ಆಟೋ ಚಾಲಕನ ಹತ್ಯೆ ಪ್ರಕರಣ: 11 ಮಂದಿ ಆರೋಪಿಗಳ ಬಂಧನ

ಆಟೋ ಚಾಲಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  11 ಜನ ಆರೋಪಿಗಳನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಟೋ ಚಾಲಕನನ್ನು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  11 ಜನ ಆರೋಪಿಗಳನ್ನು ಬ್ಯಾಟರಾಯನಪುರ ಠಾಣಾ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಹಳೇ ಗುಡ್ಡದಹಳ್ಳಿಯ ಜನತಾ ಕಾಲೋನಿ ನಿವಾಸಿಗಳಾದ ಹರೀಶ್‌, ಮಧುಸೂದನ್‌, ಅರುಣ್‌, ಸುಭಾಷ್ ಅಲಿಯಾಸ್‌ ಡಿಗಾ, ಶ್ಯಾಮ್, ವಸಂತ್ ಕುಮಾರ್‌ ಅಲಿಯಾಸ್ ವಸಂತ್‌, ಎಡಿಸನ್‌, ಕಾರ್ತಿಕ್, ಮೈಸೂರು ರಸ್ತೆಯ ಸಂಜಯನಗರದ ಪ್ರಶಾಂತ್‌, ಟಿಂಬರ್ ಲೇಔಟ್‌ನ ಅಭಿ ಹಾಗೂ ವಿಠ್ಠಲ್‌ ನಗರದ ದಿಲೀಪ್ ಕುಮಾರ್‌ ಬಂಧಿತ ಆರೋಪಿಗಳಾಗಿದದಾರೆ. ಆರೋಪಿಗಳಿಂದ ಎರಡು ಬೈಕ್‌ಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಟಿಂಬರ್ ಲೇಔಟ್‌ನಲ್ಲಿ ಡಿ.5ರಂದು ರಾತ್ರಿ ಆಟೋ ಚಾಲಕ ಅರುಣ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಆರೋಪಿಗಳು ಪರಾರಿಯಾಗಿದ್ದರು.

ಈ ಮೊದಲು ಜನತಾ ಕಾಲೋನಿಯಲ್ಲಿ ಮೃತ ಅರುಣ್ ವಾಸವಾಗಿದ್ದ. ಆಗ ಆತನಿಗೆ ಹರೀಶ್ ಸೇರಿದಂತೆ ಆರೋಪಿಗಳ ಪರಿಚಯವಿತ್ತು. ಬಳಿಕ ತನ್ನ ವಾಸ್ತವ್ಯವನ್ನು ಸ್ಯಾಟಲೈಟ್‌ ಬಸ್‌ ಹಿಂಭಾಗದ ಏರಿಯಾಗೆ ಅರುಣ್ ಬದಲಾಯಿಸಿದ್ದ. ಈ ನಡುವಲ್ಲೇ ಕೆಲ ವಿಚಾರದಲ್ಲಿ ಹರೀಶ್ ಹಾಗೂ ಅರುಣ್ ನಡುವೆ ವೈಷಮ್ಯವಿತ್ತು. ಇತ್ತೀಚೆಗೆ ಹರೀಶ್ ವಿರೋಧಿಗಳ ಪರವಾಗಿ ಅರುಣ್ ಸಹಾಯ ಮಾಡುತ್ತಿದ್ದ. ಹರೀಶ್ ಮನೆ ಬಳಿ ಓಡಾಡುವುದು, ಆತನ ಬಗ್ಗೆ ವಿಚಾರಿಸುವುದನ್ನು ಮಾಡುತ್ತಿದ್ದ. ಈ ವಿಚಾರ ತಿಳಿದ ಹರೀಶ್, ಅರುಣ್ ಮೇಲೆ ಕೆಂಡಾಮಂಡಲಗೊಂಡಿದ್ದ.

ಇದರಂತೆ ಬುಧವಾರ ತನ್ನ ಸ್ನೇಹಿತರೊಂದಿಗೆ ಮದ್ಯಸೇವಿಸಿ ಅರುಣ್ ಮನೆ ಬಳಿ ಬಂದಿದ್ದ ಹರೀಶ್, ರಿಕೆ ಹಾಕಲು ಯತ್ನಿಸಿದ್ದ. ಈ ವೇಳೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ. ಹಲ್ಲೆ ಪರಿಣಾಮ ಅರುಣ್ ಸ್ಥಳದಲ್ಲೇ ಮೃತಪಟ್ಟಿದ್ದರು. ಘಟನೆ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com