ನೆಲಮಂಗಲದವರೆಗೆ ಮೆಟ್ರೋ ಸಂರ್ಪಕ ವಿಸ್ತರಿಸುವ ಪ್ರಸ್ತಾವನೆಯನ್ನು ಪರಿಶೀಲಿಸುತ್ತೇವೆ: ಸಿಎಂ ಸಿದ್ದರಾಮಯ್ಯ

ನೆಲಮಂಗಲದವರೆಗೆ ಮೆಟ್ರೋ ಸಂರ್ಪಕ ವಿಸ್ತರಿಸುವ ಕುರಿತ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನೆಲಮಂಗಲದವರೆಗೆ ಮೆಟ್ರೋ ಸಂರ್ಪಕ ವಿಸ್ತರಿಸುವ ಕುರಿತ ಪ್ರಸ್ತಾವನೆಯನ್ನು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಹೇಳಿದರು.

ಬೀರೇಶ್ವರ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸೇವಾ ಸಮಿತಿ ವತಿಯಿಂದ ಶ್ರೀ ಬೀರೇಶ್ವರ ಸಮುದಾಯ ಭವನ ಮತ್ತು ಪ್ರಾರ್ಥನಾ ಮಂದಿರ ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

ನೆಲಮಂಗಲ ಪಟ್ಟಣಕ್ಕೆ ಕುಡಿಯುವ ನೀರಿನ ಬೇಡಿಕೆ ಇದೆ. ನೆಲಮಂಗಲ ಸುತ್ತಮುತ್ತಲ ಪ್ರದೇಶಗಳ ಕೆರೆಗಳನ್ನು ತುಂಬುವ ವೃಷಭಾವತಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಯಿಂದ ನೀರಿನ ಅಂತರ್ಜಲ ಮಟ್ಟ ಹೆಚ್ಚಲಿದೆ. ಮೆಟ್ರೋ ಸಂಪರ್ಕವನ್ನು ನೆಲಮಂಗಲದವರೆಗೂ ವಿಸ್ತರಿಸುವ ಯೋಜನೆ ಸರ್ಕಾರ ಪರಿಶೀಲಿಸಲಿದೆ. ನೆಲಮಂಗಲದ ಒಳಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಬೆಂಗಳೂರು ಗ್ರಾಮಾಂತರ ಪ್ರದೇಶಗಳಿಗೆ ಕುಡಿಯುವ ನೀರಿನ ಬವಣೆ ನೀಗಿಸಲು ಮುಂದಿನ ವರ್ಷಗಳಲ್ಲಿ  ಎತ್ತಿನಹೊಳೆ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ತಿಳಿಸಿದರು.

ಮುಖ್ಯಮಂತ್ರಿಯಾಗಿ ಎಲ್ಲ ಧರ್ಮದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿಯನ್ನು ತುಂಬುವುದು ನಮ್ಮ ಗುರಿಯಾಗಿದೆ.  ಬಡವರಿಗೆ ಅಕ್ಕಿ, ಉಚಿತ ವಿದ್ಯುತ್, ಶಕ್ತಿ ಯೋಜನೆ,ಗೃಹಲಕ್ಷ್ಮಿ ಯೋಜನೆಗಳು ಯಾವುದೇ ಜಾತಿಧರ್ಮಕ್ಕೆ ಸೀಮಿತವಾಗಿಲ್ಲ. 1.14 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಜನರ ಕೈಗೆ ಬರುವ ದುಡ್ಡು, ಅವರ ಇತರೆ ಅವಶ್ಯಕತೆಗಳನ್ನು ಪೂರೈಸಿ, ಆರ್ಥಿಕತೆ ಹೆಚ್ಚುತ್ತದೆ. ಕೇವಲ ಶ್ರೀಮಂತರಲ್ಲದೇ, ಬಡವರು ಊಟಮಾಡುವಂತಾಗಬೇಕು, ಕರ್ನಾಟಕ ಹಸಿವುಮುಕ್ತ ರಾಜ್ಯವಾಗಬೇಕು. 1.30 ಕೋಟಿ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳಿಂದ ಲಾಭವಾಗಿದೆ. ಸಮಾಜ ನಿಂತ ನೀರಾಗದೆ ಬದಲಾವಣೆಯಾಗಬೇಕು. ಸಮಾಜಕ್ಕೆ ಚಲನೆ ದೊರೆತಾಗ ಆರ್ಥಿಕತೆ ಚುರುಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com