ದ್ವೇಷ, ಪಕ್ಷಪಾತ ಹತ್ತಿಕ್ಕಲು ‘ನನ್ನ ಮನೆಗೆ ಬನ್ನಿ, ನನ್ನ ಅತಿಥಿಯಾಗಿ’ ಅಭಿಯಾನ ಆರಂಭ

77 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಅಡೆತಡೆಗಳನ್ನು ದೂರಾಗಿಸುವ ಸಲುವಾಗಿ ನೂರಾರು ಜಾತ್ಯತೀತ ಸಂಘಟನೆಗಳು ಸೋಮವಾರ ‘ನನ್ನ ಮನೆಗೆ ಬನ್ನಿ, ನನ್ನ ಅತಿಥಿಯಾಗಿ’ ಎಂಬ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಪ್ರಾರಂಭಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 77 ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಸಾಮಾಜಿಕವಾಗಿ ಅಡೆತಡೆಗಳನ್ನು ದೂರಾಗಿಸುವ ಸಲುವಾಗಿ ನೂರಾರು ಜಾತ್ಯತೀತ ಸಂಘಟನೆಗಳು ಸೋಮವಾರ ‘ನನ್ನ ಮನೆಗೆ ಬನ್ನಿ, ನನ್ನ ಅತಿಥಿಯಾಗಿ’ ಎಂಬ ರಾಷ್ಟ್ರೀಯ ಮಟ್ಟದ ಅಭಿಯಾನವನ್ನು ಪ್ರಾರಂಭಿಸಿವೆ.

ರಾಜ್ಯದಲ್ಲಿ ಆರಂಭವಾಗಿರುವ ಅಭಿಯಾನವು ಕನ್ನಡ ಕವಿ ಕುವೆಂಪು ಅವರ 'ತೆರೆದಿದೆ ಮನೆ ಓ ಬಾ ಅತಿಥಿ' ಎಂಬ ಹಾಡಿನಿಂದ ಪ್ರೇರಿತವಾಗಿದೆ.

ಇತರರೊಂದಿಗೆ ಕರ್ನಾಟಕದಲ್ಲಿ ಅಭಿಯಾನವನ್ನು ಮುನ್ನಡೆಸುತ್ತಿರುವ ಅನಿತಾ ಚೆರಿಯಾ ಅವರು ಮಾತನಾಡಿ, “ಭಾರತದಲ್ಲಿ ಸಮುದಾಯಗಳ ವ್ಯವಸ್ಥಿತ ಪ್ರತ್ಯೇಕತೆಯು ಅಪನಂಬಿಕೆ, ದ್ವೇಷ ಮತ್ತು ಭಯದಲ್ಲಿ ಊಹೆಗೂ ನಿಲುಕದಷ್ಟು ಆಳಕ್ಕೆ ತಲುಪಿದೆ. ದ್ವೇಷ, ಧ್ರುವೀಕರಣ ಮತ್ತು ಹಿಂಸಾಚಾರವನ್ನು ಬೋಧಿಸುವ ಕೋಮುವಾದಿ ಮತ್ತು ಸಮಾಜ ವಿಭಜಕ ಶಕ್ತಿಗಳು ಈ ಅವನತಿಯು ಮತ್ತಷ್ಟು ಆಳಕ್ಕೆ ಸಾಗಲು ಸಹಾಯ ಮಾಡುತ್ತಿದೆ. ಈ ಬೆಳವಣಿಗೆ ನಮ್ಮ ಇತಿಹಾಸ ಮತ್ತು ಸ್ಮರಣೆ ಮಾತ್ರವಲ್ಲದೆ ನಮ್ಮ ಸಂವಿಧಾನದ ಹೃದಯವಾಗಿರುವ ಬಹುತ್ವ ಮತ್ತು ವೈವಿಧ್ಯತೆಗೆ ಬೆದರಿಕೆಯನ್ನೊಡ್ಡುತ್ತಿವೆ ಎಂದು ಹೇಳಿದ್ದಾರೆ.

ಜಾತಿ, ವರ್ಗ, ಧರ್ಮ, ಲೈಂಗಿಕ ದೃಷ್ಟಿಕೋನ, ಭಾಷೆ, ಜನಾಂಗೀಯತೆ, ಪ್ರದೇಶ ಮತ್ತು ಅಂಗವೈಕಲ್ಯದ ಕುರಿತು ಪಕ್ಷಪಾತಗಳ ಮಾಡುವವವರ ವಿರುದ್ಧ ಹೋರಾಡಲು ಈ ಅಭಿಯಾನವನ್ನು ಆರಂಭಿಸಲಾಗಿದೆ. ಅಭಿಯಾನದ ಅಡಿಯಲ್ಲಿ, ಜನರು ಮತ್ತೊಂದು 'ಸಮುದಾಯ'ದವರ ಮನೆಗೆ ಭೇಟಿ ನೀಡುತ್ತಾರೆ, ಕೆಲವು ಗಂಟೆಗಳ ಕಾಲ ಅವರೊಂದಿಗೆ ಕಳೆಯುತ್ತಾರೆ ಮತ್ತು ಒಂದು ಕಪ್ ನೀರು, ಚಹಾ ಅಥವಾ ಊಟವನ್ನು ಸೇವನೆ ಮಾಡುತ್ತಾರೆ. ಮಾತು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಅಭಿಯಾನವನ್ನು ಪ್ರಚಾರ ಮಾಡುತ್ತಿದ್ದಾರೆಂದು ತಿಳಿಸಿದ್ದಾರೆ.

