ಬೆಂಗಳೂರು: ವೃದ್ಧೆಗೆ 3.5 ಕೋಟಿ ರೂಪಾಯಿ ವಂಚಿಸಿದ ನಾಲ್ವರ ಬಂಧನ

ವೃದ್ಧೆಗೆ 3.5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಬ್ಯಾಂಕ್ ಮಾಜಿ ಉದ್ಯೋಗಿ ಸೇರಿದಂತೆ ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವೃದ್ಧೆಗೆ 3.5 ಕೋಟಿ ರೂಪಾಯಿ ವಂಚಿಸಿದ ಆರೋಪದ ಮೇಲೆ ಬ್ಯಾಂಕ್ ಮಾಜಿ ಉದ್ಯೋಗಿ ಸೇರಿದಂತೆ ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗಳನ್ನು ಬ್ಯಾಂಕ್ ಮಾಜಿ ಉದ್ಯೋಗಿ ಅಪೂರ್ವ ಯಾದವ್, ಆಕೆಯ ತಾಯಿ ವಿಶಾಲಾ, ಅರುಂದತಿ, ಯಾದವ್ ಅವರ ಸ್ನೇಹಿತೆ ಮತ್ತು ವಿಮಾ ಸಂಸ್ಥೆಯ ಉದ್ಯೋಗಿ ಮತ್ತು ಆಕೆಯ ಪತಿ ರಾಕೇಶ್ ಎಂದು ಪೊಲೀಸರು ಗುರುತಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ಅರುಂದತಿ ಮತ್ತು ರಾಕೇಶ್ 63 ವರ್ಷದ ಶಾಂತಾ ಎಂಬುವರನ್ನು 2021ರಲ್ಲಿ ವಿಮಾ ದಲ್ಲಾಳಿಗಳಾಗಿ ಸಂಪರ್ಕಿಸಿದರು. ಶಾಂತಾ ಜೊತೆ ಸ್ನೇಹ ಬೆಳೆಸಿದ ನಂತರ, ಆಕೆಯ ಮನೆಯಲ್ಲಿ ವಾಸ್ತು ಸಮಸ್ಯೆ ಇದೆ ಎಂದು ಹೇಳಿ ಬ್ರೋಕರ್ ಮೂಲಕ ಮಾರಾಟ ಮಾಡುವಂತೆ ಒತ್ತಾಯಿಸಿದರು. ಒಮ್ಮೆ ಮಾರಾಟದ ಹಣವನ್ನು ಶಾಂತಾ ಖಾತೆಗೆ ಜಮಾ ಮಾಡಿದ ನಂತರ, ಇಬ್ಬರು ಶಂಕಿತರು ಶಾಂತಾಗೆ 1.9 ಕೋಟಿ ಮೌಲ್ಯದ ಎರಡು ಫಿಕ್ಸೆಡ್ ಡೆಪಾಸಿಟ್‌ ಮಾಡಿಸಿದರು. ಇಬ್ಬರೂ ಸಂತ್ರಸ್ತೆಯಿಂದ 5-6 ಚೆಕ್‌ಗಳು ಮತ್ತು ಕೆಲವು ಖಾಲಿ ನಮೂನೆಗಳಿಗೆ ಸಹಿ ಮಾಡಿಸಿಕೊಂಡಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

2023ರ ಮೇ 16 ಮತ್ತು 2023ರ ಜೂನ್ 23ರ ನಡುವೆ ಸಂತ್ರಸ್ತೆ ಶಾಂತಾರ ಖಾತೆಯಿಂದ ಇತರ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ರೂ 3.5 ಕೋಟಿಯನ್ನು ವರ್ಗಾಯಿಸಲು ಸಹಿ ಮಾಡಿದ ಚೆಕ್‌ಗಳನ್ನು ಬಳಸಿದ್ದಾನೆ ಎಂದು ಎಫ್‌ಐಆರ್ ನಲ್ಲಿ ದಾಖಲಾಗಿದೆ. ನಾಲ್ವರು ಶಂಕಿತರನ್ನು ಬಂಧಿಸಿದ ನಂತರ, ಆರೋಪದ ಬಗ್ಗೆ ತನಿಖೆ ನಡೆಸಿದ ಬನಶಂಕರಿ ಪೊಲೀಸರು 1.75 ಕೋಟಿ ರೂಪಾಯಿ ಪ್ರಕರಣದ ಇತರ ಆರೋಪಿಗಳಾದ ಸಂಜೀವಪ್ಪ, ಪರಿಮಳ ಮತ್ತು ಇತರರ ಪತ್ತೆಗೆ ತನಿಖೆ ನಡೆಯುತ್ತಿದೆ.

ಶಂಕಿತರ ವಿರುದ್ಧ ಐಪಿಸಿ ಸೆಕ್ಷನ್ 406, 417, 420 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com