ನಗರದಲ್ಲಿ ಮತ್ತೆ ಸರಗಳ್ಳರ ಹಾವಳಿ: ಮಹಿಳೆಯನ್ನು ತಳ್ಳಿದ ದುಷ್ಕರ್ಮಿಗಳು; ಆಸ್ಪತ್ರೆಗೆ ದಾಖಲು!

ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಶುರುವಾಗಿದೆ. ಮೊಮ್ಮಗಳ ಜೊತೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬರ ಸರ ಕದಿಯಲು ದುಷ್ಕರ್ಮಿಗಳು ದಾಳಿ ನಡೆಸಿದ ಪರಿಣಾಮ ಮಹಿಳೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಮಮೂರ್ತಿನಗರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಶುರುವಾಗಿದೆ. ಮೊಮ್ಮಗಳ ಜೊತೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬರ ಸರ ಕದಿಯಲು ದುಷ್ಕರ್ಮಿಗಳು ದಾಳಿ ನಡೆಸಿದ ಪರಿಣಾಮ ಮಹಿಳೆ ಆಸ್ಪತ್ರೆಗೆ ದಾಖಲಾಗಿರುವ ಘಟನೆ ರಾಮಮೂರ್ತಿನಗರ ನಡೆದಿದೆ.

ಕಲ್ಕೆರೆಯ ಎನ್‌ಆರ್‌ಐ ಲೇಔಟ್‌ನ 5ನೇ ಮೇನ್‌ನ ನಿವಾಸಿ ರೀಮಾ ಪರಮೇಶ್ವರನ್ ಕೆಲವು ದಿನಗಳ ಹಿಂದೆ ರಾತ್ರಿ 8.30ರಿಂದ 8.45ರ ನಡುವೆ ಮೊಮ್ಮಗಳನ್ನು ಡ್ಯಾನ್ಸ್ ಕ್ಲಾಸ್ ನಿಂದ ಕರೆತರುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ದುಷ್ಕರ್ಮಿಗಳು ಚಿನ್ನದ ಸರವನ್ನು ಎಳೆಯಲು ಯತ್ನಿಸಿದ್ದಾರೆ.

ಈ ವೇಳೆ ರೀಮಾ ಅವರು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಆರೋಪಿಗಳು ಮಹಿಳೆಯನ್ನು ರಸ್ತೆಗೆ ತಳ್ಳಿದ್ದಾರೆ. ಬಳಿಕ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ದುಷ್ಕರ್ಮಗಳು ತಳ್ಳಿದ ಪರಿಣಾಮ ಮಹಿಳೆ ಕೆಳಗೆ ಬಿದ್ದಿದ್ದು, ತಲೆಗೆ ತೀವ್ರತರ ಪೆಟ್ಟಾಗಿದೆ. ಈ ವೇಳೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಕೂಡಲೇ ಅಜ್ಜಿಯ ಜೊತೆಗಿದ್ದ ಪುಟ್ಟ ಬಾಲಕಿ ಮನೆಗೆ ಓಡಿ ಹೋಗಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ರೀಮಾ ಅವರ ಪುತ್ರ, ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೊದಲಿಗೆ ರೀಮಾ ಅವರನ್ನು ಸಮೀಪದ ಟಿಸಿ ಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೈಟ್‌ಫೀಲ್ಡ್‌ನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಜೀವಕ್ಕೆ ಯಾವುದೇ ಅಪಾಯವಿಲ್ಲ, ಚಿಕಿತ್ಸೆ ಮುಂದುವರೆದಿದೆ ಎಂದು ರೀಮಾಮ ಅವರ ಪುತ್ರಿ ಶೃತಿ ಅವರು ಹೇಳಿದ್ದಾರೆ.

“ನನ್ನ ತಾಯಿ ಚೇತರಿಸಿಕೊಳ್ಳುತ್ತಿದ್ದಾರೆ. ಆರೋಪಿಗಳು ದರೋಡೆಗೆ ಯತ್ನಿಸಿದಾಗ ನನ್ನ ಮಗಳು ಜೊತೆಗಿದ್ದಳು. ಅದೃಷ್ಟವಶಾತ್ ಆಕೆಗೆ ಯಾವುದೇ ಪ್ರಾಣಾಪಾಯಕಾರಿ ಗಾಯಗಳಾಗಿಲ್ಲ. ಆರೋಪಿಗಳ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ತಿಳಿಸಿದ್ದಾರೆ.

"ಇದು ವೈದ್ಯಕೀಯ-ಕಾನೂನು ಪ್ರಕರಣವಾದ್ದರಿಂದ, ಆಸ್ಪತ್ರೆಯ ಆಡಳಿತ ಮಂಡಳಿ ನಮಗೆ ಮಾಹಿತಿ ನೀಡಿದೆ.  ಸ್ಥಳಕ್ಕೆ ಭೇಟಿ ನೀಡಿದ್ದೇವೆ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ಅಪರಿಚಿತ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 394 ರ ಅಡಿಯಲ್ಲಿ ದರೋಡೆ, ನೋವುಂಟು ಮಾಡಿದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಮಮೂರ್ತಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com