ಈ ಅಭಿಯಾನವು ಜನವರಿ 30, 2024 ರವರೆಗೆ ಮುಂದುವರಿಯಲಿದೆ. ಗೊರಗುಂಟೆಪಾಳ್ಯ ಮತ್ತು ಕೆಂಗೇರಿಯಲ್ಲಿ ಮುನ್ನಾಡೆ ಸಾಮಾಜಿಕ ಸಂಘಟನೆಯ ನೇತೃತ್ವದಲ್ಲಿ 50 ವಲಸೆ ಕಾರ್ಮಿಕರ ಕುಟುಂಬಗಳು ಮತ್ತು ಸ್ಥಳೀಯ ಕಾರ್ಮಿಕರ ನಡುವೆ ಸಭೆಗಳನ್ನು ನಡೆಸಲಾಗುತ್ತದೆ.

ಆನೇಕಲ್‌ನಲ್ಲಿ ಗಮನ ಮಹಿಳಾ ಸಮೂಹದ ಸದಸ್ಯರು ಬಂಡೇಪಾಳ್ಯ, ಬಿಳೇಕಳ್ಳಿಯಲ್ಲಿನ ಎಲ್ಲಾ ಸಮುದಾಯದ ಜನರು, ಕಾರ್ಮಿಕರೊಂದಿಗೆ ಒಗ್ಗೂಡಿಸುವ ಕೆಲಸ ಮಾಡುತ್ತಾರೆ. ಸ್ತ್ರೀ ಜಾಗೃತಿ ಡೊಮೆಸ್ಟಿಕ್ ವರ್ಕರ್ಸ್ ಯೂನಿಯನ್ ಸದಸ್ಯರು, ದೊಡ್ಡಬಳ್ಳಾಪುರದ ಸೇಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು, ದೊಡ್ಡಬಳ್ಳಾಪುರದಲ್ಲಿ ಐದು ರೈತರೊಂದಿಗೆ ಸಂವಾದಗಳನ್ನು ನಡೆಸುತ್ತಾರೆ. ಅವರಿಂದ ಬರುವ ಮನವಿಗಳನ್ನು ಸ್ವೀಕರಿಸಿ, ಒಗ್ಗಟ್ಟಿನಿಂದ ಇರಲು ಸಹಾಯ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ಕಲ್ಪನೆಯು ಕರ್ನಾಟಕ ಮತ್ತು ಅದರಾಚೆಗೂ ಒಂದು ಟ್ರೆಂಡ್ ಆಗುವ ವಿಶ್ವಾಸವಿದೆ. ಇದು ಸಾಮಾಜಿಕವಾಗಿ ನಿರ್ಮಾಣಗೊಂಡಿರುವ ಅಡೆತಡೆಗಳನ್ನು ಮುರಿಯಲಿದೆ ಎಂಬ ನಂಬಿಕೆ ಇದೆ. ಪರಸ್ಪರ ತಿಳುವಳಿಕೆ ಮತ್ತು ಗೌರವವನ್ನು ಬೆಳೆಸುವ ಮೂಲಕ ಪ್ರೀತಿ ಹಂಚುವುದು ಮತ್ತು ಈ ಸ್ವಾತಂತ್ರ್ಯ ದಿನಾಚರಣೆಯನ್ನು ಹೆಚ್ಚು ಅರ್ಥಪೂರ್ಣವಾಗಿಸುವ ಪ್ರಯತ್ನವಾಗಿದೆ ಇದಾಗಿದೆ ಎಂದು ಹೇಳಿದ್ದಾರೆ.

ಈ ಅಭಿಯಾನವು ಗೌರಿ ಲಂಕೇಶ್, ದಾಭೋಲ್ಕರ್ ದಿನ, ಸಾವಿತ್ರಿ ಬಾಯಿ ಫುಲೆ ಅವರ ಜನ್ಮದಿನ, ಸಂವಿಧಾನ ದಿನ, ಗಾಂಧಿ ಜಯಂತಿ, ಇತರೆ ಹಬ್ಬಗಳು, ಸ್ಮರಣಿಕೆಗಳು ಮತ್ತು ಸಾರ್ವಜನಿಕ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com