ಬೆಂಗಳೂರು: ವಿದ್ಯಾರ್ಥಿನಿ ಮೇಲೆ ಬಿದ್ದ ವಿದ್ಯುತ್ ತಂತಿ, ಸ್ಥಿತಿ ಗಂಭೀರ

ಲೈವ್ ವಿದ್ಯುತ್ ತಂತಿ ಬಿದ್ದು, ವಿದ್ಯಾರ್ಥಿನಿಯೋರ್ವಳಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿರುವ ಘಟನೆಯೊಂದು ವೆಂಕಟೇಶ್ವರ ಲೇಔಟ್‌ನಲ್ಲಿ ಮಂಗಳವಾರ ನಡೆದಿದೆ.
ಗಾಯಗೊಂಡಿರುವ ವಿದ್ಯಾರ್ಥಿನಿ.
ಗಾಯಗೊಂಡಿರುವ ವಿದ್ಯಾರ್ಥಿನಿ.

ಬೆಂಗಳೂರು: ಲೈವ್ ವಿದ್ಯುತ್ ತಂತಿ ಬಿದ್ದು, ವಿದ್ಯಾರ್ಥಿನಿಯೋರ್ವಳಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿರುವ ಘಟನೆಯೊಂದು ವೆಂಕಟೇಶ್ವರ ಲೇಔಟ್‌ನಲ್ಲಿ ಮಂಗಳವಾರ ನಡೆದಿದೆ.

ಕ್ರೈಸ್ಟ್‌ ವಿಶ್ವವಿದ್ಯಾಲಯದಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿರುವ ದೆಹಲಿ ಮೂಲದ ಪ್ರಿಯಾ ಗಾರ್ಗ್ (21) ಗಾಯಗೊಂಡಿರುವ ವಿದ್ಯಾರ್ಥಿನಿಯಾಗಿದ್ದಾರೆ.

ವೆಂಕಟೇಶ್ವರ ಲೇಔಟ್‌ನಲ್ಲಿರುವ ವಸತಿಗೃಹದಲ್ಲಿ ವಿದ್ಯಾರ್ಥಿನಿ ವಾಸವಿದ್ದಳು. ಕಾಲೇಜಿಗೆ ತೆರಳಿದ್ದ ವಿದ್ಯಾರ್ಥಿನಿ ಊಟದ ವಿರಾಮದ ವೇಳೆ ಸ್ನೇಹಿತರೊಂದಿಗೆ ಪಿಜಿಗೆ ತೆರಳುತ್ತಿದ್ದಳು. ಈ ವೇಳೆ ವಿದ್ಯುತ್ ತಂತಿ ತುಂಡಾಗಿ ಆಕೆಯ ಮೇಲೆ ಬಿದ್ದಿದೆ. ಇದೇ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರ್ ಮೇಲೆಯೂ ವಿದ್ಯುತ್ ಕಂಬ ಬಿದ್ದಿದೆ.

ರಸ್ತೆಯಲ್ಲಿ ನೀರಿನ ಟ್ಯಾಂಕರ್ ಸಾಗಿದ್ದು, ಈ ಟ್ಯಾಂಕರ್ ವಿದ್ಯುತ್ ಕಂಬದ ಆಪ್ಟಿಕಲ್ ಫೈಬಲ್ ಕೇಬಲ್ ನ್ನು ಎಳೆದ ಪರಿಣಾಮ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಟ್ಯಾಂಕರ್'ಗೆ ತಂತಿ ಸಿಕ್ಕಿಕೊಂಡಿದೆ ಎಂಬುದನ್ನು ಅರಿಯದ ಚಾಲಕ ಕಂಬವನ್ನು ಎಳೆದುಕೊಂಡೇ ಮುಂದೆ ಸಾಗಿದ್ದಾನೆ. ಈ ವೇಳ ತುಂಡಾದ ವಿದ್ಯುತ್ ತಂತಿ ವಿದ್ಯಾರ್ಥಿನಿಗೆ ತಾಕಿದೆ. ಕೂಡಲೇ ಆಕೆಯನ್ನು ಸ್ಥಲೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸಂಜೆ 4.30ರ ಸುಮಾರಿಗೆ ಕೋರಮಂಗಲದ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಯುವತಿಗೆ ಶೇ.35ರಷ್ಟು ಸುಟ್ಟ ಗಾಯಗಳಾಗಿದೆ ಎಂದು ಸೇಂಟ್ ಜಾನ್ಸ್‌ನ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಅರವಿಂದ್ ಕಸ್ತೂರಿ ಅವರು ಹೇಳಿದ್ದಾರೆ.

ವಿದ್ಯಾರ್ಥಿನಿಗೆ ದೀರ್ಘಕಾಲಿಕ ರೋಗಗಳಾವುದೂ ಇಲ್ಲ. ರಕ್ತದೊತ್ತಡ ಸಾಮಾನ್ಯವಾಗಿದೆ. ಐಸಿಯುವಿನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮುಂದನ 48 ಗಂಟೆಗಳ ಕಾಲ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ.

ಬೆಸ್ಕಾಂ ಎಂಡಿ ಮಹಾಂತೇಶ ಬಿಳಗಿ ಮಾತನಾಡಿ, ಎಲ್ಲಾ ಒಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನು ಬೆಸ್ಕಾಂ ಆರಂಭಿಸಿದೆ ಎಂದು ಹೇಳಿದ್ದಾರೆ.

ಇಂಧನ ಸಚಿವ ಕೆಜೆ ಜಾರ್ಜ್ ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರ ನಿರ್ದೇಶನದ ಮೇರೆಗೆ, ಎಲ್ಲಾ OFC ಕೇಬಲ್ ಆಪರೇಟರ್‌ಗಳಿಗೆ ಒಂದು ವಾರದೊಳಗೆ ಕೇಬಲ್‌ಗಳನ್ನು ತೆಗೆದುಹಾಕುವಂತೆ ಎಚ್ಚರಿಕೆಯನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com