ದೇಶದ ಮೊಟ್ಟ ಮೊದಲ ರ್ಯಾಪಿಡ್ ರಸ್ತೆಯಲ್ಲಿ ಬಿರುಕು, ಕಿತ್ತು ಬರುತ್ತಿರುವ ಕಾಂಕ್ರೀಟ್: ಬಿಬಿಎಂಪಿ ಕಳಪೆ ಕಾಮಗಾರಿ ಮತ್ತೊಮ್ಮೆ ಸಾಬೀತು!

ದೇಶದ ಪ್ರಥಮ ರ್ಯಾಪಿಡ್ ರಸ್ತೆ ಎಂದು ಬಿಬಿಎಂಪಿ ಬಿಂಬಿಸಿದ್ದ ರಸ್ತೆಯಲ್ಲಿ ಬಿರುಕುಗಳು ಕಂಡು ಬಂದಿದ್ದು, ಕಾಂಕ್ರೀಟ್ ಗಳು ಕಿತ್ತು ಬರುತ್ತಿದೆ. ಇದು ಬಿಬಿಎಂಪಿಯ ಕಳಪೆ ಕಾಮಗಾರಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ರಸ್ತೆಯಲ್ಲಿ ಕಂಡು ಬಂದಿರುವ ಬಿರುಕು.
ರಸ್ತೆಯಲ್ಲಿ ಕಂಡು ಬಂದಿರುವ ಬಿರುಕು.

ಬೆಂಗಳೂರು: ದೇಶದ ಪ್ರಥಮ ರ್ಯಾಪಿಡ್ ರಸ್ತೆ ಎಂದು ಬಿಬಿಎಂಪಿ ಬಿಂಬಿಸಿದ್ದ ರಸ್ತೆಯಲ್ಲಿ ಬಿರುಕುಗಳು ಕಂಡು ಬಂದಿದ್ದು, ಕಾಂಕ್ರೀಟ್ ಗಳು ಕಿತ್ತು ಬರುತ್ತಿದೆ. ಇದು ಬಿಬಿಎಂಪಿಯ ಕಳಪೆ ಕಾಮಗಾರಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಹಳೇ ಮದ್ರಾಸ್‌ ರಸ್ತೆಯಲ್ಲಿ 375 ಮೀಟರ್‌ ರಸ್ತೆಯನ್ನು ‘ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಕಾಂಕ್ರೀಟ್ ಪೇವ್‌ಮೆಂಟ್‌’ ತಂತ್ರಜ್ಞಾನದ ‘ರ‍್ಯಾಪಿಡ್‌ ರಸ್ತೆ’ಯನ್ನು ಪ್ರಾಯೋಗಿಕವಾಗಿ ನಿರ್ಮಿಸಲಾಗಿದೆ. ಈ ‘ರ‍್ಯಾಪಿಡ್‌ ರಸ್ತೆ’ ಮೂರ್ನಾಲ್ಕು ಕಡೆ ಬಿರುಕು ಬಿಟ್ಟಿರುವುದು ಕಂಡು ಬಂದಿದೆ.

ರಾಜಧಾನಿಯ ಹಳೆ ಮದ್ರಾಸ್ ರಸ್ತೆಯಲ್ಲಿ ಪ್ರಾಯೋಗಿಕ ಹಂತವಾಗಿ ರ್ಯಾಪಿಡ್ ರಸ್ತೆ ನಿರ್ಮಾಣ ಮಾಡಿತ್ತು. ಅಂದು ರಸ್ತೆಯಲ್ಲಿ ಭಾರೀ ವಾಹನ ಸಂಚಾರ ಮಾಡಿದರೂ ಶೇಕ್ ಆಗೋದಿಲ್ಲ ಎಂದು ಪಾಲಿಕೆ ತಿಳಿಸಿತ್ತು.  ಅಲ್ಲದೇ, ರಸ್ತೆ ನಿರ್ಮಾಣದ ವೆಚ್ಚ ಹೆಚ್ಚಾದರು ನಾವು ಮಾಡಿರೋ ರಸ್ತೆ ಫುಲ್ ಸ್ಟ್ರಾಂಗ್ ಇರಲಿದೆ ಎಂದು ತಿಳಿಸಿತ್ತು. ಆದರೆ ಕಳಪೆ ಗುಣಮಟ್ಟದ ಸಿಮೆಂಟ್ ಬಳಕೆಯಿಂದ ರಸ್ತೆ ಬಿರುಕು ಬಿಟ್ಟಿರುವ ಆರೋಪ ಸದ್ಯ ಕೇಳಿ ಬಂದಿದೆ. ಕೋಟಿ ಖರ್ಚು ಮಾಡಿ ರ್ಯಾಪಿಡ್ ಆಗಿ ಹಾಕಿದ್ದ 337.5 ಮೀಟರ್ ಉದ್ದದ ರ್ಯಾಪಿಡ್ ರಸ್ತೆಯಲ್ಲಿ ರ್ಯಾಪಿಡ್ ಆಗಿಯೇ ಬಿರುಕು ಮೂಡಿದೆ.

ನ.22ರಂದು ಕಾಮಗಾರಿ ಆರಂಭವಾಗಿದ್ದ ‍‘ರ‍್ಯಾಪಿಡ್‌ ರಸ್ತೆ’ಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.8ರಂದು ಉದ್ಘಾಟಿಸಿದ್ದರು. ‘ಎಂಜಿನಿಯರ್‌ಗಳು ಹೇಳಿದಂತೆ, ವೈಟ್‌ ಟಾಪಿಂಗ್‌ ರಸ್ತೆಗಿಂತ ಶೇ 40ರಷ್ಟು ಹೆಚ್ಚು ಹಣ ನೀಡಲು ಸಾಧ್ಯವಿಲ್ಲ. ಮೊದಲು ಇದರ ಸಾಮರ್ಥ್ಯ ಸಾಬೀತಾಗಲಿ. ನಂತರ ಮುಂದುವರಿಸುವ ಬಗ್ಗೆ ಚಿಂತಿಸೋಣ’ ಎಂದು ಬೊಮ್ಮಾಯಿ ಹೇಳಿದ್ದರು. ಅವರು ಹೀಗೆ ಹೇಳಿದ್ದ ಒಂದು ತಿಂಗಳೊಳಗೇ ‘ರ‍್ಯಾಪಿಡ್‌ ರಸ್ತೆ’ ಅಲ್ಲಲ್ಲಿ ಬಿರುಕುಬಿಟ್ಟಿದೆ.

ಹಳೆ ಮದ್ರಾಸ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರ ಸಾಧಕ-ಬಾಧಕಗಳನ್ನು ತಿಳಿಯಲು, ವಿನ್ಯಾಸ ಮತ್ತು ತಂತ್ರಜ್ಞಾನವನ್ನು ಸುಧಾರಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು ಎಂದು ತಂತ್ರಜ್ಞಾನದ ಪಾಲುದಾರನಾಗಿರುವ ಅಲ್ಟ್ರಾಟೆಕ್'ನ ಅಧಿಕಾರಿಗಳು ಹೇಳಿದ್ದಾರೆ.

ಬಿಬಿಎಂಪಿಯಿಂದ ಭಾರತೀಯ ವಿಜ್ಞಾನ ಸಂಸ್ಥೆ ಸಂಶೋಧಕರ ಮಾಹಿತಿಗಳ ಆಧಾರದ ಮೇಲೆ, ನಾವು ತಂತ್ರಜ್ಞಾನವನ್ನು ಸುಧಾರಿಸುತ್ತೇವೆ" ಎಂದು ಅಲ್ಟ್ರಾಟೆಕ್‌ನ ಎಂಜಿನಿಯರ್'ಗಳು ತಿಳಿಸಿದ್ದಾರೆ.

ಬಿಬಿಎಂಪಿ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ಅವರು ಪ್ರತಿಕ್ರಿಯೆ ನೀಡಿ, ಐಐಎಸ್ಸಿಯಿಂದ ವರದಿಗಳು ಬರಬೇಕಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com