ಟೆಲಿಗ್ರಾಂ ಮೂಲಕ ಹನಿಟ್ರ್ಯಾಪ್ ದಂಧೆ ಪ್ರಕರಣ: ಬಾಂಬೆ ಮಾಡೆಲ್ ಬಂಧನ

ಟೆಲಿಗ್ರಾಂ ಮೂಲಕ ಯುವಕರನ್ನ ಬಲೆಗೆ ಬೀಳಿಸಿಕೊಂಡು, ಮತಾಂತರಗೊಳ್ಳುವಂತೆ ಯುವಕರಿಗೆ ಬೆದರಿಕೆ ಹಾಕುತ್ತಿದ್ದ ಹನಿಟ್ರ್ಯಾಪ್ ಸುಂದರಿಯೋರ್ವಳನ್ನು ಪುಟ್ಟೇನಹಳ್ಳಿ ಪೊಲೀಸರು ಕೊನೆಗೂ ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಟೆಲಿಗ್ರಾಂ ಮೂಲಕ ಯುವಕರನ್ನ ಬಲೆಗೆ ಬೀಳಿಸಿಕೊಂಡು, ಮತಾಂತರಗೊಳ್ಳುವಂತೆ ಯುವಕರಿಗೆ ಬೆದರಿಕೆ ಹಾಕುತ್ತಿದ್ದ ಹನಿಟ್ರ್ಯಾಪ್ ಸುಂದರಿಯೋರ್ವಳನ್ನು ಪುಟ್ಟೇನಹಳ್ಳಿ ಪೊಲೀಸರು ಕೊನೆಗೂ ಬಂಧನಕ್ಕೊಳಪಡಿಸಿದ್ದಾರೆ.

ಬಂಧಿತಳನ್ನು ಮುಂಬೈ ಮೂಲದ ರೂಪದರ್ಶಿಯನ್ನು ನೇಹಾ ಅಕೆ ಮೆಹರ್ ಎಂದು ಗುರುತಿಸಲಾಗಿದೆ. ಮಹಿಳೆ ಟೆಲಿಗ್ರಾಂ ಮೂಲಕ 20-50 ವರ್ಷದೊಳಗಿನ ಪುರುಷರು, ಯುವಕರನ್ನು ಸಂಪರ್ಕಿಸುತ್ತಿದ್ದಳು. ನಂತರ ಬಲಹೀನತೆ ಅರಿತು ಮಂಚದ ಆಸೆ ತೋರಿಸುವುದಾಗಿ ಜೆ.ಪಿ. ನಗರದ ಐದನೇ ಹಂತದಲ್ಲಿರುವ ವಿನಾಯಕ್ ನಗರದ ಮನೆಯೊಂದಕ್ಕೆ‌ ಕರೆಯಿಸಿಕೊಳ್ಳುತ್ತಿದ್ದಳು. ಈಕೆ ಹಿಂದೆ ಆರೋಪಿಗಳ ಗ್ಯಾಂಗ್ ಕೆಲಸ ಮಾಡುತಿತ್ತು.

 ಕಳೆದ ಎರಡು ತಿಂಗಳ ಹಿಂದೆ ದೂರುದಾರರನ್ನು ಈ ಗ್ಯಾಂಗ್​ ಮನೆಗೆ ಕರೆಯಿಸಿಕೊಂಡಿತ್ತು. ಮನೆ ಡೋರ್ ಬೆಲ್ ಮಾಡುತ್ತಿದ್ದಂತೆ ಅರೆಬರೆ ಬಟ್ಟೆಯಲ್ಲಿ ಯುವತಿ ಸ್ವಾಗತಿಸುತ್ತಿದ್ದಳು. ಕೆಲ ಕ್ಷಣಗಳ ಬಳಿಕ ಪೂರ್ವ ಸಂಚಿನಂತೆ ಮನೆಗೆ ನುಗ್ಗುತ್ತಿದ್ದ ಗ್ಯಾಂಗ್ ಆತನ ಮೊಬೈಲ್ ಕಸಿದು ಪ್ರಶ್ನಿಸುತ್ತಿದ್ದರು. ಅನ್ಯ ಧರ್ಮದ ಯುವತಿಯಾಗಿದ್ದು, ಆಕೆಯೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ತಪ್ಪು ಎಂದು ಹೇಳುತ್ತಲೇ ಕ್ಷಣಾರ್ಧದಲ್ಲಿ ಮೊಬೈಲ್​ನಲ್ಲಿ ಪೋಟೋ, ವಿಡಿಯೋ ಸೆರೆಹಿಡಿಯುತ್ತಿದ್ದರು.

ಬಳಿಕ ಮೊಬೈಲ್​ನ ಕಾಂಟಾಕ್ಟ್ ಲಿಸ್ಟ್ ಪಟ್ಟಿ ಮಾಡಿಕೊಂಡು, ಕೇಳಿದಷ್ಟು ಹಣ ಕೊಡದಿದ್ದರೆ, ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದಿದ್ದರೆ ಕುಟುಂಬಸ್ಥರಿಗೆ ಕಳುಹಿಸಿ ಮಾನ ಮಾರ್ಯಾದೆ ಹರಾಜು ಮಾಡಲಾಗುವುದು ಎಂದು ಬೆದರಿಕೆ ಹಾಕುತ್ತಿದ್ದರು. ಆಕೆಯೊಂದಿಗೆ ಸಂಪ್ರದಾಯದಂತೆ ಮದುವೆಯಾಗಬೇಕು ಎಂದು ಧಮಕಿ ಹಾಕುತ್ತಿದ್ದರು. ಮಾರ್ಯಾದೆಗೆ ಅಂಜಿ ನೊಂದ ಯುವಕರು ಆರೋಪಿತರ ಬ್ಯಾಂಕ್ ಅಕೌಂಟ್​ಗೆ‌ ದುಡ್ಡು ಹಾಕಿದ್ದರು.‌ ಹಣ‌ ಜಮಾ ಆಗುತ್ತಿದ್ದಂತೆ ಗ್ಯಾಂಗ್ ಎಸ್ಕೇಪ್ ಆಗುತ್ತಿತ್ತು. ಆರೋಪಿಗಳು 12 ಮಂದಿಯನ್ನು ಸುಲಿಗೆ ಮಾಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಯುವಕನೋರ್ವ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಈ ಹಿಂದೆ ಬಂಧನಕ್ಕೊಶಪಡಿಸಿತ್ತು. ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್ ಹಾಗೂ ಯಾಸೀನ್ ಎಂಬುವವರನ್ನು ಪೊಲೀಸರು ಈ ಹಿಂದೆ ಬಂಧಿಸಿದ್ದರು. ಇದೀಗ ರೂಪದರ್ಶಿಯನ್ನೂ ಬಂಧನಕ್ಕೊಳಪಡಿಸುವಲ್ಲಿ ಯಶಸ್ವಿಯಾಗಿದೆ. ಮತ್ತೋರ್ವ ಆರೋಪಿ ನದೀಮ್‌ಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com