ಚುನಾವಣೆ ಮೇಲೆ ಪ್ರಧಾನಿ ಮೋದಿ ಕಣ್ಣು: ಬಜೆಟ್‌ನಲ್ಲಿ ಪ್ರಸ್ತಾಪವಾದ ಏಕೈಕ ರಾಜ್ಯ ಕರ್ನಾಟಕ!

ಲೋಕಸಭೆಯಲ್ಲಿ 2023-24ನೇ ಸಾಲಿನ ಬಜೆಟ್'ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿದ್ದು, ಈ ಬಾರಿಯ ಬಜೆಟ್'ನಲ್ಲಿ ಪ್ರಸ್ತಾಪವಾದ ಏಕೈಕ ರಾಜ್ಯದ ಹೆಸರು ಎಂದರೆ ಅದು ಕರ್ನಾಟಕ.
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆಯಲ್ಲಿ 2023-24ನೇ ಸಾಲಿನ ಬಜೆಟ್'ನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆ ಮಾಡಿದ್ದು, ಈ ಬಾರಿಯ ಬಜೆಟ್'ನಲ್ಲಿ ಪ್ರಸ್ತಾಪವಾದ ಏಕೈಕ ರಾಜ್ಯದ ಹೆಸರು ಎಂದರೆ ಅದು ಕರ್ನಾಟಕ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ಎದುರಾಗುತ್ತಿದ್ದು, ಈ ಚುನಾವಣೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿದೆ ಎಂಬುದು ಇದರಿಂತ ತಿಳಿಯುತ್ತಿದೆ.

ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು, ಬರಗಾಲದಿಂದ ಪೀಡಿತ ಮಧ್ಯ ಕರ್ನಾಟಕ ಪ್ರದೇಶದ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಸೂಕ್ಷ್ಮ ನೀರಾವರಿ ಹಾಗೂ ಕುಡಿಯುವ ನೀರಿಗಾಗಿ ಕೆರೆ ತುಂಬಿಸುವ ಸಲುವಾಗಿ 5,300 ಕೋಟಿ ರೂ. ಕೇಂದ್ರ ಸಹಾಯಾನುದಾನ ನೀಡುತ್ತೇನೆಂದು ಘೋಷಣೆ ಮಾಡಿದರು.

ಒಂದು ರಾಜ್ಯದ ಹೆಸರನ್ನು ಉಲ್ಲೇಖಿಸಿದ್ದಷ್ಟೆ ಅಲ್ಲದೆ, ಒಂದು ರಾಜ್ಯಕ್ಕೆ ನಿರ್ದಿಷ್ಟವಾಗಿ ಘೋಷಣೆ ಮಾಡಿದ ಏಕೈಕ ಯೋಜನೆ ಇದಾಗಿದೆ.

ಈ ನಡುವೆ ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಿಸಿರುವುದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ನೀರಾವರಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com