ಬೆಂಗಳೂರು: ಕಾಲೇಜಿನಲ್ಲಿ ಮಹಿಳೆಯರ ಶೌಚಾಲಯಕ್ಕೆ ಅಕ್ರಮ ಪ್ರವೇಶ ಮಾಡಿದ 42 ವರ್ಷದ ವ್ಯಕ್ತಿ ಬಂಧನ

ಮಹಿಳಾ ಶೌಚಾಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ನಂತರ ಜಯನಗರ 4ನೇ ಬ್ಲಾಕ್‌ನಲ್ಲಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸಿದ 42 ವರ್ಷದ ವ್ಯಕ್ತಿಯನ್ನು ಘಟನೆ ನಡೆದ 13 ದಿನಗಳ ನಂತರ ಹನುಮಂತನಗರದಲ್ಲಿ ಬಂಧಿಸಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮಹಿಳಾ ಶೌಚಾಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ನಂತರ ಜಯನಗರ 4ನೇ ಬ್ಲಾಕ್‌ನಲ್ಲಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಭಯ ಹುಟ್ಟಿಸಿದ 42 ವರ್ಷದ ವ್ಯಕ್ತಿಯನ್ನು ಘಟನೆ ನಡೆದ 13 ದಿನಗಳ ನಂತರ ಹನುಮಂತನಗರದಲ್ಲಿ ಬಂಧಿಸಲಾಗಿದೆ. 

ಜಯನಗರ ಪೊಲೀಸರು ಸಿಸಿಟಿವಿ ಮೂಲಕ ಆರೋಪಿಯ ಚಲನವಲನಗಳನ್ನು ಪತ್ತೆ ಹಚ್ಚಿದ್ದಾರೆ. ಆರೋಪಿಯು ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿ ವಾಶ್ ರೂಂನಲ್ಲಿ ಆಕೆಯನ್ನು ಕೂಡಿಹಾಕಿ ಪರಾರಿಯಾಗಿದ್ದ. ಇದರಿಂದ ಉತ್ತಮ ಭದ್ರತೆ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

ಆರೋಪಿಯನ್ನು ಹನುಮಂತನಗರ 2ನೇ ಹಂತದ ಸುಂಕೇನಹಳ್ಳಿ ಎಕ್ಸ್‌ಟೆನ್ಶನ್ ನಿವಾಸಿ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ. ಆತನನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

'ಕುಮಾರ್ ಅದೇ ಕಾಲೇಜಿನ ಹಳೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಾನೆ. ದುಬೈನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿರುವುದಾಗಿಯೂ ಹೇಳಿಕೊಂಡಿದ್ದಾನೆ. ಆರೋಪಿಯು ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಲೇ ಇದ್ದಾನೆ ಮತ್ತು ಆತನ ಹೇಳಿಕೆಗಳು ನಿಜವೇ ಎಂಬುದನ್ನು ನಾವಿನ್ನು ಪತ್ತೆಹಚ್ಚಬೇಕಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ತನಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿವೆ ಮತ್ತು ಊಟದ ನಂತರ ಶೌಚಾಲಯವನ್ನು ಬಳಸಬೇಕು. ಘಟನೆಯ ದಿನ, ಅಲ್ಲಿ ಯಾರೂ ಇಲ್ಲದ ಕಾರಣ ಏನನ್ನೋ ತಿಂದು ಕಾಲೇಜಿನಲ್ಲಿ ಮಹಿಳಾ ಶೌಚಾಲಯಕ್ಕೆ ಬಂದಿದ್ದೆ. ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸುವ ಯಾವುದೇ ಉದ್ದೇಶವಿಲ್ಲ ಮತ್ತು ಆಕೆಯ ಬಾಯಿ ಮುಚ್ಚುವ ಮೂಲಕ ಕಿರುಕುಚುವುದನ್ನು ತಡೆಯಲು ಯತ್ನಿಸಿದೆ ಎಂದು ಆರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜನವರಿ 10 ರಂದು ಬೆಳಿಗ್ಗೆ 8 ಗಂಟೆಯ ಸುಮಾರಿಗೆ, ಕುಮಾರ್ ಅವರು ವಿದ್ಯಾರ್ಥಿನಿಯನ್ನು ವಾಶ್ ರೂಂನ ಗೋಡೆಗೆ ತಳ್ಳಿದ್ದರು ಮತ್ತು ಬೀಗ ಹಾಕಿದ್ದರು ಎಂದು ಆರೋಪಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಕಾಲೇಜು ಆವರಣದ ಹೊರಗೆ ಓಡಿಹೋಗುವುದನ್ನು ಸೆರೆಹಿಡಿದಿದೆ. 19 ವರ್ಷದ ಯುವತಿ ಮೂರನೇ ಸೆಮಿಸ್ಟರ್ ಪದವಿ ವಿದ್ಯಾರ್ಥಿನಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com