾಳ ಕೊಲೆಯಾಗಿದ್ದು, ಹಂತಕರು ಸಮೀಪದಲ್ಲೇ ಇರಬಹುದು ಎಂದು ಶಂಕಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರೆಸಿದ ಪೊಲೀಸರು ಅಕ್ಕಪಕ್ಕದ ಮನೆಯವರನ್ನು ವಿಚಾರಣೆ ಮಾಡಿದ್ದಾರೆ. ನೆರೆ ಮನೆಯ ಕೃಷ್ಣಚಂದ್ರ ಸೇತಿ ನಡವಳಿಕೆ ಬಗ್ಗೆ ಅನುಮಾನ ಬಂದಿದೆ. ಈ ವೇಳೆ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com