ಬೆಂಗಳೂರಿನಲ್ಲಿ ರೋಡ್ ರೇಜ್ ಘಟನೆಗಳಿಗೆ ಶೂನ್ಯ ಸಹಿಷ್ಣುತೆ ಇದೆ: ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

ರಾಜಧಾನಿ ಬೆಂಗಳೂರು ಜನರೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ನೆಟ್ಟಿಗರೊಂದಿಗೆ ಸಂವಾದ ನಡೆಸಿದರು. ಪೊಲೀಸ್ ಆಯುಕ್ತರ ಈ ಟ್ವೀಟ್ ಸಂವಾದಕ್ಕೆ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾದವು.
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್
ನಗರ ಪೊಲೀಸ್ ಆಯುಕ್ತ ಬಿ ದಯಾನಂದ್

ಬೆಂಗಳೂರು: ರಾಜಧಾನಿ ಬೆಂಗಳೂರು ಜನರೊಂದಿಗೆ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಬಿ ದಯಾನಂದ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ನೆಟ್ಟಿಗರೊಂದಿಗೆ ಸಂವಾದ ನಡೆಸಿದರು. ಪೊಲೀಸ್ ಆಯುಕ್ತರ ಈ ಟ್ವೀಟ್ ಸಂವಾದಕ್ಕೆ ವ್ಯಾಪಕ ಮೆಚ್ಚುಗೆಗಳು ವ್ಯಕ್ತವಾದವು.

ಸಂವಾದದ ವೇಳೆ ಬೆಂಗಳೂರು ನಗರದ ಕಾನೂನು ಸುವ್ಯವಸ್ಥೆ, ಅಪರಾಧ, ಸಂಚಾರ, ಆಡಳಿತ, ರಸ್ತೆಗಳ ಸಮಸ್ಯೆ, ವಾಹನಗಳ ಸಂಚಾರ, ತಂತ್ರಜ್ಞಾನ ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು.

#AMWITHBCP ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಜನರು ನಗರ ಪೊಲೀಸ್‌ ಆಯುಕ್ತರಿಗೆ ಪ್ರಶ್ನೆಗಳನ್ನು ಕೇಳಿದ್ದು, ಹಲವು ಪ್ರಶ್ನೆಗಳಿಗೆ ಸ್ವತಃ ಬಿ ದಯಾನಂದ್‌ ಉತ್ತರ ನೀಡಿದರು. ಶನಿವಾರ ಮಧ್ಯಾಹ್ನ 12 ಗಂಟೆಯಿಂದ ಒಂದು ಗಂಟೆಯವರೆಗೆ ಸಂವಾದ ನಡೆಯಿತು. ಈ ವೇಳೆ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಿ ಆಯುಕ್ತರು ನಗರದ ಜನತೆಯ ಗಮನ ಸೆಳೆದರು.

ಸಂವಾದದವ ವೇಳೆ ನಗರದಲ್ಲಿ ರೋಡ್‌ ರೇಜ್‌ ಘಟನೆಗಳು ಹೆಚ್ಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು, ಬೆಂಗಳೂರು: ರೋಡ್‌ ರೇಜ್‌ ಘಟನೆಗಳನ್ನು ನಾವು ಅತ್ಯಂತ ಕಠಿಣವಾಗಿ ವ್ಯವಹರಿಸಲಾಗುತ್ತಿದೆ. ಪ್ರಸ್ತುತ ಬೆಂಗಳೂರು ನಗರದಲ್ಲಿ ರೋಡ್ ರೇಜ್ ಘಟನೆಗಳಿಗೆ ಶೂನ್ಯ ಸಹಿಷ್ಣುತೆ ಇದೆ ಎಂದು ಹೇಳಿದರು.

ಇಂತಹ ಘಟನೆಗಳು ವರದಿಯಾದಲ್ಲೆಲ್ಲಾ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಅಲ್ಲದೇ, ಅಂತಹ ಪುಂಡ ಪೋಕರಿಗಳ ಮೇಲೆ ನಿಗಾ ಇಡಲು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟ್ ತೆರೆಯಲಾಗುತ್ತಿದೆ. ಬೆಂಗಳೂರು ನಗರದಲ್ಲಿ ರೋಡ್ ರೇಜ್ ಘಟನೆಗಳಿಗೆ ಶೂನ್ಯ ಸಹಿಷ್ಣುತೆ ಇದೆ. ನಾಗರಿಕರು ಅಂತಹ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೆ #Namma112ಗೆ ಡಯಲ್ ಮಾಡಿ. ನಾವು ತಕ್ಷಣ ಸ್ಪಂದಿಸುತ್ತೇವೆಂದು ತಿಳಿಸಿದರು.

112 ಕರೆಗಳಿಗೆ ಉತ್ತರಿಸದಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ನಮ್ಮ112 ಬೆಂಗಳೂರು ನಗರ ಪೊಲೀಸರ ಗಸ್ತು ವ್ಯವಸ್ಥೆ ದೃಢವಾಗಿದೆ. ಈ ವ್ಯವಸ್ಥೆ 24*7 ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪೊಲೀಸ್ ಠಾಣೆಗಳು ತಮ್ಮ ವ್ಯಾಪ್ತಿಯಲ್ಲಿರುವ ಪುಂಡ ಪೋಕರಿಗಳ ಮೇಲೆ ನಿಗಾ ಇಡಲು ರೌಡಿ ಶೀಟ್ ಗಳ ನಿರ್ವಹಿಸುವಂತೆ ಸೂಚಿಸಲಾಗಿದೆ. ನೈತಿಕ ಪೊಲೀಸ್‌ಗಿರಿಗೆ ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ. ನಿಮ್ಮ ಗಮನಕ್ಕೆ ಇಂತಹ ಘಟನೆಗಳು ಬಂದರೆ ದಯವಿಟ್ಟು ಪೊಲೀಸರಿಗೆ ತಿಳಿಸಿ.ಕ್ರಮ ತೆಗೆದುಕೊಳ್ಳುತ್ತೇವೆ. ತುರ್ತುತ ಸಂದರ್ಭದಲ್ಲಿ ಹತ್ತಿರ ಪೊಲೀಸ್ ಠಾಣೆಗೆ ತೆರಳಿ ಎಂದು ಸಲಹೆ ನೀಡಿದರು.

ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಹಾಯಕ್ಕಾಗಿ ಮಹಿಳಾ ಸಹಾಯ ವಾಣಿ ಎಂಬ ಎನ್‌ಜಿಒ ಅನ್ನು ಸಂಪರ್ಕಿಸಬೇಕು. ಅಂತಹ ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡಲು ಸಾಕಷ್ಟು ಮಹಿಳಾ ಸಿಬ್ಬಂದಿಯ ಲಭ್ಯವಿದೆ ಎಂದರು.

ಪಾದಚಾರಿ ಮಾರ್ಗ ಅತಿಕ್ರಮಣ ವಿಚಾರವಾಗಿ ಮಾತನಾಡಿ, ಅತಿಕ್ರಮಣಗಳ ತೆರವುಗೊಳಿಸಲು ನಾಗರೀಕ ಸಂಸ್ಥೆಗಳೊಂದಿಗೆ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಸಾರ್ವಜನಿಕರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಶಾಶ್ವತ ಪರಿಹಾರವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com