ಏರೋ ಇಂಡಿಯಾ 2023: ಫೆಬ್ರವರಿ 14ಕ್ಕೆ ರಕ್ಷಣಾ ಮಂತ್ರಿಗಳ ಸಮಾವೇಶ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14ನೇ ಆವೃತ್ತಿಯ ಏರೋ ಇಂಡಿಯಾಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಭಾಗವಾಗಿ ರಕ್ಷಣಾ ಮಂತ್ರಿಗಳ ಸಮಾವೇಶವನ್ನು 2023ರ ಫೆಬ್ರವರಿ 14 ರಂದು ಆಯೋಜಿಸಲಾಗಿದೆ.
ಏರೋ ಇಂಡಿಯಾ 2023ಕ್ಕೆ ಸಿದ್ಧಗೊಂಡಿರುವ ಯಲಹಂಕ ವಾಯುನೆಲೆ.
ಏರೋ ಇಂಡಿಯಾ 2023ಕ್ಕೆ ಸಿದ್ಧಗೊಂಡಿರುವ ಯಲಹಂಕ ವಾಯುನೆಲೆ.
Updated on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 14ನೇ ಆವೃತ್ತಿಯ ಏರೋ ಇಂಡಿಯಾಗೆ ಕ್ಷಣಗಣನೆ ಆರಂಭವಾಗಿದ್ದು, ಇದರ ಭಾಗವಾಗಿ ರಕ್ಷಣಾ ಮಂತ್ರಿಗಳ ಸಮಾವೇಶವನ್ನು 2023ರ ಫೆಬ್ರವರಿ 14 ರಂದು ಆಯೋಜಿಸಲಾಗಿದೆ.

ಈ ಸಮಾವೇಶ ಏರೋ ಇಂಡಿಯಾ 2023ರಲ್ಲಿ ಭಾಗವಹಿಸಲಿರುವ ವಿದೇಶಿ ಮಿತ್ರ ರಾಷ್ಟ್ರಗಳ ರಕ್ಷಣಾ ಸಚಿವರುಗಳನ್ನು ಒಳಗೊಂಡಿರುತ್ತದೆ. ಸಮಾವೇಶದಲ್ಲಿ ರಕ್ಷಣಾ ವಲಯದಲ್ಲಿ ಹೆಚ್ಚಿನ ಭಾಗಿದಾರಿಕೆ ಮೂಲಕ ಸಮಾನ ಸಮೃದ್ಧಿ (ಸ್ಪೀಡ್) ಎಂಬ ವಿಶಾಲ ಧ್ಯೇಯದೊಂದಿಗೆ ನಡೆಸಲಾಗುತ್ತಿದೆ.

ಸಾಮರ್ಥ್ಯ ವೃದ್ಧಿಗಾಗಿ ಸಹಕಾರ ಸಂಬಂಧಗಳನ್ನು ಬಲವರ್ಧನೆಗೊಳಿಸುವುದು (ಹೂಡಿಕೆಗಳು, ಸಂಶೋಧನೆ ಮತ್ತು ಅಭಿವೃದ್ಧಿ, ಜಂಟಿ ಉದ್ಯಮ, ಸಹ-ಅಭಿವೃದ್ಧಿ, ಸಹ-ಉತ್ಪಾದನೆ ಮತ್ತು ನಿಬಂಧನೆಗಳ ಮೂಲಕ), ತರಬೇತಿ, ಬಾಹ್ಯಾಕಾಶ, ಕೃತಕ ಬುದ್ಧಿಮತ್ತೆ ಮತ್ತು ಸಾಗರ ಭದ್ರತೆಯೊಂದಿಗೆ ಎಲ್ಲರೂ ಒಗ್ಗೂಡಿ ಪ್ರಗತಿ ಸಾಧಿಸುವ ಉದ್ದೇಶ ಹೊಂದಲಾಗಿದೆ.

ಈ ಸಮಾವೇಶವು ಎಲ್ಲಾ ವಿದೇಶಿ ಮಿತ್ರ ರಾಷ್ಟ್ರಗಳು ಮತ್ತು ಭಾರತದ ರಕ್ಷಣಾ ಮಂತ್ರಿಗಳು ಒಂದೆಡೆ ಸೇರಲು ಮತ್ತು ಮುಂದಿನ ಪೀಳಿಗೆಗೆ ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯಕ್ಕಾಗಿ 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್' ಎಂಬ ಪ್ರಧಾನಿ ಮೋದಿ ಅವರ ದೂರದೃಷ್ಟಿಯನ್ನು ಕೊಂಡೊಯ್ಯಲು ಅವಕಾಶ ದೊರಕಲಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆತಡೆಗಳ ಹೊರತಾಗಿಯೂ ಭಾರತೀಯ ರಕ್ಷಣಾ ವಲಯವು ಭರವಸೆಯ ಪ್ರಗತಿ ಸಾಧಿಸಿದೆ. ಭವಿಷ್ಯದ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲು ಮತ್ತು ಅಭಿವೃದ್ಧಿಪಡಿಸಲು ಭಾರತವು ರಕ್ಷಣಾ ನಾವೀನ್ಯತೆ ಮತ್ತು ತಂತ್ರಜ್ಞಾನ ಸಂಯೋಜನೆಯತ್ತ ಹೆಚ್ಚಿನ ಗಮನವನ್ನು ಹರಿಸುತ್ತಿದೆ.

ಸ್ಥಳೀಯ ಉದ್ಯಮವನ್ನು ಉಳಿಸಿಕೊಳ್ಳಲು ದೇಶೀಯ ಅವಶ್ಯಕತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದರೂ, ರಕ್ಷಣಾ ಉತ್ಪಾದನೆ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಪರಸ್ಪರ ಸಮಾನ ಏಳಿಗೆಯನ್ನು ಖಾತ್ರಿಪಡಿಸಿಕೊಳ್ಳಲು ಭಾರತವು ಮಿತ್ರ ರಾಷ್ಟ್ರಗಳೊಂದಿಗೆ ಪಾಲುದಾರಿಕೆಯನ್ನು ಹೊಂದಲು ಬಯಸುತ್ತದೆ.

ವೈಮಾನಿಕ ಕ್ಷೇತ್ರದ ಬೆಳವಣಿಗೆಯು ಪರಿಣಾಮಕಾರಿಯಾಗಿದೆ ಮತ್ತು ಇತರ ಕ್ಷೇತ್ರಗಳು ಸಹ ಭಾರಿ ಪ್ರಮಾಣದ ವಿಸ್ತರಣೆಗೆ ಸಿದ್ಧವಾಗಿವೆ. ರಕ್ಷಣಾ ಪಡೆಗಳಿಂದ ಮಿಲಿಟರಿ ಉಪಕರಣಗಳ ಬೇಡಿಕೆಯಲ್ಲಿ ಭಾರಿ ಪ್ರಮಾಣದ ಏರಿಕೆಯೊಂದಿಗೆ ವೈಮಾನಿಕ ಮಾರುಕಟ್ಟೆಯು ಭಾರತದಲ್ಲಿ ವಿಸ್ತರಿಸುತ್ತಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com