ಬೆಂಗಳೂರು: ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ

ಪರಿಸರಕ್ಕೆ ಹಾನಿಯಾಗುವ ಕಾರಣದಿಂದಾಗಿ ನಿಷೇಧ ಹೇರಲಾಗಿದ್ದ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಪಿಒಪಿ ಗಣೇಶ ಮೂರ್ತಿಗಳೊಂದಿಗೆ ಪ್ರತಿಭಟನಾಕಾರರು
ಪಿಒಪಿ ಗಣೇಶ ಮೂರ್ತಿಗಳೊಂದಿಗೆ ಪ್ರತಿಭಟನಾಕಾರರು

ಬೆಂಗಳೂರು: ಪರಿಸರಕ್ಕೆ ಹಾನಿಯಾಗುವ ಕಾರಣದಿಂದಾಗಿ ನಿಷೇಧ ಹೇರಲಾಗಿದ್ದ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗಿದೆ.

ಗಣೇಶ ಚತುರ್ಥಿ (Ganesha Chaturthi) ಹಬ್ಬಕ್ಕೆ 28 ದಿವಸಗಳಷ್ಟೇ ಬಾಕಿ ಇರುವಾಗಲೇ ಗಣಪನ ವಿಗ್ರಹಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಒಂದಷ್ಟು ಮಂದಿ ಪರಿಸರ ಸ್ನೇಹಿ ವಿಗ್ರಹಕ್ಕಾಗಿ ಮೊರೆ ಹೋಗುತ್ತಿದ್ದು, ಮತ್ತಷ್ಟು ಮಂದಿ ಅಗ್ಗವಾಗಿ ದೊರೆಯುವ ಸುಲಭವಾಗಿ ಸಾಗಿಸಬಲ್ಲ, ಕೆಮಿಕಲ್ ಯುಕ್ತ ಬಣ್ಣಗಳಿಂದ ಕೂಡಿರುವ ಪಿಒಪಿ ಗಣೇಶನ ವಿಗ್ರಹಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಪಿಒಪಿ ಗಣೇಶ ವಿಗ್ರಹಗಳ (POP Ganesha Idol) ಮಾರಾಟಕ್ಕೆ ನಿಷೇಧ ಹೇರಿದ ಹಿನ್ನೆಲೆ ಆಕ್ರೋಶಗೊಂಡಿರುವ ಗ್ರಾಹಕರು ನಗರದ ಕುಂಬಳಗೋಡಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಕುಂಬಳಗೊಡಿನಲ್ಲಿ ಗಣೇಶ ತಯಾರಿಕಾ ಗೋಡೌನ್ ಇದ್ದು ಇಲ್ಲಿ ಈ ಹಿಂದೆ ಪರಿಸರಕ್ಕೆ ಮಾರಕವಾಗುವ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದ ಆರೋಪದ ಮೇರೆದೆ ಖಾಸಗಿ ವಾಹಿನಿಯೊಂದು ಕುಟುಕು ಕಾರ್ಯಾಚರಣೆ ನಡೆಸಿ ವಿಚಾರ ಬಯಳಿಗೆಳೆದಿತ್ತು. ಈ ಬೆಳವಣಿಗೆ ಬಳಿಕ ಎಚ್ಚೆತ್ತುಕೊಂಡಿದ್ದ ಅಧಿಕಾರಿಗಳು ಗೋಡೌನ್ ಗೆ ಬೀಗ ಜಡಿದಿದ್ದರು. ಇದೀಗ ಸ್ಥಳೀಯರು ಮತ್ತು ಗೋಡೌನ್ ಮಾಲೀಕರು ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. 

ಪಿಒಪಿ ಗಣೇಶ ವಿಗ್ರಹಗಳನ್ನು ಮರಾಟ ಮಾಡಬಾರದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯು ನಿನ್ನೆಯೇ ಕುಂಬಳಗೋಡಿನ ಗಣಪತಿ ಗೋಡೌನ್ ಮುಚ್ಚಿಸಿದ್ದರು. ಇದರಿಂದ ಆಕ್ರೋಶಗೊಂಡ ಗ್ರಾಹಕರು, ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಗೋಡೌನ್ ಮುಂದೆ ಪ್ರತಿಭಟನೆ ನಡೆಸಿದರು.

ಮಹಾರಾಷ್ಟ್ರದ ಬಾಂಬೆಯಲ್ಲಿ ಪಿಒಪಿ ಗಣೇಶ ವಿಗ್ರಹಗಳನ್ನು ಮಾರಲು ಅವಕಾಶ ನೀಡಲಾಗಿದೆ. ಅಲ್ಲಿಂದಲೇ 25 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಬರುತ್ತಿವೆ. ಈ ವಿಗ್ರಹಗಳು ಒಂದು ವಾರದಲ್ಲಿ ಬೆಂಗಳೂರಿಗೆ ಬರುತ್ತವೆ. ಅವುಗಳನ್ನ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಡೆಯಲು ಆಗುತ್ತಾ? ಒಂದು ವೇಳೆ ಆ ವಿಗ್ರಹಗಳನ್ನು ತಡೆಯಲು ಅವಕಾಶ ನೀಡದಿದ್ದರೆ ನಾವು ಕೂಡ ಬಾಂಬೆಯಿಂದಲೇ ಮೂರ್ತಿಗಳನ್ನು ತರುತ್ತೇವೆ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com