ಕಿಂಗ್ ಫಿಷರ್ ಬಿಯರ್ ನಲ್ಲಿ ಅಪಾಯಕಾರಿ ಅಂಶ ಪ್ರಕರಣ: 'ಕೇವಲ ಒಂದು ಬ್ಯಾಚ್‌ನ ಬಾಟಲ್ ಗಳಲ್ಲಿ ಮಾತ್ರ' ಎಂದ ಸಂಸ್ಥೆ

ಕಿಂಗ್ ಫಿಷರ್ ಬಿಯರ್‌ ಬಾಟಲ್ ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅದರ ತಯಾರಿಕಾ ಸಂಸ್ಥೆ ಯುನೈಟೆಡ್ ಬ್ರೂವರ್ಸ್ ಲಿಮಿಟೆಡ್ 'ಕೇವಲ ಒಂದು ಬ್ಯಾಚ್‌ನಲ್ಲಿ ಬಾಟಲ್ ಗಳಲ್ಲಿ ಮಾತ್ರ ಪತ್ತೆಯಾಗಿದೆ ಎಂದು ಹೇಳಿದೆ.
ಬಿಯರ್ ಸಾಂದರ್ಭಿಕ ಚಿತ್ರ
ಬಿಯರ್ ಸಾಂದರ್ಭಿಕ ಚಿತ್ರ

ಬೆಂಗಳೂರು: ಕಿಂಗ್ ಫಿಷರ್ ಬಿಯರ್‌ ಬಾಟಲ್ ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಅದರ ತಯಾರಿಕಾ ಸಂಸ್ಥೆ ಯುನೈಟೆಡ್ ಬ್ರೂವರ್ಸ್ ಲಿಮಿಟೆಡ್ 'ಕೇವಲ ಒಂದು ಬ್ಯಾಚ್‌ನಲ್ಲಿ ಬಾಟಲ್ ಗಳಲ್ಲಿ ಮಾತ್ರ ಪತ್ತೆಯಾಗಿದೆ ಎಂದು ಹೇಳಿದೆ.

ಬುಧವಾರ ಅಬಕಾರಿ ಅಧಿಕಾರಿಗಳು ಎರಡು ಬ್ರಾಂಡ್‌ಗಳ ಕಿಂಗ್‌ಫಿಶರ್ ಬಿಯರ್‌ನಲ್ಲಿ ಕೆಸರು ಮತ್ತು ಕಣಗಳು ಪತ್ತೆಯಾದ ಸುದ್ದಿಯ ನಂತರ, ಯುನೈಟೆಡ್ ಬ್ರೂವರ್ಸ್ ಲಿಮಿಟೆಡ್ (ಯುಬಿಎಲ್) ಅಧಿಕಾರಿಗಳು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.ಇದೇ ವಿಚಾರವಾಗಿ UBL ಗುರುವಾರ ಬಿಡುಗಡೆ ಮಾಡಿದ ಅಧಿಕೃತ ಪ್ರಕಟಣೆಯಲ್ಲಿ, “ಯುಬಿಎಲ್ ನಮ್ಮ ಮೈಸೂರಿನ ನಂಜನಗೂಡು ಬ್ರೂವರಿ ಘಟಕದಲ್ಲಿ ಜುಲೈ 15 ರಂದು ತಯಾರಿಸಿದ ಕಿಂಗ್‌ಫಿಷರ್ ಅಲ್ಟ್ರಾ ಬಿಯರ್ ಬಾಟಲಿಗಳ ಸಣ್ಣ ಪ್ರಮಾಣದ ಬಾಟಲ್ ಗಳಲ್ಲಿ ಕೆಸರಿನ ಅಥವಾ ಗಸಿಯ ಅಂಶ ಗುರುತಿಸಿದೆ. ನಾವು ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಮತ್ತು ಅಧಿಕಾರಿಗಳ ತನಿಖೆಗೆ ಸಕ್ರಿಯವಾಗಿ ಸಹಕರಿಸುತ್ತಿದ್ದೇವೆ ಎಂದು ಹೇಳಿದೆ.

