ಕೈಲಾಶ್ ಖೇರ್
ರಾಜ್ಯ
ಹಂಪಿ ಉತ್ಸವ 2023: ಕನ್ನಡ ಗೀತೆ ಹಾಡಲಿಲ್ಲವೆಂದು ಗಾಯಕ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆತ, ಇಬ್ಬರು ಪೊಲೀಸರ ವಶಕ್ಕೆ
ಹಂಪಿ ಉತ್ಸವದ ಸಮಾರೋಪ ಸಮಾರಂಭದ ವೇಳೆ ಕನ್ನಡ ಗೀತೆ ಹಾಡಲಿಲ್ಲವೆಂದು ಗಾಯಕ ಕೈಲಾಶ್ ಖೇರ್ ಅವರ ಮೇಲೆ ಕೆಲ ಕಿಡಿಗೇಡಿಗಳು ಬಾಟಲಿ ಎಸೆದ ಅಹಿತಕರ ಘಟನೆ ಭಾನುವಾರ ನಡೆದಿದೆ.
ವಿಜಯನಗರ: ಹಂಪಿ ಉತ್ಸವದ ಸಮಾರೋಪ ಸಮಾರಂಭದ ವೇಳೆ ಕನ್ನಡ ಗೀತೆ ಹಾಡಲಿಲ್ಲವೆಂದು ಗಾಯಕ ಕೈಲಾಶ್ ಖೇರ್ ಅವರ ಮೇಲೆ ಕೆಲ ಕಿಡಿಗೇಡಿಗಳು ಬಾಟಲಿ ಎಸೆದ ಅಹಿತಕರ ಘಟನೆ ಭಾನುವಾರ ನಡೆದಿದೆ.
ಪ್ರೇಕ್ಷಕರ ಗ್ಯಾಲರಿಯಿಂದ ಕೈಲಾಶ್ ಖೇರ್ ಮೇಲೆ ನೀರಿನ ಬಾಟಲಿ ಎಸೆಯಲಾಗಿದೆ. ಆದರೂ ಇದಕ್ಕೆ ಹಿಂಜರಿಯದ ಗಾಯಕ ಕೈಲಾಶ್ ಅವರು ತಮ್ಮ ಗಾಯನವನ್ನು ಮುಂದುವರೆಸಿದ್ದರೆಂದು ತಿಳಿದುಬಂದಿದೆ.
ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