ಕಾಲೇಜಿನಿಂದ ಅಮಾನತು, ಬೇಸತ್ತು ವಿದ್ಯಾರ್ಥಿ ಆತ್ಮಹತ್ಯೆ; ಪೋಷಕರ ಆಕ್ರೋಶ

ಕಾಲೇಜಿನಿಂದ ಅಮಾನತು ಮಾಡಿದ ಕಾರಣಕ್ಕೇ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಲೇಜಿನಿಂದ ಅಮಾನತು ಮಾಡಿದ ಕಾರಣಕ್ಕೇ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಎಎಂಸಿ ಕಾಲೇಜು ವಿದ್ಯಾರ್ಥಿ(AMC College) ನಿಖಿಲ್ ಸುರೇಶ್ ಎಂಬ ವಿದ್ಯಾರ್ಥಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಎಎಂಸಿ ಕಾಲೇಜಿನಲ್ಲಿ ಪ್ರಥಮ‌ ವರ್ಷದ ಹೋಟೆಲ್ ಮೆನೇಜ್ಮೆಂಟ್ ವಿಭಾಗದಲ್ಲಿ ಓದುತ್ತಿದ್ದ ಎನ್ನಲಾಗಿದೆ. ನಿಖಿಲ್​ಗೆ ಕಳೆದ ಒಂದು ತಿಂಗಳಿಂದ ಕಾಲೇಜು‌ ಡೀನ್ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಜೊತೆಗೆ ನನ್ನಎದುರೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಇವೆಲ್ಲದರಿಂದ ಬೇಸತ್ತಿದ್ದ ನನ್ನ ಮಗ ಮನೆಯಲ್ಲಿದ್ದ ಮಾತ್ರೆಗಳನ್ನ ಸೇವಿಸಿದ್ದ. ಕೂಡಲೇ ನಾಗರಬಾವಿ(Nagarabhavi) ಯ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು‌ ಮಾಡಿದ್ದೆವು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾನೆ ಎಂದು ತಾಯಿ ಕಾಲೇಜು ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಲೇಜು ಆಡಳಿತ ಮಂಡಳಿ‌ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಇನ್ನು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿರುವ ನಿಖಿಲ್ ತಾಯಿ, ‘ಈ ರೀತಿ ಯಾರಿಗೂ ಆಗಬಾರದು, ತನ್ನ ಮಗನನ್ನು ಕಾಲೇಜಿನವರೆ ಕೊಂದರು. ಈ ಹಿಂದೆ ಬೇರೆ ರಾಜ್ಯದ ಒಂದು ಹುಡುಗಿಯನ್ನ ಇವನ ಜೊತೆಗೆ ಹಾಕಿದ್ದರು. ಅವಳಿಗೂ ನಮ್ಮ ಹುಡುಗನಿಗೂ ವ್ಯತ್ಯಾಸ ಆಗಿದೆ. ಈ ವಿಚಾರಕ್ಕೆ ನನ್ನ ಮಗನನ್ನು ಸ್ಪೆಸ್ಪೆಂಡ್ ಮಾಡಿದ್ದರು. ಹದಿನೈದು ದಿನ ಬಿಟ್ಟು ಕರೆದುಕೊಂಡು ಬನ್ನಿ ಎಂದಿದ್ದರು. ಮತ್ತೆ ಹೋದಾಗ ಅವಮಾನ ಮಾಡಿ, ನನ್ನ ಮುಂದೆಯೇ ಮಗನಿಗೆ ಹೊಡೆದರು. ಈ ಅವಮಾನವನ್ನು ತಾಳಲಾರದೇ ತನ್ನ ಮಗ ಸತ್ತು ಹೋದ ಎಂದಿದ್ದಾರೆ. ಇನ್ನು ಯಾರಿಗೂ ಈ ರೀತಿಯಲ್ಲಿ ಆಗಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಶಿಸ್ತಿನ ವರ್ತನೆ ಮೇರೆಗೆ ಅಮಾನತು: ಕಾಲೇಜು ಸ್ಪಷ್ಟನೆ
ಇನ್ನು ಮೃತ ನಿಖಿಲ್ ಸುರೇಶ್ ವರ್ತನೆಯಿಂದಲೇ ಆತನನ್ನು ಕಾಲೇಜಿನಿಂದ ಅಮಾನತು ಮಾಡಲಾಯಿತು ಎಂದು ಹೇಳಿಕೊಂಡಿದೆ. 'ಅವರ ವರ್ತನೆ, ಅಶಿಸ್ತು ಮತ್ತು ಕಾಲೇಜಿಗೆ ಗೈರುಹಾಜರಾದ ಕಾರಣ ಅವರನ್ನು ಸುಮಾರು ಒಂದು ತಿಂಗಳ ಹಿಂದೆ ಅಮಾನತುಗೊಳಿಸಲಾಗಿದೆ. ಇದರಿಂದ ಅಸಮಾಧಾನಗೊಂಡ ಆತ ಗುರುವಾರ ಕೆಲವು ಮಾತ್ರೆಗಳನ್ನು ಸೇವಿಸಿದ್ದಾರೆ, ಅದು ಅವರ ಸಾವಿಗೆ ಕಾರಣವಾಯಿತು" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೋಷಕರು ಸಂಬಂಧಿಗಳಿಂದ ಪ್ರತಿಭಟನೆ
ಕಾಲೇಜು ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಅವರ ಪೋಷಕರು ತಮ್ಮ ಮಗನಿಗೆ ನ್ಯಾಯ ಕೊಡಿಸುವಂತೆ ಶುಕ್ರವಾರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.ಅಮಾನತುಗೊಂಡ ನಂತರ, ಅವರು ತಮ್ಮ ತಾಯಿಯೊಂದಿಗೆ ಕಾಲೇಜು ಅಧಿಕಾರಿಗಳನ್ನು ಸಂಪರ್ಕಿಸಿ ಮರುಸೇರ್ಪಡೆಗೆ ಮನವಿ ಮಾಡಿದ್ದಾರೆ. ಸಂತ್ರಸ್ತ ನಿಖಿಲ್ ಕ್ಷಮೆಯಾಚಿಸಿದ್ದು, ಮತ್ತೊಂದು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ ಕಾಲೇಜು ಆಡಳಿತ ಮಂಡಳಿಯು ಈ ಬಗ್ಗೆ ಗಮನ ಕೊಡಲಿಲ್ಲ ಎಂದು ಆರೋಪಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com