ಇದು ಕಿಂಗ್‌ಫಿಷರ್ ಅಲ್ಟ್ರಾದ ಒಂದೇ ಬ್ಯಾಚ್‌ನಲ್ಲಿನ ಪ್ರತ್ಯೇಕ ಘಟನೆಯಾಗಿದೆ ಮತ್ತು ಕಿಂಗ್‌ಫಿಶರ್ ಸ್ಟ್ರಾಂಗ್ ಅಲ್ಲ. ಪರೀಕ್ಷಾ ಪ್ಯಾರಾಮೀಟರ್‌ಗಳು ನಿಯಂತ್ರಕ ಮಾರ್ಗಸೂಚಿಗಳಲ್ಲಿವೆ ಮತ್ತು ಆದ್ದರಿಂದ ಯಾವುದೇ ಆರೋಗ್ಯದ ಅಪಾಯಗಳನ್ನು ಉಂಟುಮಾಡುವುದಿಲ್ಲ ಎಂದು ದೃಢಪಡಿಸಿದ ಪರಿಣಾಮ ಕಿಂಗ್‌ಫಿಷರ್ ಅಲ್ಟ್ರಾ ಬ್ಯಾಚ್‌ನ ಬಾಹ್ಯ ಸ್ವತಂತ್ರ ಪ್ರಯೋಗಾಲಯದ (NABL ಮಾನ್ಯತೆ ಪಡೆದ) ವಿಶ್ಲೇಷಣೆಯನ್ನು ಅವರು ನಡೆಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು ನಾವು ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ" ಎಂದು ಯುಬಿಎಲ್ ವಕ್ತಾರರು ಹೇಳಿದರು.

ಏನಿದು ಪ್ರಕರಣ?
ಕಿಂಗ್ ಫಿಷರ್ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿತ್ತು. ಈ ಹಿನ್ನೆಲೆ 25 ಕೋಟಿ ರೂ. ಮೌಲ್ಯದ ಕಿಂಗ್ ಫಿಷರ್ ಬಿಯರ್ ಅನ್ನು ಮೈಸೂರಿನ ಅಬಕಾರಿ ಇಲಾಖೆ ಜಪ್ತಿ ಮಾಡಿತ್ತು ಎಂದು ವರದಿಯಾಗಿದೆ. ಜುಲೈ 15ರಂದು ಬಾಟಲಿಂಗ್ ಆದ ಬಿಯರ್‌ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿರುವುದು ದೃಢವಾಗಿದ್ದು, ಬಿಯರ್‌ನಲ್ಲಿರುವ ಸೆಡಿಮೆಂಟ್ ಅಂಶ ದೇಹಕ್ಕೆ ಅಪಾಯಕಾರಿ ಎಂಬುದು ಲ್ಯಾಬ್‌ನಲ್ಲಿ ದೃಢವಾಗಿದೆ. ವಿವಿಧ ಕೆಎಸ್‌ಬಿಸಿಎಲ್ ಹಾಗೂ ಆರ್‌ವಿಬಿ ಸನ್ನದುದಾರರಿಗೆ ಈ ಬಿಯರ್ ಅನ್ನು ಸಾಗಣೆ ಮಾಡಲಾಗಿದೆ. ಈ ಮದ್ಯವನ್ನು ಅಂಗಡಿಗಳಿಗೆ ವಿತರಣೆ ಮಾಡದಂತೆ ಸೂಚನೆ ನೀಡಲಾಗಿದ್ದು, ಬಿಯರ್ ವಿತರಣೆ ಮಾಡದಂತೆ ಸುತ್ತೋಲೆ ಹೊರಡಿಸಲಾಗಿದೆ.

ಒಟ್ಟು 78,678 ಬಾಕ್ಸ್ ಬಿಯರ್ ಅನ್ನು ಜಪ್ತಿ ಮಾಡಲಾಗಿದ್ದು, ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೆಲ ಡಿಪೋದಿಂದ ಅಂಗಡಿಗಳಿಗೂ ಇದು ವಿತರಣೆಯಾಗಿತ್ತು. ರಿಟೇಲ್‌ನಲ್ಲಿ ಮಾರಾಟವಾಗದಂತೆ ಆಗದಂತೆ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com