ನಿಗದಿಪಡಿಸಿದ ಸ್ಮೋಕಿಂಗ್ ಪ್ರದೇಶಗಳಿಲ್ಲದ 392 ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಪಬ್‌ಗಳಿಗೆ ದಂಡ ವಿಧಿಸಿದ ಬಿಬಿಎಂಪಿ

2022ರ ಡಿಸೆಂಬರ್‌ನಲ್ಲಿ ಜಾರಿಯಾದ ವಿಶೇಷ ಅಭಿಯಾನದ ಅಡಿಯಲ್ಲಿ ಬಿಬಿಎಂಪಿಯು 392 ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಪಬ್‌ಗಳು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ತಮ್ಮ ಆವರಣದಲ್ಲಿ ಗೊತ್ತುಪಡಿಸಿದ ಸ್ಮೋಕಿಂಗ್ ಪ್ರದೇಶಗಳನ್ನು (ಡಿಎಸ್‌ಎ) ಹೊಂದಿಲ್ಲದ ಕಾರಣಕ್ಕೆ ದಂಡ ವಿಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: 2022ರ ಡಿಸೆಂಬರ್‌ನಲ್ಲಿ ಜಾರಿಯಾದ ವಿಶೇಷ ಅಭಿಯಾನದ ಅಡಿಯಲ್ಲಿ ಬಿಬಿಎಂಪಿಯು 392 ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಮತ್ತು ಪಬ್‌ಗಳು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ತಮ್ಮ ಆವರಣದಲ್ಲಿ ಗೊತ್ತುಪಡಿಸಿದ ಸ್ಮೋಕಿಂಗ್ ಪ್ರದೇಶಗಳನ್ನು (ಡಿಎಸ್‌ಎ) ಹೊಂದಿಲ್ಲದ ಕಾರಣಕ್ಕೆ ದಂಡ ವಿಧಿಸಿದೆ.

30ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯವಿರುವ ಎಲ್ಲಾ ರೆಸ್ಟೋರೆಂಟ್‌ಗಳು, ಬಾರ್‌ಗಳು ಅಥವಾ ಪಬ್‌ಗಳಿಗೆ ಗೊತ್ತುಪಡಿಸಿದ ಧೂಮಪಾನ ಪ್ರದೇಶಗಳನ್ನು ಬಿಬಿಎಂಪಿ ಕಡ್ಡಾಯಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಡೆಗಟ್ಟಲು ಅದರಲ್ಲೂ ಹೋಟೆಲ್, ಪಬ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಧೂಮಪಾನ ನಿಯಂತ್ರಣಕ್ಕೆ ತರಲು ಬಿಬಿಎಂಪಿ ಸ್ಮೋಕಿಂಗ್ ಝೂನ್ ನಿಯಮ ಜಾರಿಗೆ ತಂದಿತು.

ನಿಗದಿಪಡಿಸಿದ ಸ್ಮೋಕಿಂಗ್ ಪ್ರದೇಶದಲ್ಲಿ ಧೂಮಪಾನ ಮಾಡದ ಪ್ರದೇಶದಲ್ಲಿ ವ್ಯಾಪಿಸದಂತಿರಲು ಗಾಳಿಗಾಗಿ ಸ್ವಯಂಚಾಲಿತ ಬಾಗಿಲುಗಳು, ಎಕ್ಸಾಸ್ಟ್ ಫ್ಯಾನ್‌ಗಳು ಇರಬೇಕು. ಅದರ ನಾಲ್ಕು ಬದಿಗಳಲ್ಲಿಯೂ ಗೋಡೆಗಳಿಂದ ಆವೃತವಾಗಿರಬೇಕು. ಈ ಪ್ರದೇಶವು ಪ್ರವೇಶ ಮತ್ತು ನಿರ್ಗಮನ ದ್ವಾರದ ಬಳಿ ಇರಬಾರದು ಮತ್ತು 'ಧೂಮಪಾನ ಪ್ರದೇಶ' ಎಂದು ಸ್ಪಷ್ಟವಾಗಿ ಗುರುತಿಸಬೇಕು.

ನಗರದಲ್ಲಿ 2,385 ರೆಸ್ಟೋರೆಂಟ್‌ಗಳಿದ್ದು, 30ಕ್ಕೂ ಹೆಚ್ಚು ಆಸನಗಳ ಸಾಮರ್ಥ್ಯವನ್ನು ಹೊಂದಿದ್ದರೆ ಅವು ಪ್ರತ್ಯೇಕ ಸ್ಮೋಕಿಂಗ್ ಪ್ರದೇಶವನ್ನು ಹೊಂದಿರಬೇಕು ಎಂದು ಬಿಬಿಎಂಪಿ ಹೇಳಿದೆ. 392 ರೆಸ್ಟೋರೆಂಟ್‌ಗಳು, ಪಬ್‌ಗಳು, ಹೋಟೆಲ್‌ಗಳು ಅಥವಾ ತಿನಿಸುಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ಪ್ರತ್ಯೇಕ ಸ್ಮೋಕಿಂಗ್ ಪ್ರದೇಶವನ್ನು ಹೊಂದಿಲ್ಲ. ಹೀಗಾಗಿ ಇವುಗಳಿಗೆ ದಂಡ ವಿಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಎಲ್ಲಾ ತಿನಿಸುಗಳ ಅಂಗಡಿಗಳಿಗೆ 1,10,500 ರೂಪಾಯಿ ದಂಡ ವಿಧಿಸಲಾಗಿದೆ. ನಗರದ ಒಟ್ಟು ಹೋಟೆಲ್, ರೆಟ್ಸೋರೆಂಟ್‌ಗಳು ಮತ್ತು ಪಬ್‌ಗಳ ಪೈಕಿ 58 ಕಡೆಯಲ್ಲಿ ಮಾತ್ರ ಧೂಮಪಾನ ಪ್ರದೇಶವನ್ನು ಹೊಂದಿದ್ದವು  ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ಡಾ.ಕೆ.ವಿ. ತ್ರಿಲೋಕ್ ಚಂದ್ರ ತಿಳಿಸಿದ್ದಾರೆ.

ಬೃಹತ್ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ​​(ಬಿಬಿಎಚ್ಎ) ಅಧ್ಯಕ್ಷ ಪಿಸಿ ರಾವ್ ಮಾತನಾಡಿ, ಧೂಮಪಾನ ಮಾಡದ ಆಹಾರ ಸ್ಥಳಗಳಲ್ಲಿ ಕಡ್ಡಾಯವಾಗಿ ಧೂಮಪಾನ ಪ್ರದೇಶವನ್ನು ಹೊಂದಿರುವುದು ಸೂಕ್ತವಲ್ಲ. ಇದು ಹಲವಾರು ಆಹಾರ ಸ್ಥಳಗಳು ಧೂಮಪಾನ ರಹಿತ ಪ್ರದೇಶಗಳಿಗೆ ಬದಲಾಗಲು ಪ್ರಮುಖ ಕಾರಣವಾಗಿದೆ. ಧೂಮಪಾನವನ್ನು ಉತ್ತೇಜಿಸಲು ನಾವು ಬಯಸುವುದಿಲ್ಲವಾದ್ದರಿಂದ ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಾರಾಟ ಮಾಡುವ ಸ್ಥಳಗಳಲ್ಲಿ ಧೂಮಪಾನ ನಿಷೇಧ ವಲಯಗಳ ಉಪಕ್ರಮವನ್ನು ಬಿಬಿಎಚ್ಎ ಬೆಂಬಲಿಸುತ್ತದೆ ಎಂದು ಹೇಳಿದರು.

ಧೂಮಪಾನಕ್ಕೆ ಅವಕಾಶವೇ ಇಲ್ಲದ ಕಡೆಗಳಲ್ಲಿ ಸ್ಮೋಕಿಂಗ್ ಝೋನ್‌ಗಳನ್ನು ಕಡ್ಡಾಯಗೊಳಿಸದಂತೆ ಬಿಬಿಎಂಪಿಗೂ ಮನವಿ ಮಾಡಿದ್ದೇನೆ. ಪಬ್‌ಗಳು ಮತ್ತು ಬಾರ್‌ಗಳಲ್ಲಿ ಜನರು ಕುಡಿಯುವುದರಿಂದ ಆ ಸ್ಥಳಗಳು ರಾಡಾರ್ ಅಡಿಯಲ್ಲಿರಬೇಕು ಮತ್ತು ಸಾಮಾನ್ಯ ತಿಂಡಿ ತಿನಿಸು ಸ್ಥಳಗಳಲ್ಲ ಎಂದು ರಾವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com