ಭೂಮಿ ಮಾಲೀಕತ್ವ ಕುರಿತು ಗೊಂದಲ: 'ನಮ್ಮ ಮೆಟ್ರೋ' ಪಿಲ್ಲರ್ ಗಳ ಮೇಲೆ ತ್ಯಾಜ್ಯ ತೈಲ ಸುರಿದ ವ್ಯಕ್ತಿ, ಕಾಮಗಾರಿ ಸ್ಥಗಿತ

ಭೂಮಿ ಹಕ್ಕು ಸಾಧಿಸುತ್ತಿರುವ ಮಾಲೀಕನೊಬ್ಬ ಪರಿಹಾರದ ಹಣ ನನಗೆ ಸೇರಬೇಕೆಂದು ಆಗ್ರಹಿಸಿ ನಿರ್ಮಾಣ ಹಂತದ ನಮ್ಮ ಮೆಟ್ರೋದ ಪಿಲ್ಲರ್'ಗಳ ಮೇಲೆ ತ್ಯಾಜ್ಯ ಸುರಿದಿದ್ದು, ಇದರಿಂದ ಕಾಮಗಾರಿ ಕೆಲಸ ಸ್ಥಗಿತಗೊಂಡಿರುವ ಘಟನೆಯೊಂದು ಹೊರ ವರ್ತುಲ ರಸ್ತೆ ಮಾರ್ಗದ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.
ಮೆಟ್ರೋ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದು.
ಮೆಟ್ರೋ ನಿರ್ಮಾಣ ಕಾರ್ಯ ಸ್ಥಗಿತಗೊಂಡಿರುವುದು.

ಬೆಂಗಳೂರು: ಭೂಮಿ ಹಕ್ಕು ಸಾಧಿಸುತ್ತಿರುವ ಮಾಲೀಕನೊಬ್ಬ ಪರಿಹಾರದ ಹಣ ನನಗೆ ಸೇರಬೇಕೆಂದು ಆಗ್ರಹಿಸಿ ನಿರ್ಮಾಣ ಹಂತದ ನಮ್ಮ ಮೆಟ್ರೋದ ಪಿಲ್ಲರ್'ಗಳ ಮೇಲೆ ತ್ಯಾಜ್ಯ ಸುರಿದಿದ್ದು, ಇದರಿಂದ ಕಾಮಗಾರಿ ಕೆಲಸ ಸ್ಥಗಿತಗೊಂಡಿರುವ ಘಟನೆಯೊಂದು ಹೊರ ವರ್ತುಲ ರಸ್ತೆ ಮಾರ್ಗದ ಟಿನ್ ಫ್ಯಾಕ್ಟರಿ ಬಳಿ ನಡೆದಿದೆ.

ಪಿಲ್ಲರ್ ಗಳ ಮೇಲೆ ತ್ಯಾಜ್ಯ ತೈಲವನ್ನು ಸುರಿದು ಹಾಳು ಮಾಡಲಾಗಿದೆ. ಇದರಿಂದ ಬೆನ್ನಿಗಾನಹಳ್ಳಿ ಮತ್ತು ಕೆಆರ್ ಪುರ ನಡುವಿನ ಪಿಲ್ಲರ್ ಗಳೂ ಕೂಡ ನಾಶವಾಗುವ ಆತಂಕವಿದೆ. ಈ ಕಾರಣದಿಂದ ನಿರ್ಮಾಣ ಕಾಮಗಾರಿಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಭೂಸ್ವಾಧೀನದ ಜನರಲ್ ಮ್ಯಾನೇಜರ್ ಎಂ ಎಸ್ ಚನ್ನಪ್ಪ ಗೌಡರ್ ಮಾತನಾಡಿ, ಸೈಯದ್ ಫಯಾದ್ ಎಂಬುವವರು ಟಿನ್ ಫ್ಯಾಕ್ಟರಿಯಿಂದ ಕೆಆರ್ ಪುರದ ಕಡೆಗೆ 200 ಮೀಟರ್ ದೂರದಲ್ಲಿರುವ 3,762 ಚದರ ಮೀಟರ್ ಭೂಮಿಗೆ ಹಕ್ಕು ಸಾಧಿಸುತ್ತಿದ್ದಾರೆ. ಈ ಭೂಮಿಯನ್ನು ಬಿಎಂಆರ್'ಸಿಎಲ್ ಸ್ವಾಧೀನ ಪಡಿಸಿಕೊಂಡಿದೆ. 5 ಎಕರೆಯಲ್ಲಿ 1 ಎಕರೆ 20 ಗುಂಟಕ್ಕೆ ಮಾತ್ರ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೀಗ ಸೈಯದ್ ಅವರು ಹಿಂದಿನ ಮಾಲೀಕರಿಂದ ಭೂಮಿ ಖರೀದಿಸಿದ್ದೀರಿ. ನಿಜವಾದ ಮಾಲೀಕ ನಾನು. ಪರಿಹಾರದ ಹಣ ನನಗೆ ಮಾತ್ರ ನೀಡಬೇಕೆಂದು ಹೇಳುತ್ತಿದ್ದಾರೆಂದು ಹೇಳಿದ್ದಾರೆ.

<strong>ಹೊರ ವರ್ತುಲ ರಸ್ತೆಯ ಟಿನ್ ಫ್ಯಾಕ್ಟರಿ ಬಳಿಯಿರುವ ಮೆಟ್ರೋ ಪಿಲ್ಲರ್</strong>
ಹೊರ ವರ್ತುಲ ರಸ್ತೆಯ ಟಿನ್ ಫ್ಯಾಕ್ಟರಿ ಬಳಿಯಿರುವ ಮೆಟ್ರೋ ಪಿಲ್ಲರ್

ಒಂದು ವರ್ಷದ ಹಿಂದೆ ಕೂಡ ಫಯಾಜ್ ಅವರು ಮೆಟ್ರೋ ಕಾಮಗಾರಿಯನ್ನು ನಿಲ್ಲಿಸಿದ್ದರು. ಬಳಿಕ ಬಿಎಂಆರ್'ಸಿಎಲ್ ಇವರ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಕೆಲ ದಿನಗಳ ನಂತರ ಕಾಮಗಾರಿ ಕೆಲಸ ಮರಳಿ ಆರಂಭವಾಗಿತ್ತು. ಫಯಾಜ್ ಅವರು ಭೂಮಿ ಮಾಲೀಕತ್ವ ಪಡೆದುಕೊಳ್ಳುವ ವಿಚಾರ ಸಂಬಂಧ ಇನ್ನೂ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ, ನ್ಯಾಯಾಲಯ ಕಾಮಗಾರಿಗೆ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದು ತಿಳಿಸಿದ್ದಾರೆ.

ಭೂಮಿಗೆ ಪರಿಹಾರವಾಗಿ ರೂ.1 ಕೋಟಿ ನೀಡಲಾಗಿದೆ. ಆದರೆ, ವ್ಯಕ್ತಿ ಪರಿಹಾರ ಹಣಕ್ಕಾಗಿ ಆಗ್ರಹಿಸಿ ನಮ್ಮ ಕೆಲಸಕ್ಕೆ ಅಡ್ಡಿಯುಂಟು ಮಾಡಬಾರದು ಎಂದು ಹೇಳಿದರು.

ಇದಲ್ಲದೆ, ಫಯಾದ್ ನಾಲ್ಕು ಪಿಲ್ಲರ್ ಗಳ ಮೇಲೆ ನ್ಯಾಯಾಲಯದ ಪ್ರಕರಣಗಳ ಸಂಖ್ಯೆಯನ್ನೂ ಕೂಡ ಈ ಹಿಂದೆ ಬರೆದಿದ್ದರು ಎಂದು ಮೂಲಗಳು ತಿಳಿಸಿವೆ.

ಬಿಎಂಆರ್'ಸಿಎಲ್'ನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ರಾತ್ರಿ ವೇಳೆ ತನ್ನ ಸಹಚರರೊಂದಿಗೆ ಸ್ಥಳಕ್ಕೆ ಬರುವ ಫಯಾಜ್, ಕಾಮಗಾರಿ ಕೆಲಸ ಮಾಡುವ ಕಾರ್ಮಿಕರಿಗೆ ಬೆದರಿಕೆ ಹಾಕುತ್ತಿರುತ್ತಾನೆಂದು ಹೇಳಿದ್ದಾರೆ.

ಕಾಮಗಾರಿಗೆ ವಿರೋಧ ವ್ಯಕ್ತಪಡಿಸಲು ಪಿಲ್ಲರ್ ಗಳಿಗೆ ತ್ಯಾಜ್ಯ ತೈಲ ಸುರಿಯುವುದಕ್ಕೂ ಮುನ್ನಾ ದಿನ ಫಯಾಸ್ ಮೂರು ಟ್ರಕ್ ಗಳಲ್ಲಿ ತ್ಯಾಜ್ಯಗಳನ್ನು ತಂದು ಪಿಲ್ಲರ್ ಗಳ ಮುಂದೆ ಸುರಿದಿದ್ದ. ನಂತರ ಪಿಲ್ಲರ್ ಗಳ ಮೇಲೆ ತ್ಯಾಜ್ಯ ತೈಲ ಸುರಿದಿದ್ದ. ರೈಲು ಹಳಿಗಳಿಗೆ ಯು-ಗಿರ್ಡರ್‌ಗಳನ್ನು ಹಾಕಿರುವ ಭಾಗವನ್ನು ಇರಿಸಲು ಮೇಲಿನ ಪಿಯರ್ ಕ್ಯಾಪ್‌ಗೆ ಬೆಂಬಲವನ್ನು ಒದಗಿಸಲು ಮೆಟ್ರೋ ಪಿಲ್ಲರ್ ಸುತ್ತಲೂ ಬಲವರ್ಧನೆಯನ್ನು ನಿರ್ಮಿಸಲಾಗುತ್ತಿದೆ. ಈಗ ಅದರ ಮೇಲೆ ತ್ಯಾಜ್ಯ ತೈಲ ಸುರಿದಿರುವ ಕಾರಣ ಅದರ ಮೇಲೆ ಕಾಂಕ್ರೀಟ್ ಅಂಟಿಕೊಳ್ಳುವುದಿಲ್ಲ. ಇದೀಗ ಉಕ್ಕಿನ ಬಾರ್ ಗಳನ್ನು ತಂತಿಗಳೊಂದಿಗೆ ಜೋಡಿಸಿ, ಹೊಸ ರಚನೆಯನ್ನು ನಿರ್ಮಿಸಬೇಕಿದೆ. ಈ ಕೆಲಸಕ್ಕೆ ಇನ್ನೂ 10 ದಿನ ಬೇಕಾಗುತ್ತದೆ. ಈ ಕಾರ್ಯ ಆರಂಭಿಸಲು ಪೊಲೀಸಾ ಆಯುಕ್ತರನ್ನು ಸಂಪರ್ಕಿಸಬೇಕಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